ದೇಶದ ಪ್ರತಿಷ್ಠಿತ ಕೇಕ್ ಉದ್ಯಮ ಸೆವೆಂತ್ ಹೆವನ್ ಶಾಖೆ ಇನ್‌ಲ್ಯಾಂಡ್ ಮಯೂರದಲ್ಲಿ ಶುಭಾರಂಭ

ಪುತ್ತೂರು; ದೇಶದ ಪ್ರತಿಷ್ಠಿತ ಕೇಕ್ ಉದ್ಯಮ ಸಂಸ್ಥೆ ಸೆವೆಂತ್ ಹೆವನ್‌ನ ಶಾಖೆಯು ಜೂ.9ರಂದು ಇನ್ ಲ್ಯಾಂಡ್ ಮಯೂರದಲ್ಲಿ ಶುಭಾರಂಭಗಿಂಡಿತು.
ನೂತನ ಮಳಿಗೆಯನ್ನು ಕಟ್ಟಡದ ಮ್ಹಾಲಕಿ ಶಂಕರಿ ರೈ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ನಗರ ಸಭಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಕೇಕ್ ಕತ್ತರಿಸಿದರು.


ದೀಪ ಬೆಳಗಿಸಿ ಉದ್ಘಾಟಿಸಿದ ವಿದ್ಯಾ ಗೌರಿ ಮಾತನಾಡಿ, ಸೆವೆಂತ್ ಹೆವನ್ ಕೇಕ್ ಭಾರತದ ಟಾಪ್ ಬ್ರಾಂಡ್ ಆಗಿರುತ್ತದೆ. ಬೆಳೆಯುತ್ತಿರುವ ಪುತ್ತೂರಿನಲ್ಲಿ ಹಲವು ರೀತಿಯ ಬ್ರಾಂಡೆಡ್ ಮಳಿಗೆಗಳು ಪ್ರಾರಂಭಗೊಂಡಿದೆ. ಇದರ ಮುಖಾಂತರ ಜನರ ಆಕಾಂಕ್ಷೆಗಳು ವೃದ್ದಿಯಾಗಿದೆ. ಜನರ ಜೀವನ ಶೈಲಿ ಬದಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಹೊಸ ಹೊಸ ಮಾದರಿಯ ಬ್ರಾಂಡೆಡ್ ಮಳಿಗೆ ಆವಶ್ಯಕ. ಇವುಗಳಿಂದ ಆಶಯ, ಬೇಡಿಕೆಗಳು ಇಡೇರಲಿ. ಗುಣಮಟ್ಟದ ಉತ್ಪನ್ನಗಳು ಜನರಿಗೆ ದೊರೆಯಲಿ. ಉತ್ತಮ ರೀತಿಯ ಸೇವೆ ದೊರೆಯಲಿ. ವಿಶಿಷ್ಟತೆಯನ್ನು ಹೊಂದಿದೆ. ಎಲ್ಲಾ ರೀತಿಯ ಸೌಲಭ್ಯಗಳು ದೊರೆಯಲಿ.


ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಮಾತನಾಡಿ, ನೂತನವಾಗಿ ಪ್ರಾರಂಭಗೊಂಡಿರುವ ಕೇಕ್ ಮಳಿಗೆಯಿಂದ ಜನತೆ ಅಪೇಕ್ಷೆಗಳು ಈಡೇರಲಿ. ಸಂಸ್ಥೆಗೆ ಜನರ ಸಹಕಾರ ಪ್ರೋತ್ಸಾಹ ದೊರೆತು ಅಭಿವೃದ್ಧಿ ಪಥದತ್ತ ಸಾಗಲಿ ಎಂದು ಹಾರೈಸಿದರು.

ಬನ್ನೂರು ಸಂತ ಅಂತೋನಿ ದೇವಾಲಯದ ಧರ್ಮಗುರು ಪ್ರಶಾಂತ್ ಫೆರ್ನಾಂಡೀಸ್ ಮಾತನಾಡಿ, ಪ್ರತಿಭೆ ಎಲ್ಲರಲ್ಲಿಯೂ ಇರುತ್ತದೆ. ಅವುಗಳನ್ನು ಸದುಪಯೋಗ ಪಡಿಸಿಕೊಂಡಾಗ ಜೀವನದಲ್ಲಿ ಯಶಸ್ಸು ಕಾಣಬಹುದು ಎನ್ನುವುದಕ್ಕೆ ಈ ಮಳಿಗಯೇ ಸಾಕ್ಷಿ. ಸಣ್ಣ ವಯಸ್ಸಿನಲ್ಲಿನ ಯುವಕ ಸಾಧನೆ ಶ್ಲಾಘಿಸಿದ ಅವರು ಸ್ವಚ್ಚತೆ, ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ ಗ್ರಾಹಕರೊಂದಿಗೆ ಉತ್ತಮ ಸಂಪರ್ಕ ಆವಶ್ಯಕ ಎಂದರು.

ಎಂ.ಟಿ ರಸ್ತೆ ಬದ್ರಿಯಾ ಜುಮ್ಮ ಮಸೀದಿ ಅಬ್ದುಲ್ ರಹಿಮಾನ್ ಮುಸ್ಲಿಯಾರ್ ಮಾತನಾಡಿ, ಎಲ್ಲಾ ಧರ್ಮಗುರುಗಳನ್ನು ಸೇರಿಸಿಕೊಂಡು ನೂತನ ಮಳಿಗೆಯನ್ನು ಉದ್ಘಾಟಿಸಲಾಗಿದೆ. ವ್ಯವಹಾರ ಧರ್ಮವು ಇದೇ ರೀತಿಯಲ್ಲಿ ಮುಂದುವರಿಯಲಿ ಎಂದರು.

ಅರಿಯಡ್ಕ ಚಿಕ್ಕಪ್ಪ ನಾಕ್ ಮಾತನಾಡಿ, ಮಳಿಗೆಯಿಂದ ಗ್ರಾಹಕರಿಗೆ ಉತ್ತಮ ಸೇವೆ ದೊರೆತು ಎಲ್ಲರ ಪ್ರಶಂಸೆಗೆ ಪಾತ್ರರಾಗಲಿ ಎಂದರು.
ಸಂಸ್ಥೆಯ ಮ್ಹಾಲಕ ರಂಜಿತ್ ಶೆಟ್ಟಿ ಸ್ವಾಗತಿಸಿ, ಸೆವೆಂತ್ ಹೆವನ್ ಸಂಸ್ಥೆಯ ದೇಶದಾದ್ಯಂತ ೩೫೦ಕ್ಕೂ ಹೆಚ್ಚು ಶಾಖೆಗಳನ್ನು ಹೊಂದಿದೆ. ನಮ್ಮ ಮಳಿಗೆಯಲ್ಲಿ ಶುದ್ದ ಸಸ್ಯಹಾರಿ ಕೇಕ್ ಮಾತ್ರ ಲಭ್ಯವಿರುತ್ತದೆ. ಗ್ರಾಹಕರ ಅಪೇಕ್ಷೆಯಂತೆ ನಮ್ಮಲ್ಲಿ ಲೈವ್ ಆಗಿ ಫ್ರೆಶ್ ಕೇಕ್ ತಯಾರಿಸಿಕೊಡಲಾಗುವುದು. ಆರ್ಡರ್ ಮಾಡಿದ ಕೇವಲ ಏಳು ನಿಮಿಷದಲ್ಲಿ ಕೇಕ್ ತಯಾರಿಸಿಕೊಡಲಾಗುವುದು. ನಗರದಲ್ಲಿ ಮೂರು ಕಿ.ಮೀ ದೂರದಲ್ಲಿ ಉಚಿತ ಹೋಂ ಡೆಲಿವರಿ ಸೌಲಭ್ಯವಿದೆ. ಶುಭಾರಂಭದ ಅಂಗವಾಗಿ ಮೂರು ದಿನಗಳ ವಿಶೇಷ ಕೊಡುಗೆಗಳನ್ನು ನೀಡಲಾಗುತ್ತಿದ್ದು, ಅರ್ಧ ಕೆ.ಜಿಯ ಕೇಕ್ ಖರೀದಿಗೆ ಲಾವಾ ಕೇಕ್ ಉಚಿತ, ಮಗ್ ಕೇಕ್ ಖರೀದಿಗೆ ಮುಫಿನ್ ಉಚಿತ ಹಾಗೂ ಒಂದು ಪಾಸ್ಟರಿಸ್ ಖರೀದಿಗೆ ಮತ್ತೊಂದು ಉಚಿತವಾಗಿ ಪಡೆಯಬಹುದು. ಜೊ ಎಂದು ತಿಳಿಸಿದರು.

ಮಳಿಗೆಯ ಉದ್ಘಾಟಿಸಿದ ವಿದ್ಯಾ ಗೌರಿಯವರು ಪ್ರಥಮ ಖರೀದಿ ಮಾಡಿದರು. ಇನ್‌ಲ್ಯಾಂಡ್ ಮಯೂರದ ವ್ಯವಸ್ಥಾಪಕ ಮಹೇಶ್, ವಿಜಯ ಸುಪಾರಿಯ ಮ್ಹಾಲಕ ರಾಮ ಭಟ್ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.