ಫಿಲೋಮಿನಾ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ ಶಾಲಾ ನಾಯಕ: ನಿಕ್ಷೇಪ್ ಕೃಷ್ಣ, ಉಪನಾಯಕಿ:ಸಮನ್ವಿಕಾ

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ 2022-23ನೇ ಸಾಲಿನ ನೂತನ ಮಂತ್ರಿಮಂಡಲದ ರಚನೆ ಹಾಗೂ ವಿವಿಧ ಸಂಘಗಳ ಉದ್ಘಾಟನೆ ಕಾರ್ಯಕ್ರಮವು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಕಾರ್ಮಿನ್ ಪಾಯಿಸ್ ರವರ ನೇತೃತ್ವದಲ್ಲಿ ನಡೆಯಿತು.

ನಿಕ್ಷೇಪ್ ಕೃಷ್ಣ

 

ಸಮನ್ವಿಕಾ

ಶಾಲಾ ನಾಯಕನಾಗಿ ಹತ್ತನೇ ತರಗತಿಯ ನಿಕ್ಷೇಪ್ ಕೃಷ್ಣ, ಉಪನಾಯಕಿಯಾಗಿ ಒಂಭತ್ತನೇ ತರಗತಿಯ ಸಮನ್ವಿಕಾರವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಭಾಪತಿಯಾಗಿ ಧ್ರುವ ಜೆ.ಭಂಡಾರಿ, ಕಾರ್ಯದರ್ಶಿಯಾಗಿ ಪೂರ್ವಿ ಎಂ.ಎಸ್, ಜೊತೆ ಕಾರ್ಯದರ್ಶಿಯಾಗಿ ರಚನಾ ಪಿಂಟೊ, ಗೃಹ ಮಂತ್ರಿಯಾಗಿ ಬಿ.ನಾಗೇಂದ್ರ ಪೈ,ಸಹಾಯಕ ಗೃಹ ಮಂತ್ರಿತಾಗಿ ಸಕೀನಾ, ಆರೋಗ್ಯ ಮತ್ತು ನೈರ್ಮಲ್ಯ ಮಂತ್ರಿಯಾಗಿ ನದೀಶಾ ರೈ, ಆಹಾರ ಮಂತ್ತಿಯಾಗಿ ಕೃಷ್ಣಪ್ರಸಾದ್ ಎ.ಟಿ ಹಾಗೂ ಸಿದ್ಧಾಂತ್ ರೈ, ಸಹಾಯಕ ಆಹಾರ ಮಂತ್ರಿಯಾಗಿ ದೀಪಾ ರೈ ಹಾಗೂ ಅದ್ವಿತ್ ಜೆ.ರೈ, ಕ್ರೀಡಾ ಮಂತ್ರಿಯಾಗಿ ಕೌಶಲ್ ಗೌಡ ಹಾಗೂ ನಿಪೇಕ್ಷ್, ಸಹಾಯಕ ಕ್ರೀಡಾ ಮಂತ್ರಿಯಾಗಿ ಆಸ್ತಿಕಾ ಹಾಗೂ ಸನ್ವಿತ್ ಡಿ, ಪರಿಸರ ಮಂತ್ರಿಯಾಗಿ ಆಯೇಶಾ ಸಪೂರ, ಸಹಾಯಕ ಪರಿಸರ ಮಂತ್ರಿಯಾಗಿ ಅಪೇಕ್ಷ್ ಶೆಟ್ಟಿ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರತ್ಯೂಷ ಕೆ.ಯು, ಸಹಾಯಕ ಮಂತ್ರಿಯಾಗಿ ನಿಶ್ಚಿತ್, ಸಮಾಜ ಸೇವಾ ಮಂತ್ರಿಯಾಗಿ ರಿಯೋನ್ ಡಿ’ಸೋಜ, ಸಹಾಯಕ ಸಮಾಜ ಸೇವಾ ಮಂತ್ರಿಯಾಗಿ ವಿರಾಜಿತ್ ಭಟ್, ಮಹಿಳಾ ಪ್ರತಿನಿಧಿಯಾಗಿ ವಿಸ್ಮತ್, ಸಹಾಯಕ ಮಹಿಳಾ ಪ್ರತಿನಿಧಿಯಾಗಿ ಅನನ್ಯ, ವಿರೋಧ ಪಕ್ಷದ ನಾಯಕನಾಗಿ ಅನುಷ್ ರೈ, ವಿರೋಧ ಪಕ್ಷದ ನಾಯಕಿತಾಗಿ ಸೋನಿಕಾ ಕುಟಿನ್ಹಾ ಹಾಗೂ ಲಿಖಿತಾ ಪಿ.ಜೆರವರು ಆಯ್ಕೆಯಾದರು.

ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಕಾರ್ಯಾಚರಿಸುತ್ತಿರುವ ವಿವಿಧ ಸಂಘಗಳಾದ ವಿಜ್ಞಾನ ಪರಿಸರ ಸಂಘ, ಸಮಾಜ ವಿಜ್ಞಾನ ಸಂಘ, ಚಿತ್ರಕಲಾ ಕೌಶಲ್ಯ ಸಂಘ, ಕ್ರೀಡಾ ಸಂಘ, ಸಾಂಸ್ಕೃತಿಕ ಕಲಾ ಸಂಘದ ಉದ್ಘಾಟನೆಯೂ ನೆರವೇರಿತು. ನಿರ್ದೇಶಕರುಗಳಾದ ದೈಹಿಕ ಶಿಕ್ಷಣ ಶಿಕ್ಷಕ ನರೇಶ್ ಲೋಬೊ, ರೋಶನ್ ಸಿಕ್ವೇರಾರವರು ಶಾಲಾ ಶಿಕ್ಷಕರುಗಳ ಸಹಕಾರದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

 

LEAVE A REPLY

Please enter your comment!
Please enter your name here