ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಶ್ರೀ ದೇವರ ಶಿಲಾ ವಿಗ್ರಹ ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ- ಧಾರ್ಮಿಕ ಸಭೆ

0

ಕಾಣಿಯೂರು: ಮುರುಳ್ಯ ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದಲ್ಲಿ ಮೂಡಬಿದಿರೆ ಎನ್. ಕೇಶವ ತಂತ್ರಿಯವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರಿ ದೇವರ ಶಿಲಾ ವಿಗ್ರಹ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಜೂ 6ರಂದು ನಡೆಯಿತು. ಬೆಳಿಗ್ಗೆ ಆವಾಹಿತ ದೇವತಾ ಪೂಜೆ, ಪ್ರಧಾನ ಹೋಮ, ಪೂರ್ಣಾಹುತಿ, ಶಿಖರ ಪ್ರತಿಷ್ಠೆ, ಬೆಳಿಗ್ಗೆ 8.27ರ ಮಿಥುನ ಲಗ್ನದಲ್ಲಿ ಶ್ರಿ ದೇವರ ಶಿಲಾ ವಿಗ್ರಹ ಪ್ರತಿಷ್ಠೆ, ಜೀವನ್ಯಾಸ, ಆಯುಧನ್ಯಾಸ, ಶಕ್ತಿನ್ಯಾಸ, ಮಹಾಕುಂಭಾಭಿಷೇಕ, ಪ್ರಸನ್ನ ಪೂಜೆ, ವಿಧಿನಿಯಮಗಳ ವಾಗ್ದಾನ, ಅಲಂಕಾರ ಪೂಜೆ, ಮಹಾಪೂಜೆ, ಅಷ್ಟಾವಾಧನ ಸೇವೆ, ಪ್ರಾರ್ಥನೆ, ಲೋಕಾರ್ಪಣೆ, ಮಂತ್ರಾಕ್ಷತೆ, ಬ್ರಹ್ಮಾರ್ಪಣೆ, ಪ್ರಸಾದ ವಿತರಣೆ, ಸಂಜೆಶ್ರೀ ದೇವಿಗೆ ವಿಶೇಷ ದೀಪ ನಮಸ್ಕಾರ ಪೂಜೆ ನಡೆದು, ಭಜನಾ ಸಂಕೀರ್ತನೆ, ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ ಲಕ್ಷ್ಮಣ ಆಚಾರ್ಯ ಎಡಮಂಗಲರವರ ನೇತೃತ್ವದಲ್ಲಿ ಯಕ್ಷಗಾನ ಬಯಲಾಟ ನಡೆಯಿತು.

ಧಾರ್ಮಿಕ ಸಭೆ: ಜೂ 5ರಂದು ಸಂಜೆ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ರವೀಂದ್ರ ಆಚಾರ್ಯ ಇಳಂತಿಲ ವಹಿಸಿದ್ದರು. ವೇಲಾಪುರಿ ವಿಶ್ವನಾಥ ಶರ್ಮ ಬೇಲೂರು ಧಾರ್ಮಿಕ ಉಪನ್ಯಾಸ ನೀಡಿದರು. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ರಘುನಾಥ ರೈ ಕಟ್ಟಬೀಡು, ಮಂಗಳೂರು ಶ್ರೀ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಯಕರ ಪುರೋಹಿತ್, ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಜನಾರ್ದನ ಆಚಾರ್ಯ ಕಾಣಿಯೂರು, ಕಾರ್ಯಾಧ್ಯಕ್ಷ ವಸಂತ ಗೌಡ ನಡುಬೈಲು, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಪುರೋಹಿತ್ ಕುಕ್ಕಟ್ಟೆ, ಜಿ.ಪಂ. ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಸ್ಥಾನದ ಅನುವಂಶಿಕ ಮೊಕ್ತೇಸರರಾದ ಕುಕ್ಕಟ್ಟೆ ಜನಾರ್ದನ ಆಚಾರ್ಯ, ಜಿ.ಪಂ. ಮಾಜಿ ಸದಸ್ಯರಾದ ಪ್ರಮೀಳಾ ಜನಾರ್ದನ, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿಗಳಾದ ಪುರುಷೋತ್ತಮ ಆಚಾರ್ಯ ಕುಕ್ಕಟ್ಟೆ, ಚಿನ್ನಯ್ಯ ಆಚಾರ್ಯ ಕುಕ್ಕಟ್ಟೆ, ಗೋಪಾಲಕೃಷ್ಣ ಆಚಾರ್ಯ ಕುಕ್ಕಟ್ಟೆ, ರಮೇಶ ಆಚಾರ್ಯ ಕುಕ್ಕಟ್ಟೆ ಉಪಸ್ಥಿತರಿದ್ದರು. ಕುಕ್ಕಟ್ಟೆ ಶ್ರೀ ಕಾಳಿಕಾಪರಮೇಶ್ವರಿ ಭದ್ರಕಾಳಿ ದೇವಸ್ಥಾನದ ಆಡಳಿತ ಸಮಿತಿ ಧನಂಜಯ ಆಚಾರ್ಯ ಏನೆಕಲ್ಲು ಪ್ರಾಸ್ತಾವಿಕವಾಗಿ ಮಾತನಾಡಿದರು. ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಬಾಲಕೃಷ್ಣ ಆಚಾರ್ಯ ಮರೋಳಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಮಧುಚಂದ್ರ ಪಂಜ ವಂದಿಸಿದರು. ನಾರಾಯಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here