ಕುಂಬ್ರ ಜನನ ತರವಾಡು ಮನೆಯ ಹಿರಿಯರಾದ ಶಿವಮ್ಮ ಎಸ್ ರೈಯವರಿಗೆ ಶ್ರದ್ಧಾಂಜಲಿ

0

  • ಶಿವಮ್ಮ ರೈಯವರ ಬದುಕು ಆದರ್ಶ- ಕಡಮಜಲು ಸುಭಾಸ್ ರೈ

ಪುತ್ತೂರು: ಕುಂಬ್ರ ಜನನ ತರವಾಡು ಮನೆಯ ಹಿರಿಯರಾದ ಶಿವಮ್ಮ ಎಸ್.ರೈರವರ ಉತ್ತರ ಕ್ರಿಯೆಯ ವೈಕುಂಠ ಸಮಾರಾಧನೆಯು ಜೂ.9 ರಂದು ಕುಂಬ್ರ ಶ್ರೀ ರಾಮ ಭಜನಾ ಮಂದಿರದ ಸಭಾಭವನದಲ್ಲಿ ಜರಗಿತು.

 


ಸಾಮಾಜಿಕ ಮುಂದಾಳು ಕಡಮಜಲು ಸುಭಾಷ್ ರೈಯವರು ಮಾತನಾಡಿ ಶಿವಮ್ಮ ರೈಯವರು ತಮ್ಮ ಬದುಕಿನಲ್ಲಿ ಆದರ್ಶವಾದ ತತ್ವಗಳನ್ನು ಅಳವಡಿಸಿಕೊಂಡು, ಸಮಾಜದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಆದರ್ಶವನ್ನು ಯುವ ಪೀಳಿಗೆ ಅನುಕರಣೆ ಮಾಡಬೇಕು, ಕುಂಬ್ರದಲ್ಲಿ ಶಾಲೆ ನಿರ್ಮಾಣಕ್ಕೆ ಸ್ಥಳದಾನವನ್ನು ಮಾಡುವ ಮೂಲಕ ಶೈಕ್ಷಣಿಕ ಬೆಳವಣಿಗೆಗೆ ಮಾರ್ಗದರ್ಶಕರಾದರು ಎಂದು ನುಡಿನಮನ ಸಲ್ಲಿಸಿದರು.
ಶಿವಮ್ಮ ರೈಯವರ ಮಕ್ಕಳಾದ ರುಕ್ಮಿಣಿ ಲಕ್ಕಣ್ಣ ರೈ ಕೇಪು, ಗಂಗಾರತ್ನ ಸೀತಾರಾಮ ರೈ ಕೆದಂಬಾಡಿಗುತ್ತು, ಜಯಲಕ್ಷ್ಮಿ ಸಂಜೀವ ರೈ ಕುರಿಕ್ಕಾರ, ಭಾರತಿ ಆನಂದ ರೈ ಮಾಳಗುತ್ತು, ಕುಂಬ್ರ ಶಿವರಾಮ ರೈ, ಕುಂಬ್ರ ರಾಜರಾಮ ರೈ, ಸೊಸೆಯಂದಿರಾದ ಸಾವಿತ್ರಿ ಎಸ್ ರೈ, ಸೌಮ್ಯ ಆರ್ ರೈ ಹಾಗೂ ಮೊಮ್ಮಕ್ಕಳು, ಕುಂಬ್ರ ಜನನ ತರವಾಡು ಕುಟುಂಬಸ್ಥರು, ಊರ, ಪರವೂರ ಹಿತೈಷಿಗಳು ಉಪಸ್ಥಿತರಿದ್ದರು. ನ್ಯಾಯವಾದಿಯಾಗಿರುವ, ಕುಂಬ್ರ ಜನನ ತರವಾಡು ಕುಟುಂಬದ ಕುಂಬ್ರ ದುರ್ಗಾಪ್ರಸಾದ್ ರೈ ಸ್ವಾಗತಿಸಿ, ಕಾರ್‍ಯಕ್ರಮ ನಿರೂಪಿಸಿದರು. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಸಹಿತ ಸಾಮಾಜಿಕ, ಧಾರ್ಮಿಕ, ರಾಜಕೀಯ, ಸಂಘ-ಸಂಸ್ಥೆಗಳ ಮುಖಂಡರುಗಳು ಭಾಗವಹಿಸಿದರು.

ಸಿಹಿ ತಿಂಡಿ ವಿತರಣೆ
ಶಿವಮ್ಮ ರೈ ಸ್ಮರಣಾರ್ಥ ಕುಂಬ್ರದ ಪ್ರಾಥಮಿಕ ದಿಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ವಿತರಿಸಲಾಯಿತು.

LEAVE A REPLY

Please enter your comment!
Please enter your name here