ಉಪ್ಪಿನಂಗಡಿ: ಇಲ್ಲಿಯ ಬಂದಾರು ಯುವಕ ಮುಹಮ್ಮದ್ ಇಕ್ಬಾಲ್ ದುಬೈಯ ಶಾರ್ಜದಲ್ಲಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಕರಿಸದೆ ಎರಡು ದಿನಗಳ ಹಿಂದೆ ನಿಧನ ಹೊಂದಿದರು. ಸುಮಾರು ಮೂರೂವರೆ ವರ್ಷದ ಹಿಂದೆ ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಿದ್ದ ಇವರಿಗೆ ತಿಂಗಳ ಹಿಂದೆ ಆರೋಗ್ಯದಲ್ಲಿ ಏರುಪೇರು ಕಂಡಿತ್ತು. ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಸ್ಮತಿ ಬರದೆ ಕೆಲವು ದಿನ ಕೋಮಾ ಸ್ಥಿತಿಯಲ್ಲಿದ್ದರೆನ್ನಲಾಗಿದೆ.ಇವರ ತಂದೆ ಇಬ್ರಾಹಿಮ್ ರವರು ಹಲವಾರು ವರ್ಷಗಳಿಂದ ಮಾನಸಿಕ ಅಸ್ವಸ್ತರಾಗಿದ್ದು .ತಾಯಿ ಹಾಗು ನಾಲ್ಕು ಸಹೋದರಿಯರು, ಎರಡು ಸಹೋದರರನ್ನು ಅಗಲಿದ್ದಾರೆ. ಇವರ ಇನ್ನೋರ್ವ ಸಹೋದರ ಹೊರದೇಶದಲ್ಲಿ ದುಡಿಯುತ್ತಿದ್ದಾರೆ. ಇವರ ಜನಾಝವನ್ನು ಕೆ ಸಿ ಎಫ್ ಸಂಘಟನೆಯ ಸಹಕಾರದೊಂದಿಗೆ ಜೂ 7ರಂದು ಸ್ವಂತ ಊರಾದ ಬಟ್ಲಡ್ಕಕ್ಕೆ ತರಲಾಗುವುದೆಂದು ತಿಳಿದು ಬಂದಿದೆ.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.