ಪ್ರಧಾನಿ ನರೇಂದ್ರ ಮೋದಿ ಸರಕಾರದ 8 ವರ್ಷದ ಸಾಧನೆಗಳು ಜನರ ನಡುವೆ ಸಂಭ್ರಮ-ಪತ್ರಿಕಾಗೋಷ್ಠಿಯಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾದ 8 ವರ್ಷಗಳ ಆಡಳಿತಾವಧಿಯಲ್ಲಿ ಅನುಷ್ಠಾನಗೊಂಡಿರುವ ಅನೇಕ ಜನಪರ ಯೋಜನೆಗಳ ಬಗ್ಗೆ ಜನಮಾನಸದಲ್ಲಿ ಅರಿವು ಮೂಡಿಸುವ ಮೂಲಕ ‘ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಅಭಿಯಾನವನ್ನು ಆಚರಿಸಲಾಗುತ್ತಿದ್ದು, ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ಮೋರ್ಚಾಗಳ ಮೂಲಕ 10 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಹೇಳಿದರು.


ಪುತ್ತೂರು ಬಿಜೆಪಿ ಕಚೇರಿಯಲ್ಲಿ ಜೂ.7 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಸ್ವಾತಂತ್ರ್ಯಾ ನಂತರ ಮೋದಿ ಆಡಳಿತ ಪರಿಣಾಮಕಾರಿ ಬದಲಾವಣೆಗಳಿಂದಾಗಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ದೊರಕುವಂತಾಗಿದೆ. ಪ್ರಧಾನಿಯರು ದೇಶ್ ಬದಲ್‌ಗಯಾ ಎಂದು ಆರಂಭದಲ್ಲಿ ಹೇಳಿದ್ದರು. ಇವತ್ತು ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಈ ದೇಶದ ಪ್ರಧಾನಿಯ ಕಾರ್ಯವೈಖ್ಯರಿ ಅಕ್ಷರಶಃ ಸತ್ಯ ಎಂದು ಗೋಚರ ಆಗಿದೆ. ದೇಶದಲ್ಲಿ ಬದಲಾವಣೆ ಆಗಬೇಕಾಗಿದ್ದರೆ ಜನಸಂಘದ ದೀನ್‌ದಯಾಳ್ ಉಪಾಧ್ಯಯರು ಅಂತ್ಯೋದಯ ಕಲ್ಪನೆ ಕೊಟ್ಟಿರುವುದನ್ನು ಪ್ರಧಾನಿ ನರೇಂದ್ರ ಮೋದಿಯವರು ಅಳವಡಿಸಿಕೊಂಡು ದೇಶದಲ್ಲಿ ಏನೇನು ಬದಲಾವಣೆ ತರಬಹುದು ಎಂದು ಆತ್ಮನಿರ್ಭರ ಭಾರತ ಕಲ್ಪಣೆಯಡಿಯಲ್ಲಿ ಹತ್ತಾರು ಕಾರ್ಯಕ್ರಮ ಕೊಡುತ್ತಾರೆ. ಆ ಕಾರ್ಯಕ್ರಮಗಳು ಇವತ್ತು ಜನಸಾಮಾನ್ಯರನ್ನು ಸ್ವಾತಂತ್ರ್ಯ ಬಂದು 75ವರ್ಷಗಳ ನಂತರ ಸ್ವಾಭಿಮಾನಿ ವ್ಯಕ್ತಿಯಾಗಿ ರೂಪಿಸುವಲ್ಲಿ ಕಾರಣವಾಗಿದೆ. ಹಿಂದಿನ ಮನಮೋಹನ್ ಸಿಂಗ್ ಸರಕಾರ ಹತ್ತು ವರ್ಷ ಆಡಳಿತ ನಡೆಸಿದ್ದು, ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಮುಳುಗಿತ್ತು. ಇದರ ಪರಿಣಾಮವಾಗಿಯೇ ಜನ ಪರ್ಯಾಯ ನಾಯಕತ್ವವನ್ನು ಆರಿಸಿ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿದರು. 10 ವರ್ಷದಲ್ಲಿ ಯುಪಿಎ ಸರಕಾರದಲ್ಲಿ ಮಿತಿಮೀರಿದ ಭ್ರಷ್ಟಾಚಾರ ನಡೆದಿದ್ದರೆ, ಮೋದಿ ಅವರು 8 ವರ್ಷದಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲದೆ ಶುದ್ಧ ಸುಶಾಸನ ಕೊಟ್ಟಿದ್ದಾರೆ ಎಂದ ಅವರು. ಒಂದು ರೂಪಾಯಿ ಅನುದಾನ ಬಿಡುಗಡೆ ಮಾಡಿದರೆ ಅದರಲ್ಲಿ 15 ಪೈಸೆ ಮಾತ್ರ ಫಲಾನುಭವಿಗೆ ತಲುಪುತ್ತದೆ ಎಂದು ಹಿಂದೆ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ವಸ್ತುಸ್ಥಿತಿಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಇತಿಹಾಸ ನಮ್ಮ ಮುಂದಿದೆ. ಆದರೆ ಇವತ್ತು ಒಂದು ರೂಪಾಯಿ ಬಿಡುಗಡೆಯಾದರೆ ಪೂರ್ತಿ 1 ರೂ. ಫಲಾನುಭವಿಯ ಖಾತೆಗೆ ತಲುಪುತ್ತದೆ. ಅಷ್ಟರಮಟ್ಟಿಗೆ ಭ್ರಷ್ಟಾಚಾರ ನಿಗ್ರಹಗೊಂಡಿದೆ ಎಂದರು.

ಸಾಧನೆಗಳು:
ನೋಟು ಅಮಾನ್ಯೀಕರಣ, ಸರ್ಜಿಕಲ್ ಸ್ಟ್ರೈಕ್, ಶ್ರದ್ಧಾ ಬಿಂದುಗಳ ಪುನರುತ್ಥಾನ, ಕಾಶಿಯನ್ನು ಭವ್ಯ ಕಾಶಿ- ದಿವ್ಯ ಕಾಶಿ ಸೇರಿದಂತೆ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ನಡೆಯುತ್ತಿದೆ. ದೇಶದ ಅಖಂಡತೆ ಮತ್ತು ಏಕತೆಗೆ ಒತ್ತು ನೀಡಿ, ಕಾಶ್ಮಿರದಲ್ಲಿ ಸಂವಿಧಾನದ 370ನೇ ವಿಧಿ ರದ್ದುಪಡಿಸಲಾಗಿದೆ ಎಂದು ನುಡಿದರು. ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ತರಬೇಕೆಂಬ ಕನಸು ಇದೆ. ಇದರ ಜಾರಿಗೆ ಒಂದಷ್ಟು ಸಮಯಾವಕಾಶ ಬೇಕು. ಅದರ ಅಂಗವಾಗಿಯೇ ತ್ರಿವಳಿ ತಲಾಖ್ ರದ್ದುಪಡಿಸಲಾಗಿದೆ. ಕೃಷಿ ಕಾಯಿದೆ ಜಾರಿಗೊಳಿಸುವ ಬದ್ಧತೆ ಮೋದಿ ಸರಕಾರಕ್ಕಿದೆ. ಕಿಸಾನ್ ಸಮ್ಮಾನ್, ಫಸಲ್ ಬಿಮಾ, ಕೃಷಿ ಸಿಂಚಾ, ಉಜ್ವಲ್ ಯೋಜನೆ, ಭೇಟಿ ಬಚಾವೋ- ಭೇಟಿ ಫಡಾವೊ, ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ ವಿದ್ಯುದೀಕರಣ ಯೋಜನೆ ಮುಂತಾದ ಉತ್ತಮ ಯೋಜನೆಗಳನ್ನು ಮೋದಿ ಸರಕಾರ ಜಾರಿಗೆ ತಂದಿದೆ. ಹಿಂದೆ ಒಂದು ದಿನಕ್ಕೆ 15 ಕಿ.ಮೀ. ರಾ.ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದರೆ, ಈಗ 45ಕಿ.ಮೀ. ನಡೆಯುತ್ತಿದೆ. ಹಳ್ಳಿಯ ಸಾಧಕರಿಗೂ ಪದ್ಮಶ್ರೀಯಂಥ ಉನ್ನತ ಪುರಸ್ಕಾರಗಳು ಬರುತ್ತಿವೆ ಎಂಬುದು ಉತ್ತಮ ಆಡಳಿತವನ್ನು ತೋರಿಸುತ್ತಿದೆ. ಈ ಎಂಟು ವರ್ಷದ ಸಾಧನೆಯನ್ನು ಸರ್ವ ಸಾಮಾನ್ಯರಿಗೆ ಪ್ರಧಾನಿಯವರು ದಿನದ 18 ಗಂಟೆಯು ಕೆಲಸ ಮಾಡಿ ಜನಸ ಸೇವಕ ಎಂದು ತೋರಿಸಿದ್ದಾರೋ ಆ ರೀತಿಯಾಗಿ ಬಿಜೆಪಿ ಕಾರ್ಯಕರ್ತರು, ಜನಪ್ರತಿನಿಧಿಗಳು ಕೂಡಾ ನಿರಂತರ 14 ದಿನ ನಾವು ಈ ಕಾರ್ಯಕ್ರಮಗಳನ್ನು ಸಾಮಾನ್ಯ ಜನರಿಗೆ ತಲುಪಿಸಬೇಕೆಂದು ಮತ್ತು ಎಲ್ಲಾ ಕಾರ್ಯಕರ್ತರು ಸನ್ನದಾರಿಗೆ ಕಾರ್ಯಕ್ರಮ ಮಾಡಬೇಕು. ಬಿಜೆಪಿಯಲ್ಲಿ ರೈತ ಮೋರ್ಛಾ, ಯುವ ಮೋರ್ಛಾ, ಓಬಿಸಿ ಮೋರ್ಛಾ, ಮಹಿಳಾ ಮೋರ್ಛಾ ಸೇರಿದಂತೆ ನಾನಾ ಬಗೆಯ ವಿಭಾಗಗಳು ಮತ್ತು ಪ್ರಕೋಷ್ಟಗಳಿವೆ. ಇವೆಲ್ಲದರ ಮುಖ್ಯಸ್ಥರು ವೈವಿಧ್ಯಮಯ ಕಾರ್ಯಕ್ರಮಗಳನ್ನು ನಡೆಸಿ ಮೋದಿ ಸರಕಾರದ ಸುಶಾಸನದ ಬಗ್ಗೆ ಜನರಿಗೆ ಮನವರಿಕೆ ಮಾಡಲಿದ್ದಾರೆ ಎಂದರು. ಜಿಲ್ಲಾ ಉಪಾಧ್ಯಕ್ಷರೂ ಮತ್ತು ಸೇವೆ ಸುಶಾಸನ ಬಡವರ ಕಲ್ಯಾಣ ಕಾರ್ಯಕ್ರಮದ ಜಿಲ್ಲಾ ಸಂಚಾಲಕ ರಾಮದಾಸ್ ಬಂಟ್ವಾಳ್, ಗ್ರಾಮಾಂತರ ಸಂಚಾಲಕ ಬೂಡಿಯಾರ್ ರಾಧಾಕೃಷ್ಣ ರೈ, ಮಂಡಲ ಅಧ್ಯಕ್ಷ ಸಾಜಾ ರಾಧಾಕೃಷ್ಣ ಆಳ್ವಾ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಹಾಗು ನಗರ ಕಾರ್ಯಕ್ರಮದ ಸಂಚಾಲಕ ಯುವರಾಜ್ ಪೆರಿಯತ್ತೋಡಿ, ಮಾಜಿ ಪುರಸಭೆ ಅಧ್ಯಕ್ಷ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here