ಶಶಿಕುಮಾರ್ ರೈ ಬಾಲ್ಯೊಟ್ಟು ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ನ ಪರವಾಗಿ ಸವಣೂರು ಸೀತಾರಾಮ ರೈಯವರಿಗೆ ಹುಟ್ಟುಹಬ್ಬದ ಗೌರವಾರ್ಪಣೆ

0

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ನೇತೃತ್ವದಲ್ಲಿ ಡಿಸಿಸಿ ಬ್ಯಾಂಕ್‌ನ ಪರವಾಗಿ 75 ನೇ ಹುಟ್ಟು ಹಬ್ಬವನ್ನು ಸಂಭ್ರಮಿಸುತ್ತಿರುವ ಸಹಕಾರ ರತ್ನ ಸವಣೂರು ಕೆ.ಸೀತಾರಾಮ ರೈಯವರಿಗೆ ಸವಣೂರು ಅಮೃತ ರಶ್ಮಿ ಸಭಾಭವನದಲ್ಲಿ ಸನ್ಮಾನದ ಗೌರವಾರ್ಪಣೆ ಜೂ.08 ರಂದು ನಡೆಯಿತು. ಸವಣೂರು ಸೀತಾರಾಮ ರೈ ಮತ್ತು ಕಸ್ತೂರಿಕಲಾ ಎಸ್.ರೈ ದಂಪತಿಗೆ ಶಾಲು ಹಾಕಿ, ಸೀತಾರಾಮ ರೈಯವರಿಗೆ ಪೇಟಾ, ಹಾರ, ಫಲಪುಷ್ಪ ನೀಡಿ ಸನ್ಮಾನಿಸುವ ಮೂಲಕ 75 ನೇ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಲಾಯಿತು.

ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಡಿಸಿಸಿ ಬ್ಯಾಂಕ್ ಸವಣೂರು ಶಾಖೆಯ ಬ್ರಾಂಚ್ ಮೆನೇಜರ್ ವಿಶ್ವನಾಥ್, ಕುಂಬ್ರ ಶಾಖೆಯ ಮೆನೇಜರ್ ಹರೀಶ್, ಪುತ್ತೂರು ಶಾಖೆಯ ಮೆನೇಜರ್ ರತ್ನ ಕುಮಾರ್, ಮಾರಾಟಾಧಿಕಾರಿ ಸಂತೋಷ್ ಕುಮಾರ್, ಡಿಸಿಸಿ ಬ್ಯಾಂಕ್‌ನ ವಲಯ ಮೇಲ್ವಿಚಾರಕರಾದ ವಸಂತ ಎಸ್, ಶರತ್ ಡಿ, ಬಾಲಕೃಷ್ಣ ಪಿ, ಪ್ರದೀಪ್ ಕೆ, ಸವಣೂರು ಸಿಎ ಬ್ಯಾಂಕ್ ಮೆನೇಜರ್ ಚಂದ್ರಶೇಖರ್, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳ, ಸೀತಾರಾಮ ರೈಯವರ ಸಹೋದರರಾದ ಜಯಪ್ರಕಾಶ್ ರೈ ಮತ್ತು ಸುಧಾಕರ ರೈ, ಪುತ್ರರಾದ ಮಹೇಶ್ ರೈ, ಡಾ.ರಾಜೇಶ್ ರೈ,ಅಳಿಯ ಅಶ್ವಿನ್ ಶೆಟ್ಟಿ, ಪುತ್ರಿ ರಶ್ಮಿ, ಸೊಸೆಯಂದಿರಾದ ಪಲ್ಲವಿ, ಅಶ್ವಿತಾ ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here