ಪುತ್ತೂರು: ಮರೀಲ್ ನಲ್ಲಿರುವ ಈ ಎಸ್. ಆರ್ ಪ್ರೆಸಿಡೆನ್ಸಿ ಸ್ಕೂಲ್ ನಲ್ಲಿ ಶಾಲಾ ಸಂಚಾಲಕರಾದ ಜಾಕೀರ್ ಹುಸೇನ್ ರವರ ಅಧ್ಯಕ್ಷತೆಯಲ್ಲಿ ಪರಿಸರ ದಿನಾಚರಣೆಯನ್ನು ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಸಾರುವ ಅನೇಕ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಯಿತು. ವಿದ್ಯಾರ್ಥಿನಿ ಫಾತಿಮಾತ್ ತ್ವಾಹಿರ ಸ್ವಾಗತಿಸಿ, ಶಾಲಾ ಮುಖಂಡರಾದ ಝಿಶಾನ್ ಇಬ್ರಾಹಿಂ ಹಾಗೂ ನೆಫೀಸ ಫಿದಾ ಕಾರ್ಯಕ್ರಮ ನಿರೂಪಿಸಿದರು. ಮುಖ್ಯ ಶಿಕ್ಷಕಿ ತಾಜುನ್ನಿಸ, ವಿದ್ಯಾ ಕೀರ್ತಿ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ನ ಸದಸ್ಯರಾದ ಮಸೂದ್, ವಿ.ಕೆ ಶರೀಫ್ ಮೊದಲಾದವರು ಉಪಸ್ಥಿತರಿದ್ದರು.