ಕಾಣಿಯೂರು:ದ.ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಇದರ ಸವಣೂರು ಶಾಖೆಯಲ್ಲಿ ಸುಮಾರು 18ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ಚಂದ್ರ ಇವರು ಉಪ್ಪಿನಂಗಡಿ ಶಾಖೆಗೆ ವರ್ಗಾವಣೆ ಗೊಂಡಿದ್ದು ಇವರ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಜೂನ್ 8 ಬ್ಯಾಂಕಿನಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಖಾ ವ್ಯವಸ್ಥಾಪಕರಾದ ವಿಶ್ವನಾಥ್ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಓ ಚಂದ್ರಶೇಖರ್. ನರಿಮೊಗರು ಸಹಕಾರ ಸಂಘದ ಸಿಇಓ ಮಧುಕರ ಆಚಾರ್,ಚಾರ್ವಾಕ ಸಹಕಾರ ಸಂಘದ ಸಿಇಓ ಅಶೋಕ್ , ಬ್ಯಾಂಕಿನ ಸಿಬ್ಬಂದಿ ಗಳಾದ ಮಲ್ಲಿಕಾ, ಶೋಭಾ,ಪ್ರತೀಕ್ಷಾ, ಪಿಗ್ಮಿ ಸಂಗ್ರಹಾಕರಾದ ಬಾಲಚಂದ್ರ ರೈ ಉಪಸ್ಥಿತರಿದ್ದು ವರ್ಗಾವಣೆಗೊಂಡ ಸತೀಶ್ಚಂದ್ರ ರವರಿಗೆ ಶುಭ ಹಾರೈಸಿದರು.