ಕರ್ನಾಟಕ ರಿಕ್ಷಾ ಚಾಲಕ-ಮಾಲಕರ ಸಂಘ: ಗೌರವಾಧ್ಯಕ್ಷ ಸಂಜೀವ ನಾಯಕ್ ಕಲ್ಲೇಗ, ಅಧ್ಯಕ್ಷ ಅರುಣ್ ಕುಮಾರ್ ರೈ ಸಂಪ್ಯ, ಪ್ರ.ಕಾರ್ಯದರ್ಶಿ ಮಹಮ್ಮದ್ ಪುತ್ತು

0

ಪುತ್ತೂರು:ಕರ್ನಾಟಕ ರಿಕ್ಷಾ ಚಾಲಕ ಮಾಲಕರ ಸಂಘದ ನೂತನ ಗೌರವಾಧ್ಯಕ್ಷರಾಗಿ ಸಂಜೀವ ನಾಯಕ್ ಕಲ್ಲೇಗ, ಅಧ್ಯಕ್ಷರಾಗಿ ಅರುಣ್ ಕುಮಾರ್ ರೈ ಸಂಪ್ಯ, ಪ್ರಧಾನ ಕಾರ್ಯದರ್ಶಿಯಾಗಿ ಮಹಮ್ಮದ್ ಪುತ್ತು ಅವರು ಆಯ್ಕೆಯಾಗಿದ್ದಾರೆ.

ಅನುರಾಗ ವಠಾರದಲ್ಲಿ ಇತ್ತೀಚೆಗೆ ನಡೆದ ಸಂಘದ 2022-23ನೇ ಸಾಲಿನ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.ಕಾನೂನು ಸಲಹೆಗಾರರಾಗಿ ಬಿ.ಪುರಂದರ ಭಟ್,  ನ್ಯಾಯವಾದಿ-ನೋಟರಿ ದೇವಾನಂದ ಕೆ., ಗೌರವ ಸಲಹೆಗಾರರಾಗಿ ಕೃಷ್ಣರಾಜ್ ವೈಲಾಯ ಇಡಬೆಟ್ಟು, ಸಲಹೆಗಾರರಾಗಿ ನಾಸೀರ್ ಇಡಬೆಟ್ಟು, ಗಿರೀಶ್ ನಾಯ್ಕ್ ಸೊರಕೆ, ಕಾರ್ಯಾಧ್ಯಕ್ಷರಾಗಿ ಕೆ.ಜಯರಾಮ ಕುಲಾಲ್, ಉಪಾಧ್ಯಕ್ಷರಾಗಿ ಚಿದಾನಂದ ಮಾಡಾವು ಮೊಟ್ಟೆತ್ತಡ್ಕ, ಅಝೀಜ್ ಮೊಟ್ಟೆತ್ತಡ್ಕ, ನಾರಾಯಣ ಗೌಡ, ಜೊತೆ ಕಾರ್ಯದರ್ಶಿಯಾಗಿ ಕೃಷ್ಣಪ್ಪ ಹೇರಡ್ಕ, ಕೋಶಾಧಿಕಾರಿ ಉದಯ ಕುಮಾರ್ ಪಂಜಳ ಆಯ್ಕೆಗೊಂಡಿದ್ದಾರೆ.

ಪಾರ್ಕ್ ಪ್ರಮುಖರು: ರಿಕ್ಷಾ ಪಾರ್ಕ್ ಪ್ರಮುಖರ ಆಯ್ಕೆಯಲ್ಲಿ ಮೊಟ್ಟೆತ್ತಡ್ಕದಲ್ಲಿ ಜಯರಾಮ ಆಚಾರ್ಯ, ಯತೀಶ್ ಸಂಪ್ಯ, ಸಂಪ್ಯ ಪಾರ್ಕ್‌ನಲ್ಲಿ ಫಾರೂಕ್ ಸಂಪ್ಯ, ಪ್ರಶಾಂತ್ ರೈ, ಗಿರಿಜಾ ಕ್ಲಿನಿಕ್ ಪಾರ್ಕ್‌ಗೆ ನಾರಾಯಣ ಗೌಡ, ಪಂಜಳ ಪಾರ್ಕ್‌ಗೆ ಎ.ಎಸ್ ರಝಾಕ್, ಅಬ್ದುಲ್ ರಝಾಕ್, ಧನ್ವಂತರಿ ಪಾರ್ಕ್‌ಗೆ ಕುಮಾರ್ ಎಮ್.ಉಮ್ಮರ್ ಸಂಪ್ಯ, ಕೂರ್ನಡ್ಕ ಪಾರ್ಕ್‌ಗೆ ಇಸುಬು ಕೂರ್ನಡ್ಕ ಅವರನ್ನು ಆಯ್ಕೆ ಮಾಡಲಾಯಿತು.ಉಳಿದಂತೆ ಸಂಜೀವ ಪೂಜಾರಿ ಪರ್ಪುಂಜ, ಹಮೀದ್ ಮೊಟ್ಟೆತ್ತಡ್ಕ, ನವೀನ್ ಪರ್ಪುಂಜ, ಚಂದಪ್ಪ ಗೌಡ, ಹಮೀದ್ ಬನ್ನೂರು ಅವರು ಸದಸ್ಯರಾಗಿ ಆಯ್ಕೆಗೊಂಡರು.

LEAVE A REPLY

Please enter your comment!
Please enter your name here