ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ, ವಿಜ್ಞಾನ ಸಂಘ ಉದ್ಘಾಟನೆ  

ವಿಟ್ಲ :  ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಸಂಘವನ್ನು   ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ದಿವಾಕರ ಆಚಾರ್ಯರವರು  ಪ್ರಾಯೋಗಿಕವಾಗಿ  ಉದ್ಘಾಟಿಸಿ ವಿಜ್ಞಾನ ಆಸಕ್ತಿಯ ವಿಷಯವಾಗಿದ್ದು, ಆಳವಾದ ಅಧ್ಯಯನಕ್ಕೆ ಈ ಸಂಘಗಳು ಬಹಳ ಉಪಯುಕ್ತ ಹಾಗೂ ಸಂಘಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರವಿಂದ್ರ ಡಿ. ರವರು ಮಾತನಾಡಿ ಹಿರಿಯರು ಅನುಸರಿಸುತ್ತಿದ್ದ ಕೆಲವು ನಂಬಿಕೆ ಮತ್ತು ಆಚರಣೆಗಳಲ್ಲಿ ವಿಜ್ಞಾನ ಅಡಕವಾಗಿರುತ್ತದೆ. ಈ ಜ್ಞಾನವನ್ನು ವಿದ್ಯಾರ್ಥಿಗಳು ವೈಜ್ಞಾನಿಕ  ಚಿಂತನೆಗೆ ಒಳಪಡಿಸಬೇಕು ಎಂದರು. ವಿದ್ಯಾರ್ಥಿಯಾದ ಮೊಹಮ್ಮದ್ ಅಜ್ಮಲ್ ವಿಜ್ಞಾನ ಸಂಘದ ಉದ್ದೇಶವನ್ನು  ಪಿ.ಪಿ.ಟಿ ಯ ಮೂಲಕ     ಪ್ರದರ್ಶಿಸಿದನು.  ವಿದ್ಯಾರ್ಥಿನಿಯರಾದ ಶ್ರೇಯಾ ಕೆ, ಸನಿಹ , ಸ್ವಸ್ತಿ, ಮಾನ್ಯ , ನಿಧಿ, ಸ್ಪರ್ಶ. ಜಿ .ಎನ್  ವಿಶ್ವ ಪರಿಸರ ದಿನದ ಪ್ರಯುಕ್ತ  ಪರಿಸರ ಗೀತೆ ಹಾಡಿದರು. ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮೀ ವಿ.ಶೆಟ್ಟಿ ಉಪಸ್ಥಿತರಿದ್ದರು. ಶಾಲಾ ನಾಯಕಿ  ಸನಿಹ ಸ್ವಾಗತಿಸಿ , ಶ್ರೇಯಾ ಕೆ ವಂದಿಸಿದರು. ಶಿಕ್ಷಕಿ ರಶ್ಮಿ ಫರ್ನಾಂಡಿಸ್ .ಕೆ. ಕಾರ್ಯಕ್ರಮ  ನಿರೂಪಿಸಿದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.