ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಶಾಲಾ ವಿದ್ಯಾರ್ಥಿನಿಯರಿಗಾಗಿ ಸ್ವಚ್ಛ ಗೆಳತಿ ಕಾರ್ಯಕ್ರಮ ನಡೆಯಿತು. ಹದಿಹರೆಯರ ಮಕ್ಕಳು ತನ್ನ ಶಾರೀರಿಕ ಮತ್ತು ಸ್ವಚ್ಛತ್ತೆಯನ್ನು ಹೇಗೆ ಕಾಪಾಡಿಕೊಳ್ಳಬೇಕು, ವಿದ್ಯಾರ್ಥಿನಿಯರು ವಯಸ್ಸಿಗನುಗುಣವಾಗಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಏನೇನು ಪರಿಹಾರಗಳು ಎಂಬುದನ್ನು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಗುರು ಸರಸ್ವತಿ ಎಂ. ತಿಳಿಸಿದರು. ತಮ್ಮ ಅಮೂಲ್ಯ ಮತ್ತು ಉಜ್ವಲ ಭವಿಷ್ಯತ್ತಿನ ದೃಷ್ಠಿಯಲ್ಲಿ ವಿದ್ಯಾರ್ಥಿನಿಯರು ಮಾನಹಾನಿಯಾಗದಂತೆ ಎಚ್ಚರವಹಿಸಬೇಕು, ಏನೇ ಸಮಸ್ಯೆ ಬಂದರೂ ಹೆತ್ತವರಲ್ಲಿ, ಗುರುಗಳಲ್ಲಿ, ಸ್ನೇಹಿತರಲ್ಲಿ ವಿಷಯ ತಿಳಿಸಬೇಕು ಎಂದು ಶಿಕ್ಷಕಿ ವಿನಯ ವಿ.ಶೆಟ್ಟಿ ಹೇಳಿದರು. ಸಂದರ್ಭದಲ್ಲಿ ಶಿಕ್ಷಕಿ ಅನಿತಾ ಜೆ.ರೈ, ವೀಣಾಲತಾರವರು ಉಪಸ್ಥಿತರಿದ್ದರು.
About The Author
Related posts
Leave a Reply
Cancel Reply
Leave a Reply
This site uses Akismet to reduce spam. Learn how your comment data is processed.