ಪರಿಷ್ಕೃತ ಪಠ್ಯವು ಸ್ತ್ರೀ ವಿರೋಧಿಯಾಗಿದೆ: ದಿವ್ಯಪ್ರಭಾ ಚಿಲ್ತಡ್ಕ

0

  • ಪಠ್ಯ ಪುಸ್ತಕ ಬಿಜೆಪಿಯ ಪ್ರಣಾಳಿಕೆಯಂತಿದೆ:ಶೈಲಜಾ ಅಮರನಾಥ್

ಪುತ್ತೂರು: ‘ಶಿಕ್ಷಣದ ವ್ಯವಸ್ಥೆ ಅಧೋಗತಿಗೆ ತಲುಪಿದೆ.ಪಠ್ಯಪುಸ್ತಕದ ಅವ್ಯವಸ್ಥೆಗಳು ಎದ್ದು ಕಾಣುವಂತಾಗಿದೆ.ರೋಹಿತ್ ಚಕ್ರತೀರ್ಥ ಸೃಷ್ಠಿಸಿರುವ ಅನಾಹುತವನ್ನು ಸರಿದೂಗಿಸಲು ಅಸಾಧ್ಯ ಮತ್ತು ಸ್ತ್ರೀಯರ ಕುರಿತಾದ ಪಠ್ಯಗಳನ್ನು ಅಳವಡಿಸದೆ.ಸ್ತ್ರೀ ವಿರೋಧಿ ಪಠ್ಯಪುಸ್ತಕವಾಗಿ ಮೂಡಿಬಂದಿದೆ’ಎಂದು ರಾಜ್ಯ ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಡ್ಕ ಆರೋಪಿಸಿದರು.

 

ಜೂ.೮ರಂದು ಸುದ್ದಿ ಮೀಡಿಯಾ ಸೆಂಟರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ ಕೇವಲ ಒಂಭತ್ತೇ ಜನರನ್ನು ಸೇರಿಸಿಕೊಳ್ಳಲಾಗಿದೆ.ಜೊತೆಗೆ ಈ ಸಮಿತಿಯಲ್ಲಿ ಯಾವುದೇ ಮಹಿಳೆಯರನ್ನು ಸೇರಿಸಿಕೊಂಡಿಲ್ಲ.ಇದು ಬಿಜೆಪಿಯವರು ಸ್ತ್ರೀಯರಿಗೆ ನೀಡಿದ ಅಗೌರವವಾಗಿದೆ.ಕಾಂಗ್ರೆಸ್ ಎಂದಿಗೂ ಈ ರೀತಿಯ ಸ್ತ್ರೀ ವಿರೋಧಿ ಧೋರಣೆ ತೋರಿಲ್ಲ. ಬದಲಾಗಿ ಸ್ತ್ರೀ ಪರ ಯೋಜನೆಗಳನ್ನು ಜಾರಿಗೊಳಿಸಿದೆ. ರೋಹಿತ್ ಚಕ್ರತೀರ್ಥರು ಒಂದೊಮ್ಮೆ ಐ.ಐ.ಟಿ ಮತ್ತೊಮ್ಮೆ ಸಿ.ಇ.ಟಿ ಪ್ರೊಫೆಸರ್ ಎಂಬುದಾಗಿ ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿ ಅಧ್ಯಕ್ಷನಾಗಲು ಅದರದೇ ಆದ ಮಾನದಂಡಗಳಿವೆ ಅವೆಲ್ಲವನ್ನೂ ಉಲ್ಲಂಸಿ ಸಾಮಾಜಿಕ ಜಾಲತಾಣಗಳ ಟ್ರೋಲರ್ ನನ್ನು ಅಧ್ಯಕ್ಷರನ್ನಾಗಿ ಮಾಡಿರುವುದು ವಿಷಾದನೀಯ ಎಂದರು. ಜ್ಞಾನ ಇಲ್ಲದ,ಕುವೆಂಪು ಹಾಗೂ ನಾಡಗೀತೆಗೆ ಅವಮಾನ ಮಾಡಿದ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಗೆ ಸೇರಿಸಿದ್ದಾರೆ ಎಂದ ಅವರು ಬಿಜೆಪಿ ಸರ್ಕಾರವು ಜನಪರ ಯೋಜನೆಗಳನ್ನು ತರುವ ಬದಲು ಧರ್ಮದ ವಿಷಬೀಜ ಬಿತ್ತಿ ಆಡಳಿತ ನಡೆಸುತ್ತಿದೆ.ಬಿಜೆಪಿಗೆ ಆರ್.ಎಸ್.ಎಸ್ ಆಕ್ಸಿಜನ್ ಇದ್ದಂತೆ ಆರ್.ಎಸ್.ಎಸ್ ಹೆಸರು ಮುಂದಿಟ್ಟು ಅವರು ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದರು. ಬಿಜೆಪಿ ಮಕ್ಕಳ ಬುಡಕ್ಕೆ ಕೊಡಲಿಯೇಟು ನೀಡುತ್ತಿದೆ.ಇನ್ನೂ ಕೂಡ ೫೦% ಪಠ್ಯ ಪುಸ್ತಕ ಸರಬರಾಜು ಆಗಿಲ್ಲ,ಕಲಾವಿದರು,ಕನ್ನಡಪರ ಸಂಘಟನೆಗಳು ಒಗ್ಗಟ್ಟಾಗಿ ಈ ಬಗ್ಗೆ ಧ್ವನಿ ಎತ್ತಲಿ, ಮುಂದಕ್ಕಾದರೂ ಸರ್ಕಾರ ಈ ಗೊಂದಲಮಯ ನೀತಿಯನ್ನು ಸರಿಪಡಿಸಿಕೊಳ್ಳಲಿ’ಎಂದವರು ಹೇಳಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಶೈಲಜಾ ಅಮರನಾಥ್ ಮಾತನಾಡಿ ಇಂದು kpcc ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕದ ವಿಚಾರದಲ್ಲಿ ಅವಮಾನಕ್ಕೆ ಒಳಗಾದ ದಾರ್ಶನಿಕರು,ಮಠಾಧೀಶರ ಪರವಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.ಪ್ರಸ್ತುತ ಸಾಮಾಜಿಕ ನ್ಯಾಯ ಇಲ್ಲ,ಸಮಾಜ ಸುಧಾರಕರಾಗಿ ಗುರುತಿಸಿಕೊಳ್ಳುತ್ತಿದ್ದ ಲೇಖಕರು,ಕವಿಗಳು ಬೀದಿಗಿಳಿದಿರುವುದು ಅರಾಜಕತೆಯನ್ನು ಸೃಷ್ಟಿಸಿದೆ.ಬರಗೂರು ಸಮಿತಿಯಲ್ಲಿ ೧೭೨ ಜನರಿದ್ದರು ಆದರೆ ಈ ಸಮಿತಿಯಲ್ಲಿರುವ ಸಂಖ್ಯೆಯನ್ನು ನಾವು ಪ್ರಶ್ನಿಸಬೇಕಾಗಿದೆ.ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥರು ಪಠ್ಯ ಪರಿಷ್ಕರಣೆಯಲ್ಲಿ ರಾಜಕೀಯ ಮಾಡುತ್ತಿದ್ದಾರೆ.ಬರಗೂರರಿಗೆ ಪ್ರಶ್ನೆ ಮಾಡುವ,ಚಾಲೆಂಜ್ ಹಾಕುವ ಯೋಗ್ಯತೆ ಚಕ್ರತೀರ್ಥರಿಗೆ ಇಲ್ಲ.ರಾಜ್ಯ ಸೆಕ್ಯುಲರ್ ಆಗಿರಬೇಕು.ಕಾಂಗ್ರೆಸ್ ಸರ್ಕಾರ ಇದ್ದಾಗ ಮಾತ್ರ ಇದು ಸಾಧ್ಯವಾಗಿತ್ತು.ಈಗಿನ ಮುಖ್ಯಮಂತ್ರಿಗಳು ಸೂಕ್ಷ್ಮತೆ ತಿಳಿಯದವರಾಗಿದ್ದಾರೆ.ಬಿಜೆಪಿ ತನ್ನ ಪ್ರಣಾಳಿಕೆಯನ್ನು ಪಠ್ಯ ಪುಸ್ತಕವಾಗಿ ನೀಡುತ್ತಿರುವಂತಿದೆ.ಇದು ಉತ್ತಮ ಬೆಳವಣಿಗೆಯಲ್ಲ ಎಂದರಲ್ಲದೆ ಸದ್ಯಕ್ಕೆ ಸರ್ಕಾರ ಹಳೆಯ ಪಠ್ಯ ಪುಸ್ತಕವನ್ನೇ ಮುಂದುವರೆಸಿ ಮುಂದಿನ ವರ್ಷ ಉತ್ತಮ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಒದಗಿಸಿಕೊಡಲಿ’ ಎಂದರು

ನೂತನ ಪಠ್ಯಪುಸ್ತಕದಲ್ಲಿ ಆರ್.ಎಸ್.ಎಸ್ ಹಿರಿಯರಾದ ಹೆಡ್ಗೇವಾರ್ ಕುರಿತು ಪಠ್ಯ ಸೇರಿಸಲಾಗಿದೆ.ಆರ್.ಎಸ್.ಎಸ್ ಗೆ ಅಷ್ಟೊಂದು ಗೌರವ ಕೊಡುವ ಬಿಜೆಪಿಯ ಅನೇಕರು ಸಂಘದ ಪ್ರಚಾರಕ್ ಆಗಿ ಕರ್ತವ್ಯ ನಿರ್ವಹಿಸಿದವರು.ಆರ್.ಎಸ್.ಎಸ್ ನಲ್ಲಿ ಸ್ವಯಂ ಸೇವೆ ತತ್ವ ಜಾರಿಯಲ್ಲಿದೆ ಐಶಾರಾಮಿ ಜೀವನಕ್ಕೆ ಅವಕಾಶವಿಲ್ಲ ಆದರೆ ಮೋದಿ,ರಾಮನಾಥ್ ಕೋವಿಂದ್, ರಾಜ್ಯದ ನಳಿನ್ ಕುಮಾರ್ ಕಟೀಲ್,ಶೋಭಾ ಕರಂದ್ಲಾಜೆಯೂ ಆರ್.ಎಸ್.ಎಸ್ ನವರೆಂದು ಹೇಳಿಕೊಂಡು ಕೂಡ ಐಶಾರಾಮಿ ಜೀವನ ನಡೆಸುತ್ತಿದ್ದಾರೆ.ಇದರಿಂದ ಹೊರಬಂದು ಆರ್‌ಎಸ್‌ಎಸ್‌ನ ತತ್ವಗಳಿಗೆ ಸರಿಯಾಗಿ ನಡೆದುಕೊಳ್ಳಲಿ.ದಿವ್ಯಪ್ರಭಾ ಚಿಲ್ತಡ್ಕ

LEAVE A REPLY

Please enter your comment!
Please enter your name here