ಪುತ್ತಿಲ ಶ್ರೀರಾಮ ಗೆಳೆಯರ ಬಳಗದ ವತಿಯಿಂದ ವನಮಹೋತ್ಸವ-ಪರಿಸರ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ವತಿಯಿಂದ ವನಮಹೋತ್ಸವ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಮುಂಡೂರು ಗ್ರಾಮದ ಪಾಪೆತಡ್ಕದಲ್ಲಿ ನಡೆಯಿತು.

ಕರೆಮನೆಕಟ್ಟೆ ಹಾಲು ಉತ್ಪಾದಕ ಸಹಕಾರಿ ಸಂಘದ ಅಧ್ಯಕ್ಷೆ ಪುಷ್ಪಾ ಮೋಹನ ಕೇದಗೆದಡಿ ಮತ್ತು ಮುಂಡೂರು ಗ್ರಾ.ಪಂ ಸದಸ್ಯೆ ಅರುಣಾ ಅನಿಲ್ ಕುಮಾರ್ ಕಣ್ಣಾರ್ನೂಜಿಯವರು ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲರು ಸಾಲುಮರದ ತಿಮ್ಮಕ್ಕ ಅವರು ಪರಿಸರಕ್ಕೆ ನೀಡಿರುವ ಕೊಡುಗೆ ಮತ್ತು ಆದರ್ಶಗಳ ಬಗ್ಗೆ ವಿವರಿಸಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು.

ಮುಂಡೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಅನಿಲ್ ಕುಮಾರ್ ಕಣ್ಣಾರ್ನೂಜಿ ಹಾಗೂ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಬಿ.ಕೆ ಸಸಿ ವಿತರಣೆ ಮಾಡಿದರು. ನರಿಮೊಗರು ಮರಾಠಿ ಸಂಘದ ಅಧ್ಯಕ್ಷ ಮೋಹನ ಕೇದಗೆದಡಿ, ಎಪಿಎಂಸಿ ಮಾಜಿ ಸದಸ್ಯ ಸುಂದರ ನಾಯ್ಕ್ ಬಿ.ಕೆ, ಮೃತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಸದಸ್ಯ ಸೀತಾರಾಮ ಗೌಡ ಮುಂಡತೋಡಿ, ಶ್ರೀರಾಮ ಗೆಳೆಯರ ಬಳಗದ ಸದಸ್ಯರಾದ ಪ್ರಸಾದ್ ಬಿ.ಕೆ, ಪ್ರತೀಕ್ ಪುತ್ತಿಲ, ಸತೀಶ್ ಬಿ. ಕೆ, ಪುರಂದರ ನಡುಬೈಲು, ದಿನೇಶ್ ಬಿ.ಕೆ, ಪ್ರತೀಕ್ ನಾಡಾಜೆ, ರಾಧಾಕೃಷ್ಣ ಪುತ್ತಿಲ, ಅಭಿಷೇಕ್ ಕಲ್ಲಮ, ಯೋಗೀಶ್ ಕಲ್ಲಮ, ಅಶೋಕ್ ನಾಯ್ಕ್ ಪುತ್ತಿಲ, ಮೋನಪ್ಪ ಗುತ್ತಿನಪಾಲು, ದೀಕ್ಷಿತ್ ನಡುಬೈಲು, ಧನಂಜಯ ಕಲ್ಲಮ ಹಾಗೂ ಸ್ಥಳೀಯರಾದ ಕೊರಗಪ್ಪ ನಾಯ್ಕ್ ಬರೆಕೋಲಾಡಿ, ದಿವಾಕರ ಪುತ್ತಿಲ, ಧರ್ಣಪ್ಪ ನಡುಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here