ಹಿಂ.ಜಾ.ವೇ ಮಂಗಳೂರು ವಿಭಾಗ ಸಹಸಂಯೋಜಕರಾಗಿ ಅಜಿತ್ ರೈ ಹೊಸಮನೆ‌ ನೇಮಕ

0

ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಮಂಗಳೂರು ವಿಭಾಗ ಸಹಸಂಯೋಜಕರಾಗಿ ಅಜಿತ್ ರೈ ಹೊಸಮನೆ ನೇಮಕಗೊ‌ಂಡಿದ್ದಾರೆ.‌ ಹಿಂ.ಜಾ.ವೇ ಪುತ್ತೂರು ನಗರ ಸಹ ಸಂಚಾಲಕರಾಗಿ, ಪುತ್ತೂರು ತಾಲೂಕು ಸಂಚಾಲಕರಾಗಿ, ಪುತ್ತೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದ ಅಜಿತ್ ರೈಯವರು ಇದೀಗ ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾ ವ್ಯಾಪ್ತಿಯನ್ನು ಒಳಗೊಂಡ ಮಂಗಳೂರು ವಿಭಾಗದ ಸಹ ಸಂಯೋಜಕರಾಗಿ ನೇಮಕಗೊಂಡಿದ್ದಾರೆ. ಬಂಟ್ವಾಳದ ಕಾರಿಂಜದಲ್ಲಿ ನಡೆದ ಹಿಂ.ಜಾ.ವೇ ವಿಭಾಗ ಮಟ್ಟದ ಯೋಜನಾ ಬೈಠಕ್ ನಲ್ಲಿ ಈ ನೇಮಕ ಮಾಡಲಾಗಿದೆ. ಒಳಮೊಗ್ರು ಗ್ರಾಮದ ಅಜ್ಜಿಕಲ್ಲು ನಿವಾಸಿಯಾಗಿರುವ ಅಜಿತ್ ರೈಯವರು ವೃತ್ತಿಯಲ್ಲಿ ಗುತ್ತಿಗೆದಾರರಾಗಿದ್ದಾರೆ.‌

LEAVE A REPLY

Please enter your comment!
Please enter your name here