ಕಕ್ಕೂರು: ನಂದನ ನೂತನ ಪ್ರಗತಿಬಂಧು ತಂಡ ಉದ್ಘಾಟನೆ

0

ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಪುತ್ತೂರು ಬೆಟ್ಟಂಪಾಡಿ ವಲಯದ ಕಕ್ಕೂರು ಒಕ್ಕೂಟದಲ್ಲಿ ನಂದನ ಹೆಸರಿನ ನೂತನ ಪ್ರಗತಿಬಂದು  ತಂಡವನ್ನು ಜೂ.7 ರಂದು ಸಂದೀಪ್ ತಲೆಪ್ಪಾಡಿ ಇವರ ಮನೆಯಲ್ಲಿ ಉದ್ಘಾಟಿಸಲಾಯಿತು.
ಒಕ್ಕೂಟದ ಅಧ್ಯಕ್ಷ ಶಂಕರ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ವಲಯ ಮೆಲ್ವೀಚಾರಕ ಶಿವಪ್ಪ ಎಂ.ಕೆ ಯೋಜನೆಯ ನಿಯಮಗಳ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ನಂತರ ತಂಡಕ್ಕೆ ದಾಖಲಾತಿ ಪುಸ್ತಕ ಹಸ್ತಾಂತರಿಸಲಾಯಿತು. ತಂಡದ ಪ್ರಬಂಧಕರಾದ ಸಂದೀಪ್ ತಲೆಪ್ಪಾಡಿ, ಸಂಯೋಜಕರಾದ ಅಜಿತ್, ಕೋಶಾಧಿಕಾರಿ ಶರತ್, ಸದಸ್ಯರಾದ ಸತ್ಯನಾರಾಯಣ, ಹರ್ಷಿತ್ ರಾಜ್, ಶ್ರೀ ಮಾತಾ ಸ್ವಸಹಾಯ ಸಂಘದ ಸದಸ್ಯರಾದ ಚಂದ್ರಾವತಿ, ಸವಿತಾ, ಸೇವಾ ಪ್ರತಿನಿಧಿ ಪದ್ಮಾವತಿ. ಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here