ಸಮಾಜದ ಬೆಳವಣಿಗೆ ಜೊತೆಗೆ ಸಂಘವು ಉತ್ತಮ ಸಹಕಾರಿಯಾಗಲಿ-ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ವಾರ್ಷಿಕ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

0

ಪುತ್ತೂರು: 21 ವರ್ಷಗಳ ಸೇವೆಯೊಂದಿಗೆ ಸ್ವಂತ ಕಟ್ಟಡದಲ್ಲಿ 3ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಎಪಿಎಂಸಿ ಮಾನಾಯಿ ಆರ್ಚ್‌ನಲ್ಲಿರುವ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಪ್ರಧಾನ ಕಚೇರಿಯಲ್ಲಿ ಜೂ.5ರಂದು ಗಣಪತಿ ಹೋಮ, ಲಕ್ಷ್ಮೀ ಪೂಜೆಯು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವೇ ಮೂ ಹರೀಶ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.

 


ಬಳಿಕ ನಡೆದ ಸರಳ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಸಹಕಾರಿ ಸಂಘವು ದಿನದಿಂದ ದಿನಕ್ಕೆ ಬೆಳೆಯುತ್ತ ಉತ್ತಮ ವ್ಯವಹಾರ ಮಾಡಿ ಸಮಾಜದ ಬೆಳವಣಿಗೆಯೊಂದಿಗೆ ಸಂಘವು ಉತ್ತಮ ಸಹಕಾರಿಯಾಗಿ ಬೆಳೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಚಿದಾನಂದ ಬೈಲಾಡಿ ಅವರು ಮಾತನಾಡಿ ಸಂಘದ ನೂತನ 8ನೇ ಮತ್ತು 9ನೇ ಶಾಖೆಯನ್ನು ಸವಣೂರು ವಲಯದಲ್ಲಿ ಹಾಗೂ ಬೆಳ್ಳಾರೆಯಲ್ಲಿ ಶೀಘ್ರವಾಗಿ ತೆರೆಯಲಾಗುವುದು ಮತ್ತು ಸಿಬ್ಬಂದಿಗಳನ್ನು ಹೆಚ್ಚಿಸಲು ಈಗಾಗಲೇ ಸಬಂಧಪಟ್ಟ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು. ಆಡಳಿತ ಮಂಡಳಿ ನಿರ್ದೇಶಕರಾದ ರಾಮಕೃಷ್ಣ ಗೌಡ ಕರ್ಮಲ, ಜಿನ್ನಪ್ಪ ಗೌಡ ಮಳವೇಲು, ಪ್ರವೀಣ್ ಕುಂಟ್ಯಾನ, ಸತೀಶ್ ಪಾಂಬಾರು, ಲೋಕೇಶ್ ಸಿ.ಎಚ್, ಸಂಘದ ಗೌರವ ಸಲಹೆಗಾರ ಶಿವರಾಮ ಗೌಡ ಇಡ್ಯಪೆ, ಮಾತೃ ಸಂಘದ ಕಾರ್ಯದರ್ಶಿ ಸುಂದರ ಗೌಡ ನಡುಬೈಲು, ಉಪಾಧ್ಯಕ್ಷ ರವಿ ಮುಂಗ್ಲಿಮನೆ, ಖಜಾಂಚಿ ಲಿಂಗಪ್ಪ ಗೌಡ ಕೆ, ಸಂಘದ ಪದಾಧಿಕಾರಿಗಳಾದ ದಯಾನಂದ ಕೆ.ಎಸ್, ವಾರಿಜ ಬೆಳಿಯಪ್ಪ ಗೌಡ, ಕಿಶೋರ್ ಬೇರಿಕೆ, ಕೆ.ಪಿ ಗೌಡ, ದೇವದಾಸ್ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ, ಯುವ ಸಂಘದ ಕಾರ್ಯದರ್ಶಿ ಸುಬ್ರಾಯ ಪಾಲ್ತಾಡಿ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ರಾಮದಾಸ್ ಗೌಡ, ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಮ್ಯಾನೇಜರ್ ಗಿರಿಧರ್ ಎಸ್, ಮಾಜಿ ನಿರ್ದೇಶಕಿ ಸಾವಿತ್ರಿ, ಪ್ರವರ್ತಕರಾದ ಗಣಪಣ್ಣ ಗೌಡ, ವಿದ್ಯಾರಶ್ಮಿ ಪ್ರಾಂಶುಪಾಲ ಸೀತಾರಾಮ ಕೇವಳ, ಆಂತರಿಕ ಲೆಕ್ಕಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್ ಕೆ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here