ಸೇಡಿಯಾಪು: ಬಿಜೆಪಿ ಮಹಾಶಕ್ತಿ ಕೇಂದ್ರ, ಒಬಿಸಿ ಮೋರ್ಚಾದಿಂದ ವಿಶ್ವಪರಿಸರ ದಿನಾಚರಣೆ

0

 

 

 

ಪುತ್ತೂರು:ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರ, ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ವಿಶ್ವ ಪರಿಸರ ದಿನವನ್ನು ಗಿಡ ನೆಡುವ ಮೂಲಕ ಬನ್ನೂರು ಗ್ರಾ.ಪಂ ಸದಸ್ಯ ಸೇಡಿಯಾಪು ಬದಿಯಡ್ಕ ಶೀನಪ್ಪ ಕುಲಾಲ್‌ರವರ ಮನೆಯಲ್ಲಿ ಆಚರಿಸಿದರು.

ಮುಖ್ಯ ಅತಿಥಿಯಾಗಿದ್ದ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್.ಸಿ ನಾರಾಯಣರವರು ಮಾತನಾಡಿ ವಿಶ್ವ ಪರಿಸರ ದಿನದ ಮಹತ್ವವನ್ನು ವಿವರಿಸಿದರು. ಉಪ್ಪಿನಂಗಡಿ ಶಕ್ತಿ ಕೇಂದ್ರದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುನೀಲ್ ದಡ್ಡು ಅಧ್ಯಕ್ಷತೆ ವಹಿಸಿದ್ದರು. ಉಪ್ಪಿನಂಗಡಿ ಬಿಜೆಪಿ ಮಹಾಶಕ್ತಿ ಕೇಂದ್ರದ ಸಂಚಾಲಕ ಪ್ರಸಾದ್ ಭಂಡಾರಿ, ಹಿರೆಬಂಡಾಡಿ ಶಕ್ತಿ ಕೇಂದ್ರದ ಸಂಚಾಲಕ ಚಿದಾನಂದ, ಸಹ ಸಂಚಾಲಕಿ ಸೌಮ್ಯ, ಬನ್ನೂರು ಗ್ರಾ.ಪಂ ಅಧ್ಯಕ್ಷೆ ಜಯಾ ಏಕ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ರಾಘವೇಂದ್ರ, ಹರಿಣಾಕ್ಷಿ, ಸುಪ್ರಿತಾ ಪ್ರಭು, ತಾ.ಪಂ ಮಾಜಿ ಸದಸ್ಯ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಬನ್ನೂರು ಬಿಜೆಪಿ ಬೂತ್ ಅಧ್ಯಕ್ಷ ರಮೇಶ ಪಾಳ್ತಿಜಾಲ್, ಕಾರ್ಯಕರ್ತರಾದ ಚಂದ್ರಶೇಖರ ಕುಲಾಲ್, ರಮೇಶದಾಸ ಕುಂಟ್ಯಾನ, ಡೀಕಯ್ಯ ಪೂಜಾರಿ ಕೆಮ್ಮಾಯಿ, ದಾಮೋದರ ಆಚಾರ್ಯ, ಗಂಗಾಧರ ಕುಲಾಲ್, ಮೋನಪ್ಪ ಕುಲಾಲ್ ಬದಿಯಡ್ಕ, ಉಪಸ್ಥಿತರಿದ್ದರು. ಮೇಘ ಪ್ರಾರ್ಥಿಸಿದರು. ಬನ್ನೂರು ಗ್ರಾ.ಪಂ ಸದಸ್ಯ ಶೀನಪ್ಪ ಕುಲಾಲ್ ಸ್ವಾಗತಿಸಿ, ಚಂದ್ರಶೇಖರ ಕಂಜೂರು ವಂದಿಸಿದರು. ಗಿರೀಶ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.

 

LEAVE A REPLY

Please enter your comment!
Please enter your name here