ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಭೂಮಿ ಖರೀದಿಗಾಗಿ ಹಣ ಸಂಗ್ರಹಕ್ಕೆ ಚಾಲನೆ

0

ಪುತ್ತೂರು: ಆರ್ಯಾಪು ಗ್ರಾಮದ ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಳದ ಉದ್ದೇಶಿತ ಜೀರ್ಣೋದ್ಧಾರ ಕಾರ್ಯಕ್ಕೆ ಮುನ್ನ ದೇವಳಕ್ಕೆ ಅಗತ್ಯವಾದ ಭೂಮಿ‌ ಖರೀದಿಗಾಗಿ ಜೂ. 8ರಂದು ಧನ ಸಂಗ್ರಹಕ್ಕೆ ಚಾಲನೆ ನೀಡಲಾಯಿತು.
ಭೂಮಿ ಖರೀದಿ ಸಮಿತಿಯ ಕಾರ್ಯದರ್ಶಿಗಳಲ್ಲಿ ಓರ್ವರಾದ ಇನ್ಫೋಸಿಸ್ ಉದ್ಯೋಗಿ ರಂಗನಾಥ್ ಕಾರಂತ್ ಮರಿಕೆ ಮತ್ತು ಗಾಯತ್ರಿ ರಂಗನಾಥ್ ದಂಪತಿ 1 ಸೆಂಟ್ಸ್ ಜಾಗದ ಮೊತ್ತ ರೂ. 1 ಲಕ್ಷದ ಚೆಕ್ಕನ್ನು ಭೂಮಿ ಖರೀದಿ ಸಮಿತಿ ಅಧ್ಯಕ್ಷರಾದ ಬಂಗಾರಡ್ಕ ರಾಮಕೃಷ್ಣ ಭಟ್, ಕಾರ್ಯದರ್ಶಿ ರಾಮ ಭಟ್ ಮಚ್ಚಿಮಲೆ , ಕೋಶಾಧಿಕಾರಿ ಸುಧಾಕರ ರಾವ್ ಇವರಿಗೆ ಮೊದಲಿಗರಾಗಿ ನೀಡುವ ಮೂಲಕ ಧನ ಸಂಗ್ರಹಕ್ಕೆ ಚಾಲನೆ ನೀಡಿದಂತಾಯಿತು.
ರೂ.5000, ರೂ.2000 ಹಾಗೂ ವಂತಿಗೆ ಕೂಪನ್ ದೇವರ ಮುಂದೆ ಪ್ರಾರ್ಥನೆ ನೆರವೇರಿಸಿ, ಹಣ ನೀಡಿದವರಿಗೆ ವಿತರಿಸಲು ಆರಂಭಿಸಲಾಯಿತು. ಈ ಸಂದರ್ಭದಲ್ಲಿ ಭೂಮಿ ಖರೀದಿ ಸಮಿತಿಯ ಕಾರ್ಯದರ್ಶಿ ಸದಾಶಿವ ಭಟ್ ಮರಿಕೆ, ಸದಸ್ಯರಾದ ಗಿರೀಶ್ ಕಿನ್ನಿಜಾಲ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ದಾಮೋದರ ರೈ ತೊಟ್ಲ, ವಿಠಲ ರೈ ಮೇರ್ಲ, ಭಾರತಿ ಶಾಂತಪ್ಪ‌ ಪೂಜಾರಿ, ವನಿತಾ ಜನಾರ್ದನ ನಾಯಕ್, ವೈದಿಕ ಸಮಿತಿಯ ಸುಮಾ ಭಟ್, ರಾಧಾಕೃಷ್ಣ ರಾವ್ ಸುಂದರವನ, ಗೀತಾ ಗೋವಿಂದ ಭಟ್, ಸಿಬ್ಬಂದಿ ಚಂದ್ರಕಲಾ, ಅರ್ಚಕ ಮನೋಜ್ ಭಟ್ ಉಪಸ್ಥಿತರಿದ್ದರು. 
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಆರ್ ಸುಬ್ಬರಾವ್ ಸುಂದರ ವನ ಕುಟುಂಬದ ವತಿಯಿಂದ ಪ್ರಥಮ ಹಂತದಲ್ಲಿ ರೂ. 2000 ದ ಕೂಪನ್ ಪಡೆದುಕೊಂಡರು. ಬಳಿಕ ಮನೆ ಮನೆ ಭೇಟಿ ನಡೆಸಲಾಗಿದ್ದು , ಸುಮಾ ಸುಬ್ರಾಯ ಭಟ್ ಕಾರ್ಪಾಡಿ ಮತ್ತು  ದಿವ್ಯ ಗಣೇಶ್ , ತ್ವಿಷಾ ಕಿನ್ನಿಜಾಲ್ ತಲಾ ರೂ.5000 ರೂಪಾಯಿ ಯ ಕೂಪನ್ ಪಡೆದುಕೊಂಡರು.

LEAVE A REPLY

Please enter your comment!
Please enter your name here