ವರ್ಣಕುಟೀರದಲ್ಲಿ ಬೇಬಿ ಸಿಟ್ಟಿಂಗ್ ದಾಖಲಾತಿ ಆರಂಭ

0

ಪುತ್ತೂರು: ಕಳೆದ 18 ವರ್ಷಗಳಿಂದ ಕಲಾ ಸೇವೆಯಲ್ಲಿ ತೊಡಗಿರುವ ಪುತ್ತೂರಿನ ವರ್ಣಕುಟೀರದಲ್ಲಿ ಹೊಸ ಯೋಜನೆಯಾಗಿ ಬೇಬಿ ಸಿಟ್ಟಿಂಗ್ ಆರಂಭಿಸಿದ್ದು, ಇದೀಗ ದಾಖಲಾತಿ ಪ್ರಾರಂಭಗೊಂಡಿದೆ.
ಕಲಾ ಸೇವೆಯಲ್ಲಿ ತೊಡಗಿಸಿಕೊಂಡ ಕಲ್ಲಾರೆಯಲ್ಲಿರುವ ವರ್ಣಕುಟೀರದಲ್ಲಿ ಹಲವು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಚಿತ್ರಕಲೆಯಲ್ಲಿ ಅಂತರಾಷ್ಟ್ರೀಯ ಮಟ್ಟ, ಕ್ಲೇಮಾಡೆಲಿಂಗ್‌ನಲ್ಲಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಚಿತ್ರಕಲೆ, ಕ್ಲೇಮಾಡೆಲಿಂಗ್, ಸುಗಮಸಂಗೀತ, ಕೀಬೋರ್ಡ್, ಡ್ಯಾನ್ಸ್ ತರಗತಿಗಳು ನಿರಂತರವಾಗಿ ನಡೆಯುತ್ತಿದ್ದು, ಇದೀಗ ಪುತ್ತೂರಿನ ಜನತೆಗೆ ಇನ್ನೊಂದು ಸೇವೆಯತ್ತ ಸಾಗುತ್ತಿದೆ. ಸಹಸಂಸ್ಥೆ ವರ್ಣಕುಟೀರ ಬೇಬಿ ಸಿಟ್ಟಿಂಗ್ ಅನ್ನು ಆರಂಬಿಸಿದೆ. ವಿಶಾಲವಾದ ಕೊಠಡಿ, ಉತ್ತಮ ಶಿಕ್ಷಕರ ಬಳಗ, ಆರೋಗ್ಯಕರ ಶಿಕ್ಷಣ, ಸಂಸ್ಕೃತಿ ಮತ್ತು ಕಲೆಯ ವಾತಾವರಣ ಕಲಿಕೆಗೆ ಪೂರಕವಾದ ಆಟಗಳು ಬೆಳಿಗ್ಗೆ ಗಂಟೆ 8 .30 ರಿಂದ ಸಂಜೆ ಗಂಟೆ 5.30ರ ತನಕ ಕಾರ್ಯನಿರ್ವಹಿಸಲಿದೆ. ಪುಟಾಣಿಗಳ ದಾಖಲಾತಿಗಾಗಿ ಮೊಬೈಲ್ ಸಂಖ್ಯೆ 9741502869, 7349349839 ಅನ್ನು ಸಂಪರ್ಕಿಸುವಂತೆ ವರ್ಣಕುಟೀರ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here