ಕಾಣಿಯೂರು:ಬೆಳಂದೂರು ಗ್ರಾಮದ ಅಮೈ ದ.ಕ.ಜಿ.ಪಂ.ಕಿ.ಪ್ರಾಥಮಿಕ ಶಾಲೆಯ ಪ್ರಾರಂಭದಿಂದ ಸುಮಾರು 15 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಸಿ ಆರ್ ಪಿ ಆಗಿ ವರ್ಗಾವಣೆಗೊಂಡ ಗೀತಾ ಡಿ ಶೆಟ್ಟಿ ಹಾಗೂ ಶಾಲಾ ಅಡುಗೆ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಬಾಲಕಿ ಇವರಿಗೆ ಬೀಳ್ಕೊಡುಗೆ ಸಮಾರಂಭವು ಜೂ 8 ರಂದು ನಡೆಯಿತು.
ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಕೇಶವ ಗೌಡ ಅಧ್ಯಕ್ಷತೆ ವಹಿಸಿದ್ದರು. ಬೆಳಂದೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ,ಕಡಬ ಪ್ರಾ.ಶಾ.ಶಿ.ಸಂ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಕೆ,ಕ್ಲಸ್ಟರ್ ಸಿ ಆರ್ ಪಿ ಕುಶಾಲಪ್ಪ ಬಿ,ಸವಣೂರು ಸಿ ಎ ಬ್ಯಾಂಕ್ ನಿರ್ದೇಶಕಿ ನಿರ್ಮಲಾ ಕೇಶವ ಗೌಡ ಶುಭ ಹಾರೈಸಿದರು. ಬಳಿಕ ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ಚಂದ್ರಗೌಡ ತೆಕ್ಕಿತ್ತಡಿ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ಪದ್ಮಯ್ಯ ಗೌಡ ಅಮೈ,ಎಸ್ ಡಿ ಎಂ ಸಿ ಮಾಜಿ ಅಧ್ಯಕ್ಷ ವಸಂತ ಗೌಡ ಅಮೈ,ಅಂಗನವಾಡಿ ಕಾರ್ಯಕರ್ತೆ ಗುಲಾಬಿ ಕೆ ಸೇರಿದಂತೆ ಸಹಶಿಕ್ಷಕರು,ಎಸ್ ಡಿ ಎಂ ಸಿ ಪದಾಧಿಕಾರಿಗಳು,ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಶಾಲಾ ಮುಖ್ಯಗುರು ಜ್ಯೋತಿ ದೇವರಮನೆ ಸ್ವಾಗತಿಸಿ ವಂದಿಸಿದರು.