ಪುತ್ತೂರು:ಸವಣೂರು ಆರೆಲ್ತಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಜೂ5ರಂದು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸವಣೂರು ಗ್ರಾ. ಪಂ. ಸದಸ್ಯ ತೀರ್ಥರಾಮ ಕೆಡೆಂಜಿಯವರು ಸುಮಾರು 21 ತೆಂಗಿನ ಗುಂಡಿಗಳನ್ನು ಉಚಿತವಾಗಿ ತೆಗೆಸಿ ವಿಶ್ವ ಪರಿಸರ ದಿನವನ್ನು ಆಚರಿಸಲು ಸಹಕರಿಸಿದ್ದ ತೀರ್ಥರಾಮರವರು ತೆಂಗಿನ ಗಿಡವನ್ನು ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪರಿಸರ ಕಾಳಜಿ ಮತ್ತು ಅರಿವಿನ ಬಗ್ಗೆ ಮಕ್ಕಳಿಗೆ ತಿಳಿಸಿದರು. ಸವಣೂರು ಗ್ರಾ. ಪಂ. ಮಾಜಿ ಸದಸ್ಯ ಪ್ರಕಾಶ್ ಕುದ್ಮನಮಜಲು ಗಿಡ ನೆಟ್ಟು ಶುಭ ಹಾರೈಸಿದರು. ಶಾಲಾ ಎಸ್ಡಿಎಂಸಿ ಸದಸ್ಯರು ಪೋಷಕರು ಹಾಗೂ ಶಿಕ್ಷಕರು ೨೧ ತೆಂಗಿನಗಿಡಗಳನ್ನು ನೀಡಿ ಸಹಕರಿಸಿದ್ದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ಕೆಡೆಂಜಿಮಾರು, ಅನುರಾಧ ಅರೆಲ್ತಡಿ, ದಿನೇಶ, ಸಫಿಯ ಆರೆಲ್ತಡಿ ಉಪಸ್ಥಿತರಿದ್ದರು. ಶಾಲಾ ಎಸ್ಡಿಎಂಸಿ ಸದಸ್ಯರು ಹಾಗೂ ಪೋಷಕರು ಗಿಡಗಳನ್ನು ನೆಡಲು ಸಹಕರಿಸಿದ್ದರು. ಮುಖ್ಯಗುರು ಜಗನ್ನಾಥ್ ಸ್ವಾಗತಿಸಿ, ಸಹ ಶಿಕ್ಷಕ ಶ್ರೀಕಾಂತ್ ಕಂಬಳಕೊಡಿ ವಂದಿಸಿದರು. ಗೌರವ ಶಿಕ್ಷಕಿ ಸಂಧ್ಯಾ ಆರೆಲ್ತಡಿ ಸಹಕರಿಸಿದ್ದರು.