ನಗರಸಭೆ ಅಗತ್ಯ ಸೇವೆಗಳ ಸಂಪರ್ಕದ ವೆಬ್‌ಸೈಟ್ ಮಾಹಿತಿ-ಮನೆ ಮನೆಗೆ ಸ್ಟಿಕ್ಕರ್ ಅಭಿಯಾನಕ್ಕೆ ನಗರಸಭೆ ಅಧ್ಯಕ್ಷರಿಂದ ಚಾಲನೆ

0

  • ವೆಬ್‌ಸೈಟ್ ಮಾಹಿತಿ ಪಡೆದು ಕೆಲಸ ಕಾರ್ಯ ಸುಲಭಗೊಳಿಸಿ – ಕೆ.ಜೀವಂಧರ್ ಜೈನ್

ಪುತ್ತೂರು: ನಗರಸಭೆ ಅಗತ್ಯ ಸೇವೆಗಳ ಸಂಪರ್ಕದ ವೆಬ್‌ಸೈಟ್ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ನಗರಸಭೆ ಅಧಿಕಾರಿಗಳು ಮನೆ ಮನೆ ಭೇಟಿ ಮಾಡಿ ಅಗತ್ಯ ಸೇವೆಗಳ ಮಾಹಿತಿಯನ್ನೊಳಗೊಂಡ ಸ್ಟಿಕ್ಕರ್ ಅಂಟಿಸುವ ಅಭಿಯಾನ ಜೂ. ೯ರಂದು ಆರಂಭಿಸಲಾಗಿದೆ. ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಅವರ ಮನೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ವೆಬ್‌ಸೈಟ್ ಮಾಹಿತಿ ಪಡೆದು ಕೆಲಸ ಕಾರ್ಯ ಸುಲಭಗೊಳಿಸಿ :
ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ನಗರಸಭೆಯಿಂದ ಸಿಗುವ ಸೌಲಭ್ಯ ಜನರಿಗೆ ಮುಟ್ಟಿಸುವಲ್ಲಿ ನಗರಸಭೆಯಿಂದ ವಿವಿಧ ಹೆಜ್ಜೆಗಳನ್ನು ಇಡಲಾಗಿದೆ. ಅದರಲ್ಲೂ ಸಾರ್ವಜನಿಕರು ನಗರಸಭೆ ಕಾರ್ಯಾಲಯಕ್ಕೆ ಸುತ್ತಾಡದೆ ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ಚಿಂತನೆಯಂತೆ ಎಲ್ಲವನ್ನು ಡಿಜಿಟೈಲೈಸ್ ಮಾಡುವ ಸಂದರ್ಭದಲ್ಲಿ ನಗರಸಭೆಯು ವೆಬ್‌ಸೈಟ್ ಮೂಲಕ ಸೇವೆ ನೀಡಲು ಮುಂದಾಗಿದೆ. ಸಮಸ್ಯೆಗಳ ದೂರು, ವ್ಯಾಪಾರ ಪರವಾನಿಗೆ ಅರ್ಜಿ, ಕಟ್ಟಡ ಪರವಾನಿಗೆ, ನೀರಿನ ಸಂಪರ್ಕ ಸೇರಿದಂತೆ ಹಲವರು ರೀತಿಯ ಸೇವೆ ಸಿಗಲಿದೆ. ಸಾರ್ವಜನಿಕರು ವೆಬ್‌ಸೈಟ್ ಕುರಿತು ಮಾಹಿತಿ ಪಡೆದು ಸದುಪಯೋಗ ಮಾಡಿಕೊಳ್ಳುವಂತೆ ಅವರು ವಿನಂತಿಸಿದರು. ನಗರಸಭೆ ಕಚೇರಿ ಮ್ಯಾನೇಜರ್ ಪಿಯೂಸ್ ಡಿಸೋಜ, ಕಂದಾಯ ವಿಭಾಗದ ರಾಜೇಶ್, ಉಮಾನಾಥ್, ಪುರುಷೋತ್ತಮ, ರಾಧಾಕೃಷ್ಣ ಅವರು ಅಭಿಯಾನದಲ್ಲಿ ಉಪಸ್ಥಿತರಿದ್ದರು.

ವೆಬ್‌ಸೈಟ್‌ನಲ್ಲಿ
ನಗರಸಭೆ ವೆಬ್‌ಸೈಟ್ (www.putturcity.mrc.gov.in) ಅನ್ನು ಕ್ಲಿಕ್ ಮಾಡಿದಾಗ ಇ-ಸ್ವೀಕೃತಿ, ನಿಮ್ಮ ದೂರುಗಳನ್ನು ದಾಖಲಿಸಿ, ವ್ಯಾಪಾರ ಪರವಾನಿಗೆಯ ಅರ್ಜಿ, ಕಟ್ಟಡ ಪರವಾನಿಗೆಯ ಅರ್ಜಿ, ನೀರಿನ ಸಂಪರ್ಕಕ್ಕೆ ಅರ್ಜಿ, ಬೋರ್‌ವೆಲ್‌ಗಳಿಗೆ ನಿರಾಕ್ಷೇಪಣಾ ಪತ್ರ, ಜನನ ಮತ್ತು ಮರಣ ನೋಂದಣಿ, ಆಸ್ತಿ ತೆರಿಗೆ ಕೋಷ್ಟಕ ಮತ್ತು ಪಾವತಿ, ಇ-ಆಸ್ತಿ, ಆಸ್ತಿ ಹುಡುಕಾಟ, ಉಪಯುಕ್ತತೆಗಳ ನಿರ್ವಹಣೆ, ಚಲನಚಿತ್ರ, ಚಿತ್ರೀಖರಣ ಮತ್ತು ಜಾಹಿರಾತು ಫಲಕ ಅಳವಡಿಸಲು ಮಾಹಿತಿ ಗಳಿಗೆ ವೆಬ್‌ಸೈಟ್ ಮೂಲಕ ಸೇವೆ ಪಡೆಯಬಹುದು.

LEAVE A REPLY

Please enter your comment!
Please enter your name here