ತುಡರ್ ಯುವಕ ಮಂಡಲದಿಂದ ನನ್ಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ,ಅಭಿನಂದನಾ ಕಾರ್ಯಕ್ರಮ

0

ಕಾವು: ಜಿಲ್ಲಾ ಪ್ರಶಸ್ತಿ ಪುರಸ್ಕೃತ ತುಡರ್ ಯುವಕ ಮಂಡಲ(ರಿ) ನನ್ಯ ಕಾವು ಇವರಿಂದ ನನ್ಯ ಶಾಲಾ ಮಕ್ಕಳಿಗೆ ಉಚಿತ ಪುಸ್ತಕ ವಿತರಣೆ, ಅಂಗನವಾಡಿ ಪುಟಾಣಿಗಳಿಗೆ ಛತ್ರಿ ಮತ್ತು ಸ್ಲೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ನನ್ಯ ಇಲ್ಲಿ ಸುಮಾರು 28 ವರ್ಷಗಳ ಕಾಲ ಸಹಶಿಕ್ಷಕಿ ಹಾಗೂ ಪ್ರಭಾರ ಮುಖ್ಯಗುರುಗಳಾಗಿ ಸುದೀರ್ಘ ಸೇವೆ ಸಲ್ಲಿಸಿ ದ ಕ ಜಿಪಂ ಹಿರಿಯ ಪ್ರಾಥಮಿಕ ಶಾಲೆ ಕೆದಂಬಾಡಿ ಶಾಲೆಗೆ ಮುಖ್ಯ ಗುರುಗಳಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ನಾಗವೇಣಿ ಕೆ ಇವರಿಗೆ ಅಭಿನಂದನಾ ಕಾರ್ಯಕ್ರಮ ಜೂ 7 ರಂದು ನನ್ಯ ಶಾಲೆಯಲ್ಲಿ ನಡೆಯಿತು.

ತುಡರ್ ಯುವಕ ಮಂಡಲದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಮೂಡಿ ಬರಲಿ-ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟನೆಗೊಳಿದ ಅರಿಯಡ್ಕ ಗ್ರಾಮ ಪಂಚಾಯಿತ್ ಅಧ್ಯಕ್ಷರಾದ ಸೌಮ್ಯ ಬಾಲಸುಬ್ರಹ್ಮಣ್ಯ ಮುಂಡಕೊಚ್ಚಿ ತುಡರ್ ಯುವಕ ಮಂಡಲವು ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡು ಬಂದಿದ್ದು, ಈ ಸಾಲಿನ ನೂತನ ಅಧ್ಯಕ್ಷರಾದ ನವೀನ್ ನನ್ಯಪಟ್ಟಾಜೆ ಹಾಗೂ ಪದಾಧಿಕಾರಿಗಳ ತಂಡದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮ ಮೂಡಿ ಬರಲಿ, ಸುಮಾರು 28 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡಿ ಮುಖ್ಯಗುರುಗಳಾಗಿ ವರ್ಗಾವಣೆ ಗೊಂಡ ನಾಗವೇಣಿ ಅವರ ವೃತ್ತಿ ಜೀವನಕ್ಕೆ ಅಭಿನಂದನೆ ತಿಳಿಸಿ, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.



ಗುಣಾತ್ಮಕ ಶಿಕ್ಷಣದೊಂದಿಗೆ ಸಂಸ್ಕಾರ ರಯುತ ಧಾರ್ಮಿಕ ಶಿಕ್ಷಣಕ್ಕೂ ಒತ್ತು ನೀಡಿದವರು- ಹೇಮಲತಾ ಕಜೆಗದ್ದೆ
ನಾಗವೇಣಿ ಇವರಿಗೆ ಅಭಿನಂದನಾ ಕಾರ್ಯಕ್ರಮ ನೆರವೇರಿಸಿ ಅಭಿನಂದನಾ ಮಾತನ್ನಾಡಿದ ಬುಶ್ರಾ ಶಾಲಾ ಶಿಕ್ಷಕಿ ಹೇಮಲತಾ ಕಜೆಗದ್ದೆ ಸುಮಾರು 28 ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು ಕರ್ತವ್ಯದ ಅವಧಿಯಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣದ ಜೊತೆಯಲ್ಲಿಯೇ ಸಂಸ್ಕಾರಯುತ ಧಾರ್ಮಿಕ ಶಿಕ್ಷಣಕ್ಕೂ ಒತ್ತು ನೀಡಿ ಮಕ್ಕಳಲ್ಲಿ ಸಂಸ್ಕೃತಿ -ಸಂಸ್ಕಾರ ವನ್ನು ಮೂಡಿಸುವ ಪ್ರಯತ್ನ ಮಾಡುವುದರ ಜೊತೆಗೆ ಮಕ್ಕಳಲ್ಲಿ ಆಡಗಿರುವ ಸುಪ್ತ ಪ್ರತಿಭೆಯನ್ನು ಹೊರಸೂಸಲು ಪ್ರೇರೇಪಿಸಿ ಮಕ್ಕಳನ್ನು ಪ್ರತಿಭಾ ಕಾರಂಜಿ ,ಕಲೊತ್ಸವ ಮುಂತಾದ ಸ್ಪರ್ಧೆಗಲ್ಲಿ ಭಾಗವಹಿಸಲು ತರಬೇತಿಯನ್ನು ನಿರಂತರವಾಗಿ ನೀಡಿ,ಮಕ್ಕಳು ಕ್ಲಸ್ಟರ್ ,ತಾಲೂಕು, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದಲ್ಲೂ ಆಯ್ಕೆಯಾಗುವಂತೆ ಪ್ರಾಮಾಣಿಕವಾಗಿ ಶ್ರಮಿಸಿದರು, ಪ್ರಭಾರ ಮುಖ್ಯ ಗುರಗಳಾದ ಅವಧಿಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಹಾಗೂ ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮನೆ ಮನೆಗೆ ಭೇಟಿ ನೀಡಿ ಮಕ್ಕಳ ಪೋಷಕರಿಗೆ ಮಾಹಿತಿ ನೀಡಿ ಮಕ್ಕಳು ಸರಕಾರಿ ಶಾಲೆಗೆ ಬರುವಂತೆ ಪ್ರೇರಣೆ ನೀಡುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ, ಶಿಕ್ಷಕರು ವಿದ್ಯಾರ್ಥಿಗಳ ಕನಸಿಗೆ ದಾರಿದೀಪ,ಮಕ್ಕಳ ಜೀವನದಲ್ಲಿ ಶಿಕ್ಷಕರು ಬೆಳಕು ನೀಡುವವರು, ಇಂತಹ ಶ್ರೇಷ್ಠ ವೃತ್ತಿ ಯಲ್ಲಿ ಸೇವೆ ಸಲ್ಲಿಸಿ ಇದೀಗ ಮುಖ್ಯಗುರುಗಲಾಗಿ ಭಡ್ತಿಗೊಂಡ್ಡಿದ್ದು ಇವರ ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆಗೆ ದೊರೆತ ಗೌರವವಾಗಿದೆ ಎಂದರು.

ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಪ್ರಯತ್ನ ಸ್ಥಳಿಯ ರಿಂದಾಗಬೇಕು ಆಗಬೇಕು- ನಾಗವೇಣಿ ಕೆ
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನಾಗವೇಣಿರವರು ನನ್ಯ ಶಾಲೆಗೆ ಮಕ್ಕಳ ದಾಖಲಾತಿ ಕಡಿಮೆ ಕೊಳ್ಳುತಿದ್ದು ಪೋಷಕರ ಮನವೊಲಿಸಿ ಮಕ್ಕಳನ್ನು ಈ ಶಾಲೆಗೆ ಸೇರಿಸುವ ಮೂಲಕ ನಮ್ಮೂರಿನ ಶಾಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಊರಿನವರಿಂದ ಆಗಬೇಕು, ತನ್ನ ಶಿಕ್ಷಣ ವೃತ್ತಿ ಈ ಶಾಲೆಯಿಂದಲೇ ಆರಂಭಗೊಂಡಿದ್ದು ,ನನ್ಯ ಶಾಲೆ ತನ್ನ ತವರು ಮನೆ ಎಂಬುವ ಪ್ರೀತಿಯ ಭಾವನೆಯನ್ನು ಮೂಡಿಸಿದೆ. ತುಡರ್ ಯುವಕ ಮಂಡಲ ಆರಂಭದಿಂದಲೂ ಶಾಲೆಗೆ ಬೇರೆ ಬೇರೆ ರೂಪಗಳಲ್ಲಿ ಹಲವಾರು ಕೊಡುಗೆಗಳನ್ನು ನೀಡಿದ್ದು ಮುಂದೆಯೂ ನಿಮ್ಮೆಲ್ಲರ ಪೂರ್ಣ ಸಹಕಾರ ಶಾಲೆಯ ಮೇಲಿರಲಿ, ಯುವಕ ಮಂಡಲ ಇನ್ನಷ್ಟು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ರಾಜ್ಯ,ರಾಷ್ಟ್ರ ಮಟ್ಟದಲ್ಲಿ ತಮ್ಮ ಹೆಸರನ್ನು ಪಸರಿಸಲಿ ಎಂದರು. ಹಾಗೂ ಅಭಿನಂದಿಸಿದ ಎಲ್ಲರಿಗೂ ಕ್ರತಜ್ಞತೆ ಸಲ್ಲಿಸಿದರು.


ಶಿಕ್ಷಣವನ್ನು ಪ್ರೋತ್ಸಾಹಿಸುವ ಯುವಕ ಮಂಡಲದ ಕಾರ್ಯ ಶ್ಲಾಘನೀಯ – ಲೋಕೇಶ್ ಚಾಕೋಟೆ
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿದ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಲೋಕೇಶ್ ಚಾಕೋಟೆ,ತುಡರ್ ಯುವಕ ಮಂಡಲ ಸಾಮಾಜಿಕ,ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಜೊತೆಗೆ ಮಕ್ಕಳಿಗೆ ಶಿಕ್ಷಣಕ್ಕೆ ಉಚಿತ ಪುಸ್ತಕ ವಿತರಣೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೂ ಪ್ರೋತ್ಸಾಹ ನೀಡುವಂತ ಯುವಕ ಮಂಡಲದ ಕಾರ್ಯಕ್ರಮ ಅತ್ಯಂತ ಶ್ಲಾಘನೀಯ ಎಂದರು,ದೇಶ ಕಟ್ಟುವ ಸೃಜನಶೀಲ ಸಮಾಜವನ್ನು ನಿರ್ಮಿಸುವ, ಮಾನವೀಯ ಮೌಲ್ಯಗಳಲಿಗೆ ಮನ್ನಣೆ ನೀಡುವಂತಹ ಶಿಷ್ಯರನ್ನು ರಾಷ್ಟ್ರಕ್ಕೆ ಅರ್ಪಿಸುವವಂಥ ಶ್ರೇಷ್ಟ ವೃತ್ತಿ ಯಲ್ಲಿ 28 ವರ್ಷಗಳ ಸೇವೆ ಸಲ್ಲಿಸಿ ಮುಂಬಡ್ತಿ ಗೊಂಡು ಮುಖ್ಯ ಗುರುಗಳಾಗಿ ವರ್ಗಾವಣೆಗೊಂಡ ನಾಗವೇಣಿ ರವರಿಗೆ ಅಭಿನಂದನೆ ಸಲ್ಲಿಸಿದರು.


ಗ್ರಾಮೀಣ ಭಾಗದ ಮಕ್ಕಳ ಶಿಕ್ಷಣಕ್ಕೆ ಉತ್ತೇಜನ- ನವೀನ್ ನನ್ಯಪಟ್ಟಾಜೆ
ತುಡರ್ ಯುವಕ ಮಂಡಲಡ ಅಧ್ಯಕ್ಷರಾದ ನವೀನ್ ನನ್ಯಪಟ್ಟಜೆ ಪ್ರಾಸ್ತಾವಿಕ ಮಾತಿನೊಂದಿಗೆ ಸ್ವಾಗತಿಸಿ ಮಾತನಾಡಿ ಯುವಕ ಮಂಡಲವು ಗ್ರಾಮೀಣ ಭಾಗದ ಮಕ್ಕಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸುಮಾರು ವರ್ಷಗಳಿಂದ ನನ್ಯ ಶಾಲಾ ಎಲ್ಲಾ ಮಕ್ಕಳಿಗೂ ಉಚಿತ ಪುಸ್ತಕ ವಿತರಣೆ ಮಾಡುತ್ತಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಸತ್ಪಜೆಯಾಗಿ ಜೀವನ ನಿರ್ವಹಿಸುವಂತಾಗಬೇಕು. ತನ್ನ ಅಧ್ಯಕ್ಷೀಯ ಅವಧಿಯ ಮೊದಯ ಕಾರ್ಯಕ್ರಮ ಇದಾಗಿದ್ದು ಇನ್ನು ಮುಂದಿನ ದಿನಗಳಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ಹಾಕಿಕೊಂಡಿದ್ದು ಎಲ್ಲರ ಸಹಕಾರ ಅಗತ್ಯ ಎಂದರು.

ನನ್ಯ ಶಾಲಾ ಪ್ರಭಾರ ಮುಖ್ಯಗುರು ಮಮತಾ ಪುಸ್ತಕ ವಿತರಣೆ ಮಾಡಿದ ತುಡರ್ ಯುವಕ ಮಂಡಲಕ್ಕೆ ಹಾಗೂ ಭಡ್ತಿ ಗೊಂಡು ವರ್ಗಾವಣೆಗೊಂಡ ನಾಗವೇಣಿ ರವರಿಗೆ ಅಭಿನಂದನೆ ತಿಳಿಸಿದರು.ವೇದಿಕೆಯಲ್ಲಿ ಅರಿಯಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ಜಯಂತಿ ಪಟ್ಟುಮೂಲೆ, ನನ್ಯ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರಾದ ಹರೀಶ್ ಕುಲಾಲ್ ಉಪಸ್ಥಿತರಿದ್ದರು.

ಅಭಿನಂದನಾ ಕಾರ್ಯಕ್ರಮ
ನನ್ಯ ಶಾಲೆಯಲ್ಲಿ ಸುದೀರ್ಘ 28 ವರ್ಷಗಳ ಕಾಲ ಸಹ ಶಿಕ್ಷಕಿ ಹಾಗೂ ಪ್ರಭಾರ ಮುಖ್ಯ ಗುರುಗಳಾಗಿ ಸೇವೆ ಸಲ್ಲಿಸಿ ಇದೀಗ ಕೆದಂಬಾಡಿ ಶಾಲೆಗೆ ಮುಖ್ಯ ಗುರುಗಲಾಗಿ ಭಡ್ತಿಗೊಂಡು ವರ್ಗಾವಣೆಗೊಂಡ ನಾಗವೇಣಿ ಹೂವಪ್ಪ ಗೌಡ ದಂಪತಿ ಸಹಿತವಾಗಿ ತುಡರ್ ಯುವಕ ಮಂಡಲದ ವತಿಯಿಂದ ಪೇಟ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ,ಫಲಪುಷ್ಪ ,ಅಭಿನಂದನಾ ಪತ್ರ ,ಹಾಗೂ ಗೌರವ ಸ್ಮರಣಿಕೆ ನೀಡಿ ಅಭಿನಂದಸಲಾಯಿತು.ಹಾಗೂ ನನ್ಯ ಶಾಲಾ ಶಿಕ್ಷಕ ವೃಂದ, ಶಾಲಾಭಿವೃದ್ಧಿ ಸಮಿತಿ,ಆಕ್ಷರ ದಾಸೋಹ ಸಿಬ್ಬಂದಿಗಳಿಂದಲೂ ಅಭಿನಂದನೆ ಸಲ್ಲಿಸಲಾಯಿತು.



ಕಾರ್ಯಕ್ರಮದಲ್ಲಿ ತುಡರ್ ಯುವಕ ಮಂಡಲದ ಮಾಜಿ ಅಧ್ಯಕ್ಷರಾದ ಗಂಗಾಧರ ನಾಯ್ಕ,ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಎಂ,ಉಪಾಧ್ಯಕ್ಷ ಸಂದೇಶ್ ಚಾಕೋಟೆ, ಸದಸ್ಯರಾದ ನಿರಂಜನ್ ಕಮಲಡ್ಕ, ಶ್ರೀಕುಮಾರ ಬಲ್ಯಾಯ, ಸಂಕಪ್ಪ ಪೂಜಾರಿ ಚಾಕೋಟೆ,ಬಾಲಕೃಷ್ಣ ಪಾಟಳಿ,ಶಾಲಾ ಸಹ ಶಿಕ್ಷಕಿ ಭವಾನಿ, ಅಕ್ಷರ ದಾಸೋಹದ ಸಿಬ್ಬಂದಿ ಕವಿತಾ, ಅಂಗನವಾಡಿ ಕಾರ್ಯಕರ್ತೆ ಸೀತಾರತ್ನ, ಸಹಾಯಕಿ,ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಮಕ್ಕಳ ಪೋಷಕರು, ಉಪಸ್ಥಿತರಿದ್ದರು.

ಕಾರ್ಯಕ್ರಮವು ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಯುವಕ ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಯಂ ವಂದಿಸಿದರು.ಮಾಜಿ ಅಧ್ಯಕ್ಷರಾದ ಗಂಗಾಧರ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here