ಹಿಜಾಬ್ ವಿಚಾರವನ್ನು  ಎರಡು ಕೋಮುವಾದಿ ಸಂಘಟನೆಗಳು ಶಾಶ್ವತ-ವಿವಾದವನ್ನಾಗಿಸಿ ರಾಜಕೀಯ ಲಾಭಗಳಿಸುವ ಷಡ್ಯಂತ್ರ-ಮಹಮ್ಮದ್ ಅಲಿ

ಪುತ್ತೂರು: ಹಿಜಾಬ್ ವಿವಾದದ ಬಗ್ಗೆ ಕೋರ್ಟ್ ತೀರ್ಪು ನೀಡಿದೆ. ಆದರೆ ಅದನ್ನು ಪಾಲಿಸದೆ ಎರಡೂ ಕೋಮುವಾದಿ ಸಂಘಟನೆಗಳಿಂದ ಅದನ್ನು ಶಾಶ್ವತವಾಗಿ ಜೀವಂತವಿರಿಸಿ ತಮ್ಮ ರಾಜಕೀಯ ಲಾಭ ಗಳಿಸಲು ಷಡ್ಯಂತ್ರ ರೂಪಿಸಿದೆ. ಈ ಬಗ್ಗೆ ಸಮುದಾಯ ಜಾಗೃತರಾಗಬೇಕು ಎಂದು ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಹೆಚ್.ಮಹಮ್ಮದ್ ಅಲಿಯವರು ಆರೋಪಿಸಿದರು. ಅವರು ಪುತ್ತೂರು  ಬ್ಲಾಕ್‌  ಕಾಂಗ್ರೇಸ್ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

 


ಕೆಲವು ಸಮಯಗಳ ಹಿಂದೆ ಶಿಕ್ಷಣ ಸಂಸ್ಥೆಯೊಂದರಲ್ಲಿ ಆರಂಭವಾದ ಹಿಜಾಬ್ ವಿವಾದವನ್ನು ಅಲ್ಲಿನ ಶಾಲಾ ಆಡಳಿತ ಮಂಡಳಿ ಹಾಗೂ ಅಲ್ಲಿನ ಸಮುದಾಯದವರು ಸೇರಿಕೊಂಡು ಬಗೆಹರಿಸಿಕೊಳ್ಳಬೇಕಾಗಿತ್ತು. ಆದರೆ ಆ ವಿವಾದವನ್ನು ಈಗ ರಾಜ್ಯ ವ್ಯಾಪಿ ಎಲ್ಲಾ ವಿದ್ಯಾಸಂಸ್ಥೆಗಳಲ್ಲಿ ಹಬ್ಬಿಸುವ ಕೆಲಸ ಎರಡು ಕೋಮುವಾದಿ ಸಂಘಟನೆಗಳಿಂದ ಮಾಡಲಾಗುತ್ತಿದೆ ಎಂದು ಅಲಿ ಅವರು ಹೇಳಿದರು.

ಹಿಜಾಬ್ ವಿವಾದ  ಆರಂಭವಾದದ್ದು ಎರಡು ಕೋಮುವಾದಿ ಸಂಘಟನೆಗಳ ಷಡ್ಯಂತ್ರಗಳಿಂದಲೇ. ನೀವು ವಿವಾದವನ್ನು ಎಬ್ಬಿಸಿ ಆ ಬೆಂಕಿಗೆ ನಾವು ತುಪ್ಪ ಸುರಿಯುತ್ತೇವೆ ಎಂಬಂತೆ ಈ ಎರಡು ಸಂಘಟನೆಗಳ ಶಡ್ಯಂತ್ರದಿಂದಾಗಿ ಇವತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿವಾದ ಸುದ್ದಿಯಾಗಿದೆ ಎಂದ ಅವರು.

ಇವತ್ತು ಈ ಹಿಜಾಬ್ ವಿವಾದ ಕೋರ್ಟ್ ಮೆಟ್ಟಿಲೇರಿದೆ.  ಕ್ಲಾಸ್ ರೂಮಿನ ಒಳಗೆ ಹಿಜಾಬ್ ಧರಿಸಿಕೊಂಡು ಹೋಗಬಾರದು ಎಂದು  ಕೋರ್ಟ್‌ ಆದೇಶಿಸಿದೆ. ಈ ಆದೇಶವನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕೆಂದು ಸಮುದಾಯ ಕೂಡ ಆ ತೀರ್ಪನ್ನು ಒಪ್ಪದಂತ ವ್ಯವಸ್ಥೆಯಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಮಾಡುವ ವ್ಯವಸ್ಥೆಯಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ತೀರ್ಮಾನವಾಗುವರೆಗೆ ಈ ಆದೇಶವನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು  ಹೇಳಿದರು.

ಹಿಜಾಬ್ ವಿವಾದದ ಬಗ್ಗೆ ಗೊಂದಲ ಉಂಟುಮಾಡಲು ಮತ್ತು ಜೀವಂತವಾಗಿರಿಸುವ ಕೆಲಸ ಆರಂಭದಿಂದಲೇ ನಡೆಯಿತು. ವಿವಿಧ ಜಿಲ್ಲೆಗಳ ಮುಸ್ಲಿಂ ಮುಖಂಡರುಗಳು ನ್ಯಾಯಾಲಯದ ತೀರ್ಪನ್ನು ಪಾಲಿಸಿಕೊಂಡು ಮುಂದೆ ನಾವು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವ ಎಂದು ಸಮುದಾಯಕ್ಕೆ ಕರೆ ನೀಡಲಾಗಿತ್ತು. ಕೋರ್ಟ್ ತೀರ್ಪಿನಲ್ಲಿ ಹಿಜಾಬ್ ಇಸ್ಲಾಂ ಧರ್ಮದ ಅಂಗವಲ್ಲ ಎಂದು ಉಲ್ಲೇಖಿಸಲಾಗಿತ್ತು. ಅದರ ಬಗ್ಗೆ ಅಸಮಾಧಾನಗೊಂಡು ಈ ಬಗ್ಗೆ ರಾಜ್ಯಾದಾದ್ಯಂತ ಯಾರಿಗೂ ತೊಂದರೆ ಆದರ ರೀತಿಯಲ್ಲಿ ಮೌನವಾಗಿ ಮುಸ್ಲಿಮರು ಸ್ವಂಪ್ರೇರಿತರಾಗಿ ಬಂದ್ ಆಚರಿಸಿದ್ದರು. ಬಳಿಕ ಎಲ್ಲಾ ಸಮುದಾಯದವರು ಹಿಜಾಬ್ ಕ್ಲಾಸಿನೊಳಗೆ ಹಾಕದಂತೆ ವಿದ್ಯಾರ್ಥಿಗಳ ಮನವೊಲಿಸುವ ಪ್ರಯತ್ನ ನಡೆಯಿತು.

 

ಹಿಜಾಬ್‌ನ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವಂತೆ ಹಾಗೂ ಕೋರ್ಟ್‌ಗೆ ಹೋಗದಂತೆ ಸಮುದಾಯ ಹೇಳಿದರೂ ಹಠಕಟ್ಟಿ ನ್ಯಾಯಾಲಯದ ಮೆಟ್ಟಿಲೇರಲಾಯಿತು. ಇಂದು ಇದರ ಸಲುವಾಗಿ ಹಿಜಾಬ್‌ನ್ನು ಧರಿಸಿಕೊಂಡು ಹೋಗುವಂತ ಸಂಸ್ಥೆಗಳು ಕೂಡ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿದು ಹಿಜಾಬ್ ಧರಿಸಿಕೊಂಡು ಬರಬಾರದೆಂದು ಆದೇಶಿಸಿದೆ. ಇದಕ್ಕೆಲ್ಲ ಕೋಮುವಾದಿ ಸಂಘಟನೆಗಳು ಕಾರಣವಾಗಿದ್ದು ಮುಗ್ಧ ಮನಸ್ಸಿನ ವಿದ್ಯಾರ್ಥಿಗಳನ್ನು ತಲೆಕೆಡಿಸಿ ನಮಗೆ ವಿದ್ಯೆ ಇಲ್ಲದಿದ್ದರೂ ಪರವಾಗಿಲ್ಲ. ಹಿಜಾಬ್‌ನ ಬಗ್ಗೆ ಹೋರಾಟ ಮಾಡುವಂತೆ ಪ್ರೇರೇಪಿಸಿ ಇದಕ್ಕೆಲ್ಲ ಕಾರಣ ಎಂದು ಅವರು ಹೇಳಿದರು.

 

ಇದೀಗ ಮತ್ತೆ ಕೋರ್ಟ್ ತೀರ್ಪಿನಂತೆ ನಡೆದುಕೊಳ್ಳದೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡು ವಿದ್ಯಾ ಸಂಸ್ಥೆಗಳಿಗೆ ಬರುತ್ತಿರುವುದು, ಇವರಿಗೆ ಮಾತ್ರವೇ ಇಸ್ಲಾಂ ಧರ್ಮ ಇರುವುದೇ. ಇವರು ಮಾತ್ರ ಇಸ್ಲಾಂ ಧರ್ಮ ಪಾಲಿಸುವುದೇ? ಕ್ಲಾಸ್ ರೂಂನಲ್ಲಿ ಹಿಜಾಬ್ ತೆಗೆದಿಟ್ಟು ಹೋಗುವ ವಿದ್ಯಾರ್ಥಿನಿಯರು ಧರ್ಮಭ್ರಷ್ಟರೇ? ಎಂದು ನಾವು ಆಲೋಚಿಸಬೇಕಾಗಿದೆ. ಚುನಾವಣೆ ಮುಗಿಯುವರೆಗೆ ಈ ಎರಡೂ ಸಂಘಟನೆಗಳಿಂದಲೂ ಈ ರೀತಿಯ ವಿವಾದ ಸೃಷ್ಠಿಯಾಗುತ್ತಲೇ ಇರುತ್ತದೆ. ವಿವಾದಗಳನ್ನು ಯಾವುದೇ ಮೂಲಕ ಪರಿಹರಿಸಿದರೂ ಕೂಡ ಆ ವಿವಾದದ ಬಿಸಿ ಆರದೆ ಹೋಗದ ರೀತಿಯಲ್ಲಿ ಇವತ್ತು ಈ ಎರಡು ಕೋಮುವಾದಿ ಸಂಘಟನೆಗಳು ಪ್ರಯತ್ನಿಸುತ್ತಲೇ ಇರುತ್ತದೆ ಎಂದ ಆಲಿಯವರು. ಕೋರ್ಟ್ ಆದೇಶವಿದ್ದರೂ ಇವತ್ತು ತೀರ್ಪು ಬರುವ ಮೊದಲೇ ವಿವಾದವನ್ನು ಜೀವಂತವಾಗಿಡುವ ಕೆಲಸವನ್ನು ವಿದ್ಯಾರ್ಥಿನಿಯರ ತಲೆ ಹಾಳು ಮಾಡಿ ಅವರ ಮನಸ್ಸನ್ನು ಕೆಡಿಸಿ ಈ ಸಂಘಟನೆಗಳು ಕುಮ್ಮಕ್ಕು ಕೊಡುತ್ತಿದೆ. ಮತ್ತು ಷಡ್ಯಂತ್ರ ಮಾಡುತ್ತಿದೆ ಎಂದರು.

ಕೋರ್ಟ್ ತೀರ್ಪನ್ನು ಒಪ್ಪಬೇಕು. ಸಮುದಾಯ ಹೇಳಿದಾಗ ಕೆಲವು ವಿದ್ಯಾರ್ಥಿಗಳು ನಾವು ಮಾತ್ರ ಹಿಜಾಬ್ ಧರಿಸಿಕೊಂಡು ಹೋಗುತ್ತೇವೆ ಎಂಬ ಹಠಮಾರಿತನ ಯಾಕೆ? ಸಾವಿರಾರು ಮುಸ್ಲಿಂ ವಿದ್ಯಾರ್ಥಿನಿಯರು ಕ್ಲಾಸಿನೊಳಗೆ ಹೋಗುವಾಗ ಹಿಜಾಬ್ ತೆಗೆದಿಟ್ಟು ಹೋಗುತ್ತಿರುವಾಗ ಕೇವಲ ಬೆರಳೆಣಿಕೆಯ ವಿದ್ಯಾರ್ಥಿನಿಯರು ಈ ತರಹದ ವಿವಾದವನ್ನು ಎಬ್ಬಿಸುವ ವಿಚಾರ ಇದರ ಹಿಂದಿರುವ ಷಡ್ಯಂತ್ರವನ್ನು ಜನರಿಗೆ ತಿಳಿಸುವ ಅಗತ್ಯವಿದೆ ಎಂದರು.

ಹಿಜಾಬ್ ವಿವಾದದ ಬಗ್ಗೆ ಯು.ಟಿ ಖಾದರ್‌ರವರ ಹೆಸರವನ್ನು ಎಳೆದು ತರಲಾಗುತ್ತಿದೆ. ಅವರು ಹಿಜಾಬ್ ವಿವಾದ ಬಗ್ಗೆ ಸ್ಪಂದಿಸಲಿಲ್ಲ ಎಂದು ಆಪಾದಿಸಲಾಗುತ್ತಿದೆ. ಯು.ಟಿ ಖಾದರ್ ಜಿಲ್ಲೆಯ ಸಚಿವರೇ ಅಥವಾ ಅವರ ಸರಕಾರವಿದೆಯೇ? ಸುಮ್ಮನೆ ಯು.ಟಿ ಖಾದರ್‌ರವರ ಹೆಸರನ್ನು ಎಳೆದು ತಂದು ಸಂಘಟನೆಯವರ ಕುಮ್ಮಕ್ಕಿನಿಂದ ವಿದ್ಯಾರ್ಥಿನಿಯರನ್ನು ಬಲಿಪಶು ಮಾಡಲಾಗುತ್ತಿದೆ. ನಮ್ಮ ಏನು ಧರ್ಮವಿದೆ ಅದು ನಮ್ಮ ಮನೆಯಲ್ಲಿ ನಮ್ಮ ಆಚರಣೆಯಲ್ಲಿ ಇರಬೇಕು ಎಂದು ಅವರು ಹೇಳಿದರು.

ಹಿಜಾಬ್ ವಿವಾದ ಇಲ್ಲದಿರುತ್ತಿದ್ದರೆ ಎರಡು ಸಂಘಟನೆಗಳಿಗೆ ಕೆಲಸವೇ ಇರುತ್ತಿರಲಿಲ್ಲ. ಲಾಭವಾಗುತ್ತಿರಲಿಲ್ಲ:
ಹಿಜಾಬ್ ವಿವಾದ ಇಲ್ಲದಿರುತ್ತಿದ್ದರೆ ಎರಡು ಸಂಘಟನೆಗಳಿಗೆ ಕೆಲಸವೇ ಇರುತ್ತಿರಲಿಲ್ಲ ಮತ್ತು ಎರಡೂ ಸಂಘಟನೆಗಳಿಗೆ ಲಾಭವಾಗುತ್ತಿರಲಿಲ್ಲ. ಲಾಭವಾಗಬೇಕಾದರೆ ಇವತ್ತು ಈ ವಿವಾದವನ್ನು ಜೀವಂತವಾಗಿಡಬೇಕು. ಸಂಘಟನೆಗಳ ಹಠಮಾರಿತನದಿಂದಲೇ ಈ ವಿವಾದ ಜೀವಂತವಾಗಿದೆ. ಇದರಿಂದಾಗಿ ಸಂಘ ಪರಿವಾರದ ಸಂಘಟನೆಗಳಿಗೆ ಲಾಭವಾಗುತ್ತದೆ ವಿನಃ ಮುಸ್ಲಿಂ ಸಮುದಾಯಕ್ಕೆ ಲಾಭವಾಗುವುದಿಲ್ಲ. ಎಲ್ಲಾ ಸಮುದಾಯದವರು ಈ ವಿಚಾರವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಸಂಘ ಪರಿವಾರದ ಸಂಘಟನೆಗಳು ಮುಸ್ಲಿಮರು ಕೋರ್ಟ್ ತೀರ್ಪನ್ನು ಪಾಲಿಸುತ್ತಿಲ್ಲ ಎಂದು ಹೇಳಿಕೊಳ್ಳುತಿದ್ದಾರೆ. ಮುಸ್ಲಿಮರು ಅಯೋಧ್ಯ ವಿಷಯದಲ್ಲಿ ಎಷ್ಟೊಂದು ನೋವಿದ್ದರೂ, ಅಸಮಾಧಾನವಿದ್ದರೂ ಅದನ್ನು ಮರೆತು ಸುಪ್ರಿಮ್ ಕೋರ್ಟ್ ತೀರ್ಪನ್ನು ಪಾಲಿಸಲಿಲ್ಲವೇ? ಅದೇ ರೀತಿ ಹಿಜಾಬ್ ವಿವಾದದ ಬಗ್ಗೆ ಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಅದನ್ನು ಪಾಲಿಸಿಕೊಂಡು ಬರಬೇಕು ಎಂದು ಮುಸ್ಲಿಂ ಸಮುದಾಯದ ಒಕ್ಕೊರಲ ಆಗ್ರಹಿಸುವುದಾಗಿ  ಮಹಮ್ಮದ್‌ ಆಲಿ  ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ವಿಹೆಚ್‌ಎ. ಶಕೂರ್ ಹಾಜಿ, ಹಾಗೂ ಸಿರಿಲ್ ರೋಡ್ರಿಗಸ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.