ಹಿರೆಬಂಡಾಡಿ: ಸರಕಾರಿ ಪ್ರೌಢಶಾಲೆ ಹಿರೆಬಂಡಾಡಿ ಇಲ್ಲಿನ ೨೦೨೨-೨೩ನೇ ಸಾಲಿನ ಶಾಲಾ ಸಂಸತ್ ಚುನಾವಣೆಯನ್ನು ಇವಿಎಂ ಆಪ್ ಮೂಲಕ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಲಲಿತಾ ಕೆ ಹಾಗೂ ವಿಜ್ಞಾನ ಶಿಕ್ಷಕ ಮನೋಹರ ಎಂ., ಇವರ ಮಾರ್ಗದರ್ಶನದಲ್ಲಿ ನಡೆಸಲಾಯಿತು.
ಶಾಲಾ ನಾಯಕನಾಗಿ ೧೦ನೇ ತರಗತಿಯ ಯತೀಶ, ಉಪನಾಯಕನಾಗಿ ೯ನೇ ತರಗತಿಯ ವಚನ್, ವಿಪಕ್ಷ ನಾಯಕಿಯಾಗಿ ಚೇತನ ಹಾಗೂ ವಿಪಕ್ಷ ಉಪನಾಯಕಿಯಾಗಿ ಫಾತಿಮಾ ಝಾಯಿದಾ ಆಯ್ಕೆಯಾದರು. ನಂತರ ನಡೆದ ಸಂಪುಟ ವಿಸ್ತರಣೆಯಲ್ಲಿ ಪ್ರತೀಕ್, ದೀಕ್ಷಿತ್ ಮತ್ತು ಗುರುಪ್ರಣಯ್(ಗೃಹಮಂತ್ರಿ), ತೀರ್ಥನ್, ಸುಮಂತ್, ಮನ್ವಿತ್ ಮತ್ತು ಜಿತೇಶ್(ನೀರಾವರಿ ಮಂತ್ರಿ), ಮಸೂದ, ಸಮೀಳ ಮತ್ತು ಸಾಜಿದಾ,(ವಾರ್ತಾಮಂತ್ರಿ), ಕೃಪಾ, ನೆಫಿಸತ್ ಮಿಶ್ರಿಯಾ ಮತ್ತು ಫಾತಿಮತ್ ಆಶಿಫಾ (ಸಾಂಸ್ಕೃತಿಕ ಮಂತ್ರಿ), ಸೌಮ್ಯ ಬಿ, ಮೇಘ, ಪ್ರಜ್ವಲ್ ಮತ್ತು ಶ್ರೀರಕ್ಷಾ(ಸ್ವಚ್ಛತಾ ಮಂತ್ರಿ), ಶ್ರಾವ್ಯ, ದಿಶ್ವಾಂತ್ ಮತ್ತು ದೀಪಕ್(ಆಹಾರ ಮಂತ್ರಿ), ಸೃಜನ್, ಚರಣ್ ಮತ್ತು ಜಯರಾಜ್(ಕ್ರೀಡಾ ಮಂತ್ರಿ), ಗೌತಮಿ, ವೀಕ್ಷ ಮತ್ತು ಮಾನ್ಯ(ಆರೋಗ್ಯ ಮಂತ್ರಿ), ಕೌಶಿಕ್, ನಿತನ್ ಕುಮಾರ್ ಮತ್ತು ವರ್ಷಿತ್(ತೋಟಗಾರಿಕಾ ಮಂತ್ರಿ), ಮಧುಶ್ರೀ, ಸಿಂಚನಾ, ಗ್ರೇಷ್ಮಾ ಮತ್ತು ಹಿತಸ್ವಿ(ಶಿಸ್ತು ಪಾಲನಾ ಮಂತ್ರಿ), ಮೋಕ್ಷಿತ್, ಮನೀಶ್ ಮತ್ತು ಹೇಮಂತ್(ಇಂಧನ ಮಂತ್ರಿ), ಫಾತಿಮತ್ ಸಫಾ, ನಿರ್ಮಿತಾ, ಚೈತ್ರಾ(ಶಿಕ್ಷಣ ಮಂತ್ರಿ), ಆಯಿಷತ್ ಮುನಝಹ(ಸಭಾಪತಿ), ಶ್ರೀವತ್ಸ(ಉಪಸಭಾಪತಿ),ಯಶ್ಮಿಮತ್ತು ಕಾವ್ಯಶ್ರೀ(ವಿಪಕ್ಷ ಸದಸ್ಯರು) ಇವರು ಆಯ್ಕೆಯಾಗಿರುತ್ತಾರೆ. ಶಾಸಕ ಸಂಜೀವ ಮಠಂದೂರುರವರು ಶಾಲಾ ಸಂಸತ್ತನ್ನು ಉದ್ಘಾಟಿಸಿದರು. ಮುಖ್ಯಶಿಕ್ಷಕಿ ವೇದಾವತಿ ಎ., ಪ್ರತಿಜ್ಞಾ ವಿಧಿ ಬೋಧಿಸಿ ಶುಭಹಾರೈಸಿದರು. ಶಿಕ್ಷಕರಾದ ಹರಿಕಿರಣ್ ಕೆ., ಸೀತಾರಾಮ ಗೌಡ ಬಿ., ವಸಂತ ಕುಮಾರ್ ಪಿ, ಅತಿಥಿ ಶಿಕ್ಷಕರಾದ ಶ್ವೇತಾ ಕುಮಾರಿ ಮತ್ತು ಆರತಿ ಸಹಕರಿಸಿದರು.