ಕಡಬ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರಿಗೆ ಸಿಹಿ ಸುದ್ದಿ ಕೊನೆಗೂ ಹಣಕಾಸು ಇಲಾಖೆಯಿಂದ ವೇತನ ಬಿಡುಗಡೆ

0

ಕಡಬ: ತಾಂತ್ರಿಕ ಕಾರಣಗಳಿಂದ ಕಡಬ ತಾಲೂಕಿನ 7 ಸರಕಾರಿ ಪ್ರೌಢ ಶಾಲೆಗಳ ಶಿಕ್ಷಕರಿಗೆ ವೇತನ ಬಾರದೆ ತೊಂದರೆಗೆ ಒಳಗಾಗಿರುವುದನ್ನು ತಿಳಿದುಕೊಂಡ ಸರಕಾರ ಕೊನೆಗೂ ವೇತನ ಬಿಡುಗಡೆ ಮಾಡಿದೆ. ಈ ಬಗ್ಗೆ ಇದ್ದ ತಾಂತ್ರಿಕ ತೊಂದರೆಯನ್ನು ನಿವಾರಣೆಗೊಳಿಸಿ ಕಡಬ ತಾಲೂಕಿಗೆ 166.01 ಲಕ್ಷ ಹಣ ಬಿಡುಗಡೆಗೊಳಿಸಿ ಆದೇಶ ನೀಡಲಾಗಿದೆ.

ಕಡಬ ಹೊಸ ತಾಲೂಕಿನ 9 ಸರಕಾರಿ ಪ್ರೌಢ ಶಾಲೆಗಳ ಪೈಕಿ 7 ಶಾಲೆಗಳ ಶಿಕ್ಷಕರಿಗೆ ಕಳೆದೆರಡು ತಿಂಗಳಿನಿಂದ ವೇತನ ಬಾರದೆ ಹೆಚ್ಚಿನ ಶಿಕ್ಷಕರು ಕಂಗಲಾಗಿದ್ದರು. ಈ ಹಿಂದೆ ಪುತ್ತೂರು ತಾಲೂಕಿನಲ್ಲಿದ್ದ ಕಡಬ ತಾಲೂಕಿನಲ್ಲಿರುವ ಸವಣೂರು, ಕಾಣಿಯೂರು, ದೊಳ್ಪಾಡಿ, ಕಡಬ, ಪಡುಬೆಟ್ಟು, ಕೊಣಾಲು, ಪಾಲ್ತಾಡಿ ಮಂಜುನಾಥನಗರ, ಈ ಹಿಂದೆ ಸುಳ್ಯ ತಾಲೂಕಿನಲ್ಲಿದ್ದ ಏನೆಕಲ್ಲು, ಎಡಮಂಗಲ ಸರಕಾರಿ ಪ್ರೌಢ ಶಾಲೆಗಳನ್ನು ಬೇರ್ಪಡಿಸಿ ನೂತನ ಕಡಬ ತಾಲೂಕಿಗೆ ಸೇರ್ಪಡೆಗೊಳಿಸಿ ವಿಂಗಡಣೆ ಮಾಡಲಾಗಿದೆ, ಆದರೆ ಹಣಕಾಸು ಇಲಾಖೆಯಿಂದ ಕಡಬ ತಾಲೂಕಿನ ಶಿಕ್ಷಕರ ವೇತನ ಪುತ್ತೂರು ಮತ್ತು ಸುಳ್ಯ ತಾಲೂಕಿಗೆ ಮೊದಲಿನಂತೆ ಹಣ ಬಿಡುಗಡೆಯಾಗಿದೆ, ಆದರೆ ಈ ಹಿಂದಿನಂತೆ ಪುತ್ತೂರು ತಾಲೂಕಿನಿಂದ ಕಡಬದ ೭ ಪ್ರೌಢ ಶಾಲೆಗಳ ಶಿಕ್ಷಕರಿಗೆ ವೇತನ ನೀಡಲು ಪುತ್ತೂರು ತಾಲೂಕಿನ ಲಿಸ್ಟ್‌ನಲ್ಲಿ ಕಡಬ ತಾಲೂಕಿನ 7 ಪ್ರೌಢ ಶಾಲೆಗಳು ಇಲ್ಲದೇ ಪ್ರತ್ಯೇಕವಾಗಿ ಕಡಬ ತಾಲೂಕಿನ ಪಟ್ಟಿಯಲ್ಲಿರುವುದು ವೇತನ ನೀಡದಿರಲು ಕಾರಣವಾಗಿತ್ತು. ಇದರಿಂದ ಕಡಬ ತಾಲೂಕಿನ ಸುಮಾರು 70ರಿಂದ 75 ಶಿಕ್ಷಕರು ವೇತನ ಇಲ್ಲದೆ ಪರದಾಡುವಂತಾಗಿತ್ತು.

ಇದೀಗ ಎಚ್ಚೆತ್ತುಕೊಂಡ ಹಣಕಾಸು ಇಲಾಖೆ ಈ ಹಿಂದೆ ಉಂಟಾಗಿರುವ ತಾಂತ್ರಿಕ ತೊಂದರೆಯನ್ನು ನಿವಾರಣೆಗೊಳಿಸಿ ವೇತನ ಪಾವತಿಸಲು ಹಣ ಬಿಡುಗಡೆಗೊಳಿಸಿ ಆದೇಶ ನೀಡಲಾಗಿದೆ.

ಸುದ್ದಿ ವರದಿ ಫಲಶ್ರುತಿ

ಕಡಬ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಸಿಗದೆ ತೊಂದರೆಗೆ ಒಳಗಾಗಿರುವ ಕುರಿತು ಜೂ.೮ರಂದು ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಸಾರವಾಗಿತ್ತು, ರಾಜ್ಯದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವರದಿಯನ್ನು ಗಮಿನಿಸಿ ಎಚ್ಚೆತ್ತುಕೊಂಡು ಆಗಿರುವ ತಾಂತ್ರಿಕ ತೊಂದರೆಯನ್ನು ನಿವಾರಿಸಿದ್ದಾರೆ.

ತಾಂತ್ರಿಕ ತೊಂದರೆ ನಿವಾರಿಸಿದ  ಎಲ್ಲರಿಗೂ ಕೃತಜ್ಞತೆಗಳು-ಅಬ್ರಹಾಂ. ಎಸ್.ಎ.

ಕಡಬ ತಾಲೂಕಿನ ಪ್ರೌಢ ಶಾಲಾ ಶಿಕ್ಷಕರಿಗೆ ವೇತನ ಸಿಗದೆ ತೊಂದರೆಗೆ ಒಳಗಾಗಿರುವ ಕುರಿತು ಜೂ.8ರಂದು ಸುದ್ದಿ ಬಿಡುಗಡೆಯಲ್ಲಿ ವರದಿ ಪ್ರಸಾರವಾಗಿತ್ತು, ರಾಜ್ಯದ ಹಣಕಾಸು ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಈ ವರದಿಯನ್ನು ಗಮಿನಿಸಿ ಎಚ್ಚೆತ್ತುಕೊಂಡು ಆಗಿರುವ ತಾಂತ್ರಿಕ ತೊಂದರೆಯನ್ನು ನಿವಾರಿಸಿದ್ದಾರೆ

ಕಳೆದೆರಡು ತಿಂಗಳಿನಿಂದ ವೇತನ ಇಲ್ಲದೆ ಶಿಕ್ಷಕರು ತೊಂದರೆಗೊಳಗಾಗಿದ್ದಾರೆ, ಇದನ್ನು ಮನಗಂಡ ಅಧಿಕಾರಿಗಳು, ಜನಪ್ರತಿನಿಧಿಗಳು ಸಹಕಾರ ನೀಡಿ, ಹಣಕಾಸು ಇಲಾಖೆಯಲ್ಲಿ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಿದ್ದಾರೆ, ಶಿಕ್ಷಕರು ವೇತನ ಸಿಗದೆ ತೊಂದರೆಗೆ ಒಳಗಾಗಿರುವುದನ್ನು ಮನಗಂಡು ವರದಿ ಮಾಡಿ, ಎಲ್ಲರ ಕಣ್ಣು ತೆರೆಸಿದ ಸುದ್ದಿ ಬಿಡುಗಡೆ ಪತ್ರಿಕೆಗೂ ಕೃತಜ್ಞತೆಗಳು.

ಅಬ್ರಹಾಂ ಎಸ್.ಎ. ಪುತ್ತೂರು ತಾಲೂಕು ಪ್ರೌಢ ಶಾಲಾ ಶಿಕ್ಷಕರ ಸಂಘ

LEAVE A REPLY

Please enter your comment!
Please enter your name here