ಗಣಿತ ಕಬ್ಬಿಣದ ಕಡಲೆ ಎನ್ನುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸುವರ್ಣಾವಕಾಶ 

0

ಪುತ್ತೂರಿನಲ್ಲಿ ವೇದಿಕ್ ಮ್ಯಾಥ್ಸ್ , ಅಬಾಕಸ್ ಮತ್ತು ಮಾನಸಿಕ ಸಾಮರ್ಥ್ಯ ತರಗತಿಗಳು

ಪುತ್ತೂರಿನ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರವಾಗಿರುವ ವಿದ್ಯಾಮಾತಾ ಅಕಾಡೆಮಿಯು ವಿಶೇಷ ಗಣಿತಕ್ಕೆ ಸಂಬಂಧಿಸಿದಂತೆ ತರಗತಿಗಳನ್ನು ವಾರಾಂತ್ಯದಲ್ಲಿ(ಭಾನುವಾರ)ಪ್ರಾರಂಭಿಸುತ್ತಿದ್ದು, ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಒಂದು ವರ್ಷದ ವಿಶೇಷ ತರಗತಿಗಳು ಆರಂಭವಾಗಲಿದೆ. ಈ ತರಗತಿಯಲ್ಲಿ ಹಂತ ಹಂತವಾಗಿ ಅಬಾಕಸ್, ವೇದಿಕ್ ಮ್ಯಾಥ್ಸ್, ಸಾಮಾನ್ಯ ಗಣಿತ, ಮಾನಸಿಕ ಸಾಮರ್ಥ್ಯ, ತಾರ್ಕಿಕ ಗಣಿತ(Reasoning)ಮುಂತಾದ ಗಣಿತ ಸಂಬಂಧಿತ ವಿವಿಧ ಮಜಲುಗಳ ಸಂಪೂರ್ಣ ತರಬೇತಿಯನ್ನು ನೀಡಲಾಗುತ್ತದೆ.

ವಿದ್ಯಾರ್ಥಿಗಳನ್ನು ಸಂಪೂರ್ಣವಾಗಿ ಶೈಕ್ಷಣಿಕವಾಗಿ ಮತ್ತು ಅದರ ಜತೆಗೆ ಸ್ಪರ್ಧಾತ್ಮಕವಾಗಿ ಬೆಳೆಯುವಂತಾಗಲು ಈ  ಯೋಜನೆಯು ಅತ್ಯಂತ ಫಲಪ್ರದವಾಗಲಿದೆ. ಈ ತರಗತಿಯಲ್ಲಿ ವಿದ್ಯಾರ್ಥಿಗಳ ಬೌದ್ಧಿಕ ಮಟ್ಟವನ್ನು ಮತ್ತು ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುವುದು ಇದರ ಮೂಲ ಉದ್ದೇಶವಾಗಿದೆ.

ಭಾನುವಾರದ ದಿನ ನೇರ ತರಗತಿಗಳು ಮತ್ತು ದೂರದ ಊರಿನ ವಿದ್ಯಾರ್ಥಿಗಳಿಗೆ ಆನ್ಲೈನ್ ರೂಪದಲ್ಲಿ ತರಗತಿಗಳು ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ  ವಿದ್ಯಾಮಾತಾ ಅಕಾಡೆಮಿ,ಸ್ಪರ್ಧಾತ್ಮಕ ಪರೀಕ್ಷೆಗಳ ಅರ್ಜಿ ಸಲ್ಲಿಕೆ/ತರಬೇತಿ ಕೇಂದ್ರ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಎಂಸಿ ರೋಡ್, ಸಿಟಿ ಆಸ್ಪತ್ರೆ ಹತ್ತಿರ ಪುತ್ತೂರು, 9620468869 /8590773486 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here