ದರ್ಬೆತ್ತಡ್ಕ ಶಾಲಾ ನಾಯಕನಾಗಿ ಪುಷ್ಪರಾಜ್, ಉಪನಾಯಕನಾಗಿ ಜಿತೇಶ್.ಕೆ ಆಯ್ಕೆ

0

ನಿಡ್ಪಳ್ಳಿ;ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ದರ್ಬೆತ್ತಡ್ಕ  ಇಲ್ಲಿನ ಶಾಲಾ  ನಾಯಕನಾಗಿ 8 ನೇ ತರಗತಿಯ ಪುಷ್ಪರಾಜ್  ಹಾಗೂ ಉಪನಾಯಕನಾಗಿ 8 ನೇ ತರಗತಿಯ  ಜಿತೇಶ್ ಕೆ ಆಯ್ಕೆಯಾಗಿದ್ದಾರೆ. 
ಗೃಹ ಹಾಗೂ ರಕ್ಷಣಾ ಮಂತ್ರಿಯಾಗಿ  ಸೃಜನ್,  ಉಪ ಗೃಹ ಹಾಗೂ ಉಪ ರಕ್ಷಣಾ ಮಂತ್ರಿಯಾಗಿ ರತನ್ ಎಲ್. ಕೆ,   ಶಿಸ್ತು ಮಂತ್ರಿಯಾಗಿ  ವೈಶಾಲಿ ಎ, ಉಪ ಶಿಸ್ತು ಮಂತ್ರಿಯಾಗಿ ಪ್ರಕಾಶ್,  ಶಿಕ್ಷಣ ಹಾಗೂ ಗ್ರಂಥಾಲಯ ಮಂತ್ರಿಯಾಗಿ ಚಿಂತನ,   ಉಪ ಶಿಕ್ಷಣ ಹಾಗೂ ಉಪ ಗ್ರಂಥಾಲಯ ಮಂತ್ರಿಯಾಗಿ  ಲತಾಶ್ರೀ ಡಿ,  ಸ್ವಚ್ಛತಾ ಮಂತ್ರಿಯಾಗಿ ಪುಷ್ಪರಾಜ್,  ಉಪ ಸ್ವಚ್ಛತಾ ಮಂತ್ರಿಯಾಗಿ ಹಿತೇಶ್,  ನೀರಾವರಿ ಮಂತ್ರಿಯಾಗಿ  ಜಿತೇಶ್ ಕೆ, ಉಪ ನೀರಾವರಿ ಮಂತ್ರಿಯಾಗಿ ವಿನ್ಯಾಸ್ , ಕ್ರೀಡಾ ಮಂತ್ರಿಯಾಗಿ ಸಮೀಕ್ಷಾ, ಉಪ ಕ್ರೀಡಾ ಮಂತ್ರಿಯಾಗಿ  ಪ್ರಮೋದ್, ಆಹಾರ ಮಂತ್ರಿಯಾಗಿ ಬಬಿತ, ಉಪ ಆಹಾರ ಮಂತ್ರಿಯಾಗಿ  ನವೀತ್ ಕುಮಾರ್, ಆರೋಗ್ಯ ಮಂತ್ರಿಯಾಗಿ ಭರತ್ ಮಣಿಯಾಣಿ, ಉನಾಯಕಪ ಆರೋಗ್ಯಮಂತ್ರಿಯಾಗಿ ಸ್ಪಂದನ ಡಿ, ಸಾಂಸ್ಕೃತಿಕ ಮಂತ್ರಿಯಾಗಿ ಬಬಿತ,  ಉಪ ಸಾಂಸ್ಕ್ರತಿಕ ಮಂತ್ರಿಯಾಗಿ ಮೋಕ್ಷಿತಾ,  ಕೃಷಿ ಮಂತ್ರಿಯಾಗಿ  ಜಿತೇಶ್ ಕೆ,  ಉಪ ಕೃಷಿ ಮಂತ್ರಿಯಾಗಿ ಅಶ್ವಿತಾ,  ವಿರೋಧ ಪಕ್ಷದ ನಾಯಕನಾಗಿ ಭರತ್, ವಿರೋಧ ಪಕ್ಷದ ಉಪ ನಾಯಕನಾಗಿ ಸುಜಿತ್  ಆಯ್ಕೆಯಾಗಿದ್ದಾರೆ. ಶಾಲಾ ಚುನಾವಣೆ ಮೂಲಕ ಆಯ್ಕೆಯಾದ ಮಂತ್ರಿಗಳಿಗೆ  ಸಹಶಿಕ್ಷಕಿ ಶೋಭಾಕುಮಾರಿ  ಪ್ರಮಾಣ ವಚನ  ಬೋಧಿಸಿದರು. ಅತಿಥಿ ಶಿಕ್ಷಕಿ ನಳಿನಿ, ಎಸ್.ಡಿ.ಎಂ.ಸಿ ಸದಸ್ಯೆ ಹರ್ಷಿಣಿ, ಹಳೆ ವಿದ್ಯಾರ್ಥಿ ಗುರು ಪ್ರಸಾದ್ ಉಪಸ್ಥಿತರಿದ್ದರು.
   

LEAVE A REPLY

Please enter your comment!
Please enter your name here