ನೆಲ್ಯಾಡಿ ಬೆಥನಿ ಐಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ

0

ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ; ರೆ|ಫಾ| ಮೆಲ್ವಿನ್ ಮ್ಯಾಥ್ಯೂ

ನೆಲ್ಯಾಡಿ: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ, ಅದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ ನಿರಂತರವಾಗಿರಲಿ ಎಂದು ಬೆಥನಿ ಐಟಿಐ ನೆಲ್ಯಾಡಿ ಇದರ ನಿರ್ದೇಶಕರ ರೆ|ಫಾ| ಮೆಲ್ವಿನ್ ಮ್ಯಾಥ್ಯೂರವರು ಹೇಳಿದರು.


ಅವರು ವಿಶ್ವ ಪರಿಸರ ದಿನದ ಅಂಗವಾಗಿ ಬೆಥನಿ ಐಟಿಐ ನೆಲ್ಯಾಡಿಯ ಪರಿಸರದಲ್ಲಿ ಸಾಗುವಾನಿ ಸಸಿ ನೆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೆಟ್ಟ ಪ್ರತಿಗಿಡದದ ಪೋಷಣೆ, ರಕ್ಷಣೆ ತಾಯಿ ಮಗುವಿನ ಸಂಬಂದದಂತೆ ನಿರಂತರತೆಯಲ್ಲಿ ಇರಬೇಕು ಎಂದು ಅವರು ಹೇಳಿದರು. ಫಿಟ್ಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುಬ್ರಾಯ ನಾಯಕ್‌ರವರು ವಿಶ್ವ ಪರಿಸರ ದಿನದ ಬಗ್ಗೆ ಮಾತನಾಡಿದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್ ಸ್ವಾಗತಿಸಿ, ಎಲೆಕ್ಟ್ರೋನಿಕ್ಸ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ ವಂದಿಸಿದರು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here