ನಗರಸಭೆಯಲ್ಲಿ 2ನೇ ಹಂತದ ವಿವಿಧ ಸಾಮರ್ಥ್ಯ ಅಭಿವೃದ್ಧಿಯ ತರಬೇತಿ ಕಾರ್ಯಕ್ರಮ ಉದ್ಘಾಟನೆ

0

  • ಮಹಿಳೆಯರು ಸ್ವಾವಲಂಭಿಯಾಗಬೇಕು – ಕೆ.ಜೀವಂಧರ್ ಜೈನ್

ಪುತ್ತೂರು: ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಾಮಾಜಿಕ ಕ್ರೋಢೀಕರಣ ಹಾಗೂ ಸಾಂಸ್ಥಿಕ ಅಭಿವೃದ್ಧಿ ಉಪ ಘಟಕದಡಿ ಸ್ವಸಹಾಯ ಸಂಘ ಮತ್ತು ಪ್ರದೇಶ ಮಟ್ಟದ ಒಕ್ಕೂಟಗಳಿಗೆ ಎರಡನೇ ಹಂತದ ವಿವಿಧ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮ ಜೂ.9ರಂದು ಪುತ್ತೂರು ಪುರಭವನದಲ್ಲಿ ನಡೆಯಿತು.

ಮಹಿಳೆಯರು ಸ್ವಾವಲಂಭಿಯಾಗಬೇಕು:
ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರದ ಆತ್ಮ ನಿರ್ಭರ ಯೋಜನೆಯಡಿ ಸಮಾಜದಲ್ಲಿ ಮಹಿಳೆಯರು ತರಬೇತಿ ಪಡೆದು ಸ್ವಾವಲಂಬಿಯಾಗಬೇಕೆಂಬುದು ಉದ್ದೇಶ. ಈಗಾಗಲೇ ೪೭ ಸ್ವಸಹಾಯ ಕಾರ್ಯರೂಪಕ್ಕಿಳಿದಿದ್ದು, ಸಿಆರ್‌ಪಿಗಳನ್ನು ನೇಮಕ ಮಾಡಲಾಗಿದೆ. ಮುದಿನ ದಿನ ಮಹಿಳೆಯರೆಲ್ಲರು ಸ್ವಾವಲಂಭಿಯಾಗಬೇಕೆಂದರು.

ಸರಕಾರದ ಯೋಜನೆಗಳ ಸದುಪಯೋಗ ಮಾಡಿ:
ಜಿಲ್ಲಾ ಕೌಶಲ್ಯಾಭಿವೃದ್ಧಿಯ ಮುಖ್ಯಸ್ಥೆ ಐರಿನ್ ರೆಬೆಲ್ಲೋ ಮಾತನಾಡಿ, ಸರಕಾರ ಮಹಿಳೆಯರ ಅಭಿವೃದ್ಶಿಗಾಗಿ ಹಲವಾರು ಯೋಜನೆಗಳನ್ನು ಜ್ಯಾರಿಗೆ ತಂದಿದೆ. ಈ ನಿಟ್ಟಿನಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆಯಡಿ ಸ್ಥಾಪಿತವಾದ ಸ್ವಸಹಾಯ ಸಂಘ ‘ಡೇ ನಲ್ಮ್’ ಮಹಿಳೆಯರಲ್ಲಿ ಸ್ವ ಉದ್ಯೋಗಕ್ಕೆ ಪ್ರೇರಣೆ ನೀಡಿ, ಆರ್ಥಿಕ ಶಕ್ತಿ ತುಂಬಿ ಉಳಿತಾಯ ಪ್ರಜ್ಞೆ ಮೂಡಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ವೇದಿಕೆಯಲ್ಲಿ ಆರ್ಥಿಕ ಸಂಪನ್ಮೂಲ ಕೇಂದ್ರ ಅಮೂಲ್ಯದ ಗೀತಾ ವಿಜಯ್ ಅವರು ಯೋಜನೆಯ ಕುರಿತು ಸಂಪೂರ್ಣ ಮಾಹಿತಿ ನೀಡಿದರು. ನಗರಸಭೆ ಸಿಬ್ಬಂದಿ ವಾಣಿ ಪ್ರಾರ್ಥಿಸಿದರು. ಸಿಬ್ಬಂದಿ ಜಯಲಕ್ಷ್ಮೀ ಬೇಕಲ್ ಸ್ವಾಗತಿಸಿದರು. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ವಸಹಾಯ ಸಂಘದ ಸದಸ್ಯರಿಗೆ ಪ್ರೊಜೆಕ್ಟರ್ ಮೂಲಕ ಯೋಜನೆಯ ಸಂಪೂರ್ಣ ಮಾಹಿತಿ ನೀಡಲಾಯಿತು.

LEAVE A REPLY

Please enter your comment!
Please enter your name here