ನರೇಂದ್ರ ಮೋದಿ ನೇತೃತ್ವದ 8 ವರ್ಷದ ಕೇಂದ್ರ ಸರಕಾರದ ಆಡಳಿತದಲ್ಲಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ- ಬಿಜೆಪಿ ರೈತ ಮೋರ್ಚಾದಿಂದ ಸಾಧಕರಿಗೆ ಸನ್ಮಾನ

0

  • ನರೇಂದ್ರ ಮೋದಿಯರು ದೇಶಕ್ಕೆ ಪರಿವರ್ತನಾ ಯೋಜನೆ- ಸುದರ್ಶನ್ ಮೂಡಬಿದ್ರೆ
  • ಭ್ರಷ್ಟಾಚಾರ ಮುಕ್ತ ನಮ್ಮ ಸರಕಾರ – ಸಂಜೀವ ಮಠಂದೂರು
  • ಕೃಷಿಗಾಗಿ ಅಮೂಲಾಗ್ರ ಬದಲಾವಾಣೆ – ಶಿವಪ್ರಸಾದ್
  • ರೈತರಿಗೆ ಬಿಜೆಪಿ ಸರಕಾರ ಹಲವು ರೀತಿಯಲ್ಲಿ ಪ್ರೇರಣೆ ನೀಡಿದೆ – ಬೂಡಿಯಾರ್ ರಾಧಾಕೃಷ್ಣ ರೈ
  • ಬೇರೆ ಬೇರೆ ರೀತಿಯಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ – ಸಾಜ ರಾಧಾಕೃಷ್ಣ ಆಳ್ವ

ಪುತ್ತೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರ 8 ವರ್ಷ ಪೂರೈಸಿದ ಹಿನ್ನಲೆಯಲ್ಲಿ 14 ದಿನಗಳು ನಡೆಯುವ ಸೇವೆ, ಸುಶಾನ, ಬಡವರ ಕಲ್ಯಾಣ ಕಾರ್ಯಕ್ರಮಕ್ಕೆ ಪೂರಕವಾಗಿ ಪುತ್ತೂರು ಬಿಜೆಪಿ ಗ್ರಾಮಾಂತರ ಮತ್ತು ನಗರ ಮಂಡಲದ ಜಂಟಿ ಆಯೋಜನೆಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸಮಗ್ರ ರೈತ ಮಾಹಿತಿ ಕಾರ್ಯಾಗಾರ, ಕೃಷಿ ಸಾಧಕರಿಗೆ ಸನ್ಮಾನ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ 600 ಅಂಕಗಳಿಗೂ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುವ ಕಾರ್ಯಕ್ರಮ ಜೂ. 7ರಂದು ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ನಡೆಯಿತು.

 

ನರೇಂದ್ರ ಮೋದಿಯರು ದೇಶಕ್ಕೆ ಪರಿವರ್ತನೆ ತರುವ ಯೋಜನೆ ಕೊಟ್ಟರು
ಉದ್ಘಾಟನೆ ಮಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಅವರು ಮಾತನಾಡಿ ರೈತರಿಗೆ ಅತಿ ಹೆಚ್ಚು ಅನುದಾನ ಪುತ್ತೂರು ಕ್ಷೇತ್ರಕ್ಕೆ ಬಂದಿದೆ. ಇಂತಹ ಸಂದರ್ಭದಲ್ಲಿ ನರೇಂದ್ರ ಮೋದಿಯವರ 8ನೇ ವರ್ಷದ ಸಂಭ್ರಮವನ್ನು ಪಟಾಕಿ ಸಿಡಿಸಿ, ಸಿಹಿ ತಿಂಡಿ ಹಂಚುವುದಲ್ಲ. ಜನರ ನಡುವೆ ಹೋಗಿ ಕೇಂದ್ರ ಸರಕಾರದ ಯೋಜನೆಯನ್ನು ಜನರಿಗೆ ಮುಟ್ಟಿಸುವ ಕಾರ್ಯಕ್ರಮ ಮಾಡಬೇಕು. ಕೇವಲ ಅಧಿಕಾರದ ಗದ್ದುಗೆಗಾಗಿ ಬಿಜೆಪಿ ಸ್ಥಾಪನೆ ಆಗಿಲ್ಲ. ಜನರೊಂದಿಗೆ ಇರುವ ಅವರ ನೋವನ್ನು ತಿಳಿದು ಅವರಿಗೆ ಪರಿಹಾರ ನೀಡುವ ಕಾರ್ಯ ನಮ್ಮದಾಗಿದೆ. ಸೇವೆ ಅನ್ನುವಂತಹದನ್ನು ನಮ್ಮ ಕಾರ್ಯಕರ್ತರು ವ್ರತವಾಗಿ ಹಮ್ಮಿಕೊಂಡಿದ್ದಾರೆ. ಕೊರೋನಾ ಲೆಕ್ಕಿಸಿದೆ ಜನರ ಸೇವೆ ಮಾಡಿದ ಕಾರ್ಯಕರ್ತರನ್ನು ಅಭಿನಂದಿಸಬೇಕು ಎಂದರು. ಇವತ್ತು ಋಷಿ ಮತ್ತು ಕೃಷಿ ಪರಂಪರೆಗೆ ವಿಶೇಷ ಸಂಬಂಧವಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಈ ಪರಂಪರೆಯ ಬ್ರಿಟೀಷರ ಆಡಳಿತದಿಂದ ತೊಂದರೆಗೊಳಪಟ್ಟಿತ್ತು. ಸ್ವಾತಂತ್ರ್ಯದ ಬಳಿಕ ಕಾಂಗ್ರೆಸ್ ಸರಕಾರ ಕುಟುಂಬ ರಾಜಕಾರಣದಿಂದ ರೈತರ ಬಗ್ಗೆ ಗಮನ ಹರಿಸಿಲ್ಲ. ಆದರೆ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜೈ ಜವಾನ್ ಜೈ ಕಿಸಾನ್ ಗೆ ಅರ್ಥ ಬರುವ ರೀತಿಯಲ್ಲಿ ನರೇಂದ್ರ ಮೋದಿಯವರು ಯೋಜನೆ ತಂದರು. ಅವರು ದೇಶಕ್ಕೆ ಪರಿವರ್ತನೆ ತರುವ ಯೋಜನೆ ತಂದರು. ನಾನು ಕಡತಗಳಿಗೆ ಸಹಿ ಹಾಕುವ ಸಮಯದಲ್ಲಿ ಪ್ರಧಾನಿ ಉಳಿದ ಸಮಯದಲ್ಲಿ ನಾನು ಜನಸೇವಕ ಎಂದು ಹೇಳಿದ ಮೋದಿಯವರು ದೇಶದ ಅಭಿವೃದ್ಧಿಗೆ ಹಲವು ಯೋಜನೆ ತಂದರು. ಈಗಾಗಲೇ ಕಿಸಾನ್ ಕ್ರಿಡಿಟ್ ಕಾರ್ಡ್‌ನಲ್ಲಿ ರೈತರಿಗೆ ಸಮಾರು 3.40 ಕೋಟಿ ಸಾಲ ವಿತರಣೆ, ಮಣ್ಣಿನ ಆರೋಗ್ಯ ಕಾರ್ಡ್ 23ಕೋಟಿ ಜನರಿಗೆ ವಿತರಣೆ. ಯಡಿಯೂರಪ್ಪ ಸರಕಾರ ಇರುವಾಗ ರಾಜ್ಯದಲ್ಲಿ ಮೊತ್ತ ಮೊದಲ ಬಾರಿಗೆ ಕೃಷಿ ಬಜೆಟ್ ತರುವ ಮೂಲಕ ರೈತರ ಪರ ಬಿಜೆಪಿ ಸರಕಾರ ಕೆಲಸ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಅತೀ ಹೆಚ್ಚು ಕೃಷಿಕರಿರುವ ಕಾರ್ಯಕರ್ತರು ಇರುವುದು ಪುತ್ತೂರು ಮಂಡಲದಲ್ಲಿ ಎಂದರು.

 

ಭ್ರಷ್ಟಾಚಾರ ಮುಕ್ತ ನಮ್ಮ ಸರಕಾರ:
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಕೃಷಿ ಮಾಡುವವರು ಸ್ವಾಭಿಮಾನದ ಜೀವನ ಮಾಡಬೇಕೆಂಬುದು ಈ ದೇಶದ ಪ್ರಧಾನಿಯವರ ಚಿಂತನೆ. ಹಾಗಾಗಿ ರೈತರ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ಪ್ರಧಾನಿಯವರು ತಂದರು. ಇಂತಹ ಸಂದರ್ಭದಲ್ಲಿ ಸರಕಾರವು ಶಾಶ್ವತವಾಗಿ ಉಳಿಯಲು ರೈತರ ಸಹಕಾರ ಬೇಕು. ಯಾವಗ ರೈತರು ದೃಢ ನಿರ್ಧಾರ ತೆಗೆದು ಕೊಂಡು ಸರಕಾರಕ್ಕೆ ಬೆಂಬಲ ಕೊಡತ್ತಾರೋ ಆ ಸರಕಾರ ಶಾಶ್ವತವಾಗಿ ಆಡಳಿತ ನಡೆಸುತ್ತದೆ. ಯಾಕೆಂದರೆ ಇವತ್ತು ಕೇಂದ್ರದಿಂದ ಬರುವ ಹಣ ನೇರವಾಗಿ ಫಲಾನುಭವಿಗಳಿಗೆ ತಲುಪಬೇಕು. ಮಧ್ಯವರ್ತಿಗಳಿಲ್ಲದೆ ತಲುಪಬೇಕೆಂದು ಸರಕಾರದಿಂದ ಮನೆ, ಕೃಷಿ, ಸೇರಿದಂತೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಪರಿಹಾರ ನಿಧಿ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಆಗುತ್ತದೆ. ಒಂದು ಪೈಸೆಯೂ ದುರುಪಯೋಗ ಆಗುವುದಿಲ್ಲ. ಎಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿಲ್ಲ. ಇದನ್ನು ಮಾಡಿದವರು ಪ್ರಧಾನಿ ನರೇಂದ್ರ ಮೋದಿಯವರು ಎಂದರು. ಹಳ್ಳಿಯ ರೈತರೇ ಈ ದೇಶದ ಆತ್ಮ ಎಂದು ಗಾಂಧಿ ಹೇಳಿದ್ದರೂ ಇವತ್ತು ಸ್ವಾತಂತ್ರ್ಯ ಬಂದು ವರ್ಷಗಳು ಕಳೆದ ಬಳಿಕ ನರೇಂದ್ರ ಮೋದಿಯವರಿಂದ ಅದು ಕಾರ್ಯರೂಪಕ್ಕೆ ಬಂದಿದೆ ಎಂದ ಶಾಸಕರು ಸರಕಾರದ ಹಲವು ಯೋಜನೆಗಳ ಕುರಿತು ಮಾಹಿತಿ ನೀಡಿದರು.

ಕೃಷಿಗಾಗಿ ಅಮೂಲಾಗ್ರ ಬದಲಾವಾಣೆ:
ರಾಜ್ಯ ಬಿಜೆಪಿ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಅವರು ಮಾತನಾಡಿ ದೇಶದಲ್ಲಿ ಬೇರಾವ ಕ್ಷೇತ್ರ ನಿಂತರೆ ಪ್ರಳಯ ಆಗುವುದಿಲ್ಲ. ಕೃಷಿ ಕ್ಷೇತ್ರ ನಿಂತರೆ ಸಮಸ್ಯೆ ಆಗಲಿದೆ. ಈ ನಿಟ್ಟಿನಲ್ಲಿ ಕೃಷಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಅಮುಲಾಗ್ರ ಬದಲಾವಣೆ ತಂದರು ಎಂದ ಅವರು ಸರಕಾರದ ಸಾಧನೆಯನ್ನು ತಿಳಿಸಿದರು.

ರೈತರಿಗೆ ಬಿಜೆಪಿ ಸರಕಾರ ಹಲವು ರೀತಿಯಲ್ಲಿ ಪ್ರೇರಣೆ ನೀಡಿದೆ:
ಸೇವೆ ಸುಶಾನ, ಬಡವರ ಕಲ್ಯಾಣ ಕಾರ್ಯಕ್ರಮದ ಸಂಚಾಲಕರೂ ಮತ್ತು ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಬೂಡಿಯಾರ್ ರಾಧಾಕೃಷ್ಣ ರೈ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ರೈತರು ತಮ್ಮ ಉತ್ಪತಿಯನ್ನು ಇಮ್ಮುಡಿಗೊಳಸಬೇಕೆಂದು ಹಲವು ಯೋಜನೆಯನ್ನು ನೀಡಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆ, ವಿಮಾ ಯೋಜನೆ ಸೇರಿದಂತೆ ಹಲವಾರು ಕಾರ್ಯಕ್ರಮ ಮೋದಿ ಸರಕಾರ ನೀಡಿದೆ. ಇದನ್ನು ಜನರಿಗೆ ತಲುಪಿಸುವ ಮತ್ತು ಜನರಿಗೆ ಮಾಹಿತಿ ನೀಡುವ ಕೆಲಸವನ್ನು ಕಾರ್ಯಕರ್ತರು ಮಾಡುತ್ತಿದ್ದಾರೆ. ರೈತ ಮೋರ್ಚಾದಿಂದ ಇವತ್ತು ಆರಂಭದ ಕಾರ್ಯಕ್ರಮವಾಗಿ ಕೃಷಿ ಸಾಧಕರನ್ನು ಗೌರವಿಸುವ ಮೂಲಕ ಅವರಿಗೆ ಇನ್ನಷ್ಟು ಪ್ರೇರಣೆ ನೀಡುವ ಕೆಲಸ ಮಾಡಲಿದ್ದೇವೆ ಎಂದರು.

ಬೇರೆ ಬೇರೆ ರೀತಿಯಲ್ಲಿ ಕಾರ್ಯಕ್ರಮ ಮುಂದುವರಿಯಲಿದೆ:
ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಮಾತನಾಡಿ ಪ್ರಧಾನಿ ಮೋದಿಯವರ ಆಡಳಿತ 8 ವರ್ಷದ ಕಾರ್ಯಸಾಧನೆಗೆ ಪುತ್ತೂರು ವಿಧಾನ ಸಭಾಕ್ಷೇತ್ರದಲ್ಲಿ ಆರಂಭದ ಕಾರ್ಯಕ್ರಮವಾಗಿ ರೈತ ಮೋರ್ಚಾದಿಂದ ಹಮ್ಮಿಕೊಳ್ಳಲಾಗಿದ್ದು, ಮುಂದೆ ಇನ್ನೂ ಅದ್ಭುತ ಕಾರ್ಯಕ್ರಮ ಮೂಡಿ ಬರಲಿದೆ ಎಂದು ಕಾರ್ಯಕ್ರಮದ ಮಾಹಿತಿ ನೀಡಿದರು.

ಸಾಧಕರಿಗೆ ಸನ್ಮಾನ
ಪೇಟೆಯ ನಡುವೆ ಮನೆ ತಾರಸಿಯಲ್ಲಿ ತರಕಾರಿ, ಹಣ್ಣು ಹಂಪಲುಗಳ ಕೃಷಿ ಮಾಡುತ್ತಿರುವ ಪ್ರಫುಲ್ಲ ರೈ ಮತ್ತು ತೆಂಗು, ಅಡಿಕೆ ಮರ ಏರುವ ಕಾಯಕ ನಡೆಸಿ ಜೀವನ ಸಾಗಿಸುತ್ತಿರುವ ಸಾಧಕಿ ಗೀತಾ ಮತ್ತು ವಿವಿಧ ಕೃಷಿ ಚಟುವಟಿಕೆಯಲ್ಲಿ ಸಾಧನೆ ಮಾಡಿರುವ 102 ಮಂದಿ ವಿಶೇಷ ರೈತರು ಹಾಗೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೦೦ಕ್ಕೂ ಅಧಿಕ ಅಂಕ ಪಡೆದ 45 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಶರತ್‌ಚಂದ್ರ, ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕಾರಂತ್, ಪ್ರಧಾನ ಕಾರ್ಯದರ್ಶಿ ಪುನಿತ್ ಮಾಡತ್ತಾರು, ಉಪಾಧ್ಯಕ್ಷ ಬೆಳಿಯಪ್ಪ ಗೌಡ, ನಗರಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಮಹಾಲಿಂಗ ಪಾಟಾಳಿ, ಜಿಲ್ಲಾ ರೈತ ಮೋರ್ಚದ ಕಾರ್ಯದರ್ಶಿ ಕಿಶೋರ್ ಕುಮಾರ್, ರಾಮಚಂದ್ರ ಮಣಿಯಾಣಿ, ಮಹಾಬಲ ರೈ, ಗೋವರ್ದನ, ಅತಿಥಿಗಳನ್ನು ಗೌರವಿಸಿದರು. ಬಿಜೆಪಿ ಮಂಡಲದ ಉಪಾಧ್ಯಕ್ಷೆ ಉಷಾ ಮುಳಿಯ ಪ್ರಾರ್ಥಿಸಿದರು. ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸುರೇಶ್ ಕಣ್ಣಾರಾಯ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪುನಿತ್ ಮಾಡತ್ತಾರ್ ವಂದಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ ಮತ್ತು ನಿತೀಶ್ ಶಾಂತಿವನ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here