ನೆಲ್ಯಾಡಿ: ಬೆಥನಿ-ಪಡ್ಡಡ್ಕ ರಸ್ತೆ ಕಾಂಕ್ರಿಟೀಕರಣ ಉದ್ಘಾಟನೆ

0

 

ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿಯ ವಾರ್ಡ್ ನಂ.3ರ ಬೆಥನಿ-ಪಡ್ಡಡ್ಕ ಅಡ್ಡ ರಸ್ತೆಗೆ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನಂದಕುಮಾರ್‌ರವರ ಶಿಫಾರಸ್ಸಿನ ಮೇರೆಗೆ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರವರು ಬಿಡುಗಡೆಗೊಳಿಸಿದ್ದ 4ಲಕ್ಷ ರೂ., ಅನುದಾನದಲ್ಲಿ ನಡೆದ ಕಾಂಕ್ರಿಟೀಕರಣ ಕಾಮಗಾರಿಯ ಉದ್ಘಾಟನೆ ಜೂ.4ರಂದು ನಡೆಯಿತು.

ಈ ಸಂದರ್ಭದಲ್ಲಿ ಕಡಬ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರುಗಳಾದ ಬಾಲಕೃಷ್ಣ ಬಳ್ಳೇರಿ, ಗಣೇಶ್ ಗೌಡ ಕೈಕುರೆ, ವಿಜಯಕುಮಾರ್ ರೈ ಕರ್ಮಾಯಿ, ಜಿಲ್ಲಾ ಕಾಂಗ್ರೆಸ್ ಮುಖಂಡ ಸೈಮನ್, ತಾ.ಪಂ.ಮಾಜಿ ಸದಸ್ಯೆ ಉಷಾ ಅಂಚನ್, ಕೆ.ಜೆ.ಜೋಸ್, ನೆಲ್ಯಾಡಿ ಗ್ರಾ.ಪಂ.ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರುಗಳಾದ ಸಲಾಂ ಪಡುಬೆಟ್ಟು, ಪುಷ್ಪಾ ಪಡುಬೆಟ್ಟು, ಮಹಮ್ಮದ್ ಇಕ್ಬಾಲ್, ಜಯಲಕ್ಷ್ಮೀ ಪ್ರಸಾದ್, ಗ್ರಾಮಸ್ಥರಾದ ಶಾಜಿ ಕೆ.ಟಿ., ಬೆನ್ನಿ ಜಾರ್ಜ್, ಅಶ್ರಫ್, ರಫೀಕ್ ನೆಲ್ಯಾಡಿ, ಹೊನ್ನಪ್ಪ ಪೂಜಾರಿ, ಪ್ರಶಾಂತ್, ಜೋಯಿ, ಜೋಸೆಫ್ ಮತ್ತಿತರರು ಉಪಸ್ಥಿತರಿದ್ದರು. ನೆಲ್ಯಾಡಿ ಗ್ರಾ.ಪಂ.ಸದಸ್ಯೆ ಉಷಾ ಜೋಯಿ ಸ್ವಾಗತಿಸಿ, ಸದಸ್ಯ ಜಯಾನಂದ ಬಂಟ್ರಿಯಾಲ್ ಕಾರ್ಯಕ್ರಮ ನಿರೂಪಿಸಿದರು.

ನಂದಕುಮಾರ್‌ಗೆ ಸನ್ಮಾನ:
ಕಳೆದ ಗ್ರಾ.ಪಂ.ಚುನಾವಣೆ ಸಂದರ್ಭದಲ್ಲಿ ನೆಲ್ಯಾಡಿ ಗ್ರಾ.ಪಂ.ನ ೩ನೇ ವಾರ್ಡ್‌ನಲ್ಲಿ ಪ್ರಚಾರಕ್ಕೆ ಬಂದಿದ್ದ ಕಡಬ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ನಂದಕುಮಾರ್‌ರವರು ಗ್ರಾಮಸ್ಥರಿಂದ ಬೇಡಿಕೆಗಳ ಅಹವಾಲು ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಬೆಥನಿ-ಪಡ್ಡಡ್ಕ ಅಡ್ಡ ರಸ್ತೆ ಕಾಂಕ್ರಿಟೀಕರಣದ ಬೇಡಿಕೆ ಸಲ್ಲಿಸಿದ್ದರು. ವಾರ್ಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರನ್ನು ಗೆಲ್ಲಿಸಿ ಕೊಡಿ ನಾನು ನಿಮ್ಮ ಬೇಡಿಕೆ ಈಡೇರಿಸುತ್ತೇನೆ ಎಂದು ನಂದಕುಮಾರ್ ಈ ಸಂದರ್ಭದಲ್ಲಿ ಭರವಸೆ ನೀಡಿದ್ದರು. ಚುನಾವಣೆಯಲ್ಲಿ ವಾರ್ಡ್‌ನ ಮೂರು ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಸದಸ್ಯರು ಚುನಾಯಿತರಾಗಿದ್ದರು. ಇದೀಗ ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ನಂದಕುಮಾರ್‌ರವರು ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರವರಿಗೆ ಮನವಿ ಮಾಡಿ ೪ ಲಕ್ಷ ರೂ.,ಅನುದಾನ ಮಂಜೂರುಗೊಳಿಸಿ ರಸ್ತೆ ಕಾಂಕ್ರಿಟೀಕರಣಗೊಳಿಸುವ ಮೂಲಕ ಗ್ರಾಮಸ್ಥರ ಬೇಡಿಕೆ ಈಡೇರಿಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು, ಗ್ರಾ.ಪಂ.ಸದಸ್ಯರು ಸೇರಿಕೊಂಡು ನಂದಕುಮಾರ್ ಅವರನ್ನು ಶಾಲು, ಹಾರಾರ್ಪಣೆ ಮಾಡಿ ಸನ್ಮಾನಿಸಿದರು.

LEAVE A REPLY

Please enter your comment!
Please enter your name here