ಪುಣಚ: ಅಜ್ಜಿನಡ್ಕ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾರ್ಥಮಿಕ ಶಾಲೆಯಲ್ಲಿ ದಿ. ಭಾರತಿ ಆರ್ ಕೆ ಭಟ್ ಅವರ ಸ್ಮರಣಾರ್ಥವಾಗಿ ಅವರ ಪತಿ, ಶಾಲಾ ಪೋಷಕರಾದ ನಡುಸಾರು ರಾಮಕೃಷ್ಣ ಭಟ್ ಅವರು ಕೊಡುಗೆಯಾಗಿ ನಿರ್ಮಿಸಿದ ಪ್ರವೇಶದ್ವಾರವನ್ನು ಉದ್ಘಾಟಿಸಲಾಯಿತು.

ಪುಣಚ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಗಂಗಮ್ಮ ಟೀಚರ್ ಉದ್ಘಾಟಿಸಿದರು. ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮತಿ ಲಲಿತಾ ಅಜ್ಜಿನಡ್ಕ, ಶ್ರೀಮತಿ ಬೇಬಿ ಪಟಿ ಕಲ್ಲು, ಎಸ್ ಡಿ ಎಂಸಿ ಉಪಾಧ್ಯಕ್ಷೆ ರೇವತಿ ಕಟ್ಟೆ, ಹರಿಕೃಷ್ಣ ಶಾಸ್ತ್ರಿ ಅತಿಥಿಗಳಾಗಿ ಭಾಗವಹಿಸಿದ್ದರು. ಅತಿಥಿ ಶಿಕ್ಷಕಿ ಶ್ರೀಮತಿ ನಯನ ಸ್ವಾಗತಿಸಿದರು. ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಕಮಲ ಬಿ. ಪ್ರಸ್ತಾವಿಸಿ ವಂದಿಸಿದರು.