ವಿಠ್ಠಲ್ ಜೇಸಿ ಪ್ಲೇ ಹೋಂ ನೂತನ ಕಟ್ಟಡ ‘ಜೇಸಿ ಕುಟೀರ’ ದ ಲೋಕಾರ್ಪಣೆ

 

ವಿಟ್ಲ:ವಿಠ್ಠಲ್ ಜೇಸಿ ಪ್ಲೇ ಹೋಂ ನೂತನ ಕಟ್ಟಡ ‘ಜೇಸಿ ಕುಟೀರ’ ವನ್ನು ಜೂ.6ರಂದು ಕಮಲಮ್ಮ ಕೂಡೂರು ರವರು ದೀಪಬೆಳಗಿಸುವ ಮೂಲಕ ಲೋಕಾರ್ಪಣೆ ಮಾಡಿದರು.

ಪ್ಲೇ ಹೋಂ ನ ಪುಟಾಣಿಗಳ ಒಳಾoಗಣ ಕ್ರೀಡಾ ಸಾಮಗ್ರಿಗಳನ್ನು ಜೆಸಿಐ ವಲಯ 15ರ ವಲಯ ಅಧ್ಯಕ್ಷರಾದ ರಾಯನ್ ಉದಯ ಕ್ರಾಸ್ತ ರವರು ಉದ್ಘಾಟಿಸಿದರು.

ಡಾ. ವಿಶ್ವೇಶ್ವರ ವಿ. ಕೆ.ರವರು ಪ್ಲೇ ಹೋಂ ಪುಟಾಣಿಗಳಿಗೆ ಶಾಲಾ ಬ್ಯಾಗ್ ವಿತರಿಸುವ ಮೂಲಕ ಶೈಕ್ಷಣಿಕ ಕಾರ್ಯಚಟುವಟಿಕೆಗಳನ್ನು ಉದ್ಘಾಟಿಸಿದರು.

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ  ಶಾಲಾ ಹಿರಿಯ ವಿದ್ಯಾರ್ಥಿನಿ ಅರ್ಷಿಯ ತನು ವಿಟ್ಲರವರು ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯನ್ನು ಉದ್ಘಾಟಿಸಿದ ಕಮಲಮ್ಮ ಕೂಡೂರು, ಜೆ ಸಿ ಐ ಸೆನ್ ರಾಯನ್ ಉದಯ ಕ್ರಾಸ್ತ, ಡಾಕ್ಟರ್ ವಿಶ್ವೇಶ್ವರ ವಿ. ಕೆ. ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಧರ್ ಶೆಟ್ಟಿ, ಜೊತೆ ಕಾಯದರ್ಶಿ ಪ್ರಕಾಶ್ ಕುಕ್ಕಿಲ, ಕೋಶಾಧಿಕಾರಿ ಪ್ರಭಾಕರ್ ಶೆಟ್ಟಿ ದoಬೆಕಾನ, ನಿರ್ದೇಶಕರಾದ ಮೋನಪ್ಪ ಶೆಟ್ಟಿ ದೇವಸ್ಯ, ಗೋಕುಲ್ ಶೇಟ್, ಹಸನ್ ವಿಟ್ಲ, ವಿಜಯ ಪಾಯಸ್, ಚಂದ್ರಹಾಸ ಕೊಪ್ಪಳ, ಪ್ರಾಂಶುಪಾಲರಾದ ಜಯರಾಮ ರೈ , ಉಪ ಪ್ರಾಂಶುಪಾಲೆಯರಾದ ಜ್ಯೋತಿ ಶೆಣೈ ಹಾಗೂ ಹೇಮಲತಾ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪ್ಲೇ ಹೋಂ ನ ಪುಟಾಣಿಗಳ ಹೆತ್ತವರಾದ ಶಶಿಕಲಾ, ಪುನೀತ್ ಮಾಡತ್ತಾರ್, ಮoಗೇಶ್ ಭಟ್ ರವರು ಸಂಸ್ಥೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ನೂತನ ಕಟ್ಟಡದ ಇಂಜಿನಿಯರ್, ವಿಟ್ಲದ ಶೆಲ್ಟರ್ ಅಸೋಸಿಯೇಟ್ ನ ಸಂತೋಷ್ ಶೆಟ್ಟಿ ಪೆಲ್ತಡ್ಕರವರನ್ನು ಸನ್ಮಾನಿಸಲಾತು. ಶಾಲಾ ಆಡಳಿತಾಧಿಕಾರಿಯಾದ ರಾಧಾಕೃಷ್ಣ ಎ.ರವರನ್ನು ಗುರುತಿಸಲಾಯಿತು.

ವಿಠ್ಠಲ್ ಎಜುಕೇಶನ್ ಸೊಸೈಟಿ ಯ ಅಧ್ಯಕ್ಷರಾದ ಎಲ್ ಎನ್ ಕೂಡೂರು ರವರು ಸ್ವಾಗತಿಸಿ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಮೋಹನ್ ಎ. ರವರು ವಂದಿಸಿದರು. ಸಹ ಶಿಕ್ಷಕಿಯಾದ ಸವಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಸ್ಕೌಟ್ ಮತ್ತು ಗೈಡ್ ವಿದ್ಯಾರ್ಥಿಗಳು ಸಹಕರಿಸಿದರು

ಬೆಳವಣಿಗೆ ಜೀವಂತ ವಸ್ತುವಿನ ಗುರುತು

ಮಕ್ಕಳ ಕಲರವ ಇನ್ನಿಲ್ಲಿ ಕೇಳಬಹುದು. ೪೯ದಿನಗಳ ಸತತ ಪ್ರಯತ್ನದ ಫಲವಾಗಿ ಈ ಒಂದು ಕುಟೀರ ನಿರ್ಮಣವಾಗಿದೆ. ಬೆಳವಣಿಗೆ ಜೀವಂತ ವಸ್ತುವಿನ ಗುರುತು. ಯಾವುದೇ ಒಂದು ಸಂಸ್ಥೆಯಲ್ಲಿ ಬೆಳವಣಿಗೆ ಅತೀ ಮುಖ್ಯ. ಇಂಟರ್ನಲ್ ಡೆವಲಪ್ ಮೆಂಟ್ ನೊಂದಿಗೆ ಎಕ್ಸಟ್ಸರ್ನಲ್ ಡೆವಲಪ್ ಮೆಂಟ್ ಗೆ ಕೂಡ ನಾವು ಬಹಳಷ್ಟು ಒತ್ತು ನೀಡುತ್ತೇವೆ. ಆರಂಭದ ದಿನಗಳಿಂದಲೂ ಸಂಸ್ಥೆ ಯಶಸ್ಸಿನ ಪಥದಲ್ಲಿ ಸಾಗುತ್ತಿದೆ. ಒಂದು ಮಗುವಿನ ಕೆರಿಯರನ್ನು ಬಿಲ್ಟ್ ಮಾಡಲು, ಅವರನ್ನು ಓರ್ವ ಸಮಾಜದ ಸತ್ಪ್ರಜೆಯನ್ನಾಗಿಸಲು ನಮ್ಮ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ನಮ್ಮ ಸಂಸ್ಥೆ ಹಲವಾರು ವರುಷಗಳಿಂದ ಎಸ್.ಎಸ್.ಎಲ್.ಸಿ.ಯಲ್ಲಿ ೧೦೦% ರಿಸಲ್ಟ್ ಅನ್ನು ನಿರಂತರವಾಗಿ ಪಡೆಯುತ್ತಿದೆ. ನಮ್ಮ ಮುಂದಿನ ಗುರಿ ರಾಜ್ಯದಲ್ಲಿ ಗುರುತಿಸಿವ ಶಿಕ್ಷಣಸಂಸ್ಥೆಯಾಗಿ ಹೊರಹೊಮ್ಮಬೇಕೆಂಬುದಾಗಿದೆ. ಕ್ಚಾಲಿಟಿ ಶಿಕ್ಷಣಕ್ಕೆ ನಾವು ಹೆಚ್ಚು ಒತ್ತು ನೀಡುತ್ತಿದ್ದೇವೆ‌. ಮಕ್ಕಳ ಪೋಶಕರಿಂದಲೂ ನಮಗೆ ಉತ್ತಮ ರೀತಿಯ ಸ್ಪಂದನೆ ದೊರೆತಿದೆ.- ಎಲ್.ಎನ್.ಕೂಡೂರು ಅಧ್ಯಕ್ಷರು ವಿಠ್ಠಲ್ ಎಜುಕೇಶನ್ ಸೊಸೈಟಿ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.