ಪುತ್ತೂರು:ಉದ್ಯಮಿಗಳಾದ ರೋಷನ್ ರೈ ಬನ್ನೂರು ಹಾಗೂ ಗಿರಿಧರ ಹೆಗ್ಡೆ ಪಾಲುದಾರಿಕೆಯಲ್ಲಿ ಮುಖ್ಯ ರಸ್ತೆಯ ಅರುಣಾ ಚಿತ್ರ ಮಂದಿರದ ಬಳಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆ `ಶಿವ ಆರ್ಕೇಡ್’ ಜೂ.10ರಂದು ಉದ್ಘಾಟನೆಗೊಂಡಿತು.
ಮಾಜಿ ಸಚಿವ ಬಿ.ರಮಾನಾಥ ರೈಯವರು ನೂತನ ವಾಣಿಜ್ಯ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪುತ್ತೂರು ಜಿಲ್ಲೆಯಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ನಗರ. ಜಿಲ್ಲೆಯಲ್ಲಿ ಮಂಗಳೂರು ಹೊರತು ಪಡಿಸಿದರೆ ಪುತ್ತೂರೇ ದೊಡ್ಡ ನಗರ. ಇಲ್ಲಿ ಸಾಕಷ್ಟು ಉದ್ದಿಮೆಗಳು, ವಾಣಿಜ್ಯ ಮಳಿಗೆಗಳು ಪ್ರಾರಂಭಗೊಂಡಿದ್ದು ಅದಕ್ಕೆ ಶಿವ ಆರ್ಕೆಡ್ ಸೇರ್ಪಡೆಗೊಂಡಿದೆ ಎಂದರು. ಶ್ರಮಜೀವಿಯಾಗಿರುವ ರೋಷನ್ ರೈಯವರ ನಿರಂತರ ಶ್ರಮದ ಫಲವಾಗಿ ಸುಂದರ ಕಟ್ಟಡ ನಿರ್ಮಾಣಗೊಂಡಿದೆ. ಪುತ್ತೂರಿನ ಕೇಂದ್ರ ಭಾಗದಲ್ಲಿ ನಿರ್ಮಾಣಗೊಂಡಿರುವ ಶಿವ ಆರ್ಕೆಡ್ ವಾಣಿಜ್ಯ ಮಳಿಗೆ ಪುತ್ತೂರಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ ಮಾತನಾಡಿ, ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆ, ಸವಾಲುಗಳು ಎದುರಾಗಿತ್ತು. ಈ ಕಟ್ಟಡ ಶಕುಂತಳಾ ಶೆಟ್ಟಿಯವರದ್ದೇ ಎಂಬ ಊಹಾಪೋಹಗಳು ಜನರಲ್ಲಿ ಹರಿದಾಡುತ್ತಿದ್ದವು. ಶಕುಂತಳಾ ಶೆಟ್ಟಿಯವರ ಹಣವೆಲ್ಲಾ ರೋಷನ್ ರೈಯವರಲ್ಲಿದೆ ಎಂಬ ಅಪಪ್ರಚಾರಗಳೂ ನಡೆಯುತ್ತಿದ್ದವು. ಈಗ ಹಲವು ಸಮಸ್ಯೆ, ಸವಾಲುಗಳನ್ನು ಎದುರಿಸಿ ಸುಂದರ ಕಟ್ಟಡ ನಿರ್ಮಾಣಗೊಂಡು ಈಗ ಉದ್ಘಾಟನೆಯು ನಡೆದಿದ್ದು ಈಗ ನನ್ನ ಮೇಲಿದ್ದ ಸಮಸ್ಯೆಗಳು ಪಾರಾಗಿದೆ ಎಂದರು.
ಪುರಸಭಾ ಮಾಜಿನ ಅಧ್ಯಕ್ಷ ರಾಜೇಶ್ ಬನ್ನೂರು ಮಾತನಾಡಿ, ಕಟ್ಟಡ ನಿರ್ಮಾಣದಲ್ಲಿ ಹಲವು ಸಮಸ್ಯೆ, ಸವಾಲುಗಳನ್ನು ಮೆಟ್ಟಿನಿಂತು ಸುಂದರ ಕಟ್ಟಡ ನಿರ್ಮಾಣಗೊಂಡಿದ್ದು ಈಗ ರೋಷಣ್ ರೈಯವರು ಬೆಂಕಿಯಲ್ಲಿ ಅರಳಿದ ಹೂವಿನಂತಾಗಿದ್ದಾರೆ. ಸುಂದರ ಕಟ್ಟಡವು ಹೊನ್ನ ಕಿರೀಟದಂತೆ ಕಂಗೊಲಿಸುತ್ತಿದೆ. ಬೃಹತ್ ಕಟ್ಟಡ, ವಾಣಿಜ್ಯ ಮಳಿಗೆಗಳು ನಗರ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ. ಹೀಗಾಗಿ ಕಟ್ಟಡಗಳ ನಿರ್ಮಾಣವಾಗುವಾಗ ಸುಕಾ ಸುಮ್ಮನೆ ದೂರುಗಳನ್ನು ನೀಡುವುದನ್ನು ಬಿಟ್ಟು ನಮ್ಮೂರಿನ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.
ನಗರ ಸಭಾ ಮಾಜಿ ವಿಪಕ್ಷ ನಾಯಕ ಮಹಮ್ಮದ್ ಆಲಿ ಮಾತನಾಡಿ, ಕಟ್ಟಡ ನಿರ್ಮಾಣಕ್ಕೆ ನಗರ ಸಭೆ ಹಾಗೂ ಪೂಡಾದಲ್ಲಿನ ನಗರ ಯೋಜನಾ ಪ್ರಾಧಿಕಾರದ ನಿಯಮದಿಂದಾಗಿ ತಾಂತ್ರಿಕ ತೊಂದರೆಗಳಿವೆ. ನಿಯಮಗಳು ಆಯಾ ನಗರಗಳಿಗೆ ಅನುಗುಣವಾಗಿರಬೇಕು. ಇಲ್ಲಿ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದು ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ರೀತಿಯ ಕಾನೂನು ಪಾಲನೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವನ್ನೆಲ್ಲಾ ಸರಿ ಪಡಿಸುವ ಕೆಲಸ ಆಗಬೇಕಾಗಿದೆ ಎಂದರು
.
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ರೋಷನ್ ರೈಯವರು ಪುತ್ತೂರಿನಲ್ಲಿ ಎರಡು ಬೃಹತ್ ವಾಣಿಜ್ಯ ಮಳಿಗೆಗಳನ್ನು ನಗರ ಸಭೆಗೆ ಸಮರ್ಪಿಸಿದ್ದಾರೆ. ಸಮಸ್ಯೆಗಳು ಬಂದಾಗಲೇ ಅಂತಿಮವಾಗಿ ಎಲ್ಲವೂ ಸುಸೂತ್ರವಾಗಿ ನೆರವೇರುವುದು. ಕಟ್ಟಡವು ಉತ್ತಮ ರೀತಿಯಲ್ಲಿ ನಿರ್ಮಾಣಗೊಂಡಿದ್ದು ಪುತ್ತೂರಿನ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದರು.
ನಗರ ಸಭಾ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಪೂಡಾದ ಮಾಜಿ ಅಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ ಬೆಳ್ಳಿಪ್ಪಾಡಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಉದ್ಯಮಿ ಶಿವರಾಮ ಆಳ್ವ, ಸಚಿನ್ ಟ್ರೇಡಿಂಗ್ನ ಮ್ಹಾಲಕ ಮಂಜುನಾಥ ನಾಯಕ್, ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಮುರಳೀಧರ ರೈ ಮಠಂತಬೆಟ್ಟು, ಗುತ್ತಿಗೆದಾರ ಸೂರಜ್ ನಾಯರ್ ಕಲ್ಲಾರೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಡಾ. ಅಶೋಕ್ ಕುಮಾರ್ ರೈ, ನ್ಯಾಯವಾದಿ ಭಾಸ್ಕರ್ ಕೋಡಿಂಬಾಳ, ವಕೀಲ ಚಿದಾನಂದ ಬೈಲಾಡಿ, ಆರ್ಯಾಪು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶ ಗಣೇಶ್ ರೈ ಮೊಡಪ್ಪಾಡಿಮೂಲೆ, ಪುರೋಷತ್ತಮ ಶೆಟ್ಟಿ ಗೆನಸಿನಕುಮೇರು, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಉಮೇಶ್ ನಾಯಕ್, ಡಾ.ಹರಿಕೃಷ್ಣ ಪಾಣಾಜೆ, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಸಾಮೇತ್ತಡ್ಕ, ಯಂಗ್ ಬ್ರಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಅಭಿಷೇಕ್ ಬೆಳ್ಳಿಪ್ಪಾಡಿ, ಪಡೀಲು ವಿಘ್ನೇಶ್ವರ ಇಂಜಿನಿಯರಿಂಗ್ ವರ್ಕ್ಸ್ನ ಮ್ಹಾಲಕ ಸುಧೀರ್ ಶೆಟ್ಟಿ ತೆಂಕಿಲ, ರವಿಚಂದ್ರ ಎಪಿಎಂಸಿ, ರಮೇಶ್ ರೈ ಡಿಂಬ್ರಿ, ರಮೇಶ್ ನಾಯಕ್, ಗಿರಿಧರ್ ನಾಯಕ್ ದಂಪತಿ ಮಂಗಳೂರು, ಮೌರೀಸ್ ಮಸ್ಕರೇನ್ಹಸ್ ಸಾಮೆತ್ತಡ್ಕ ಜಯಂತ್ ಭಂಡಾರಿ,ಎನ್ಎಸ್ಯುಐ ರಾಜ್ಯ ಉಪಾಧ್ಯಕ್ಷ ಫಾರೂಖ್ ಬಾಯಬೆ, ಪಾಲುದಾರರ ರೋಶನ್ ರೈಯವರ ತಂದೆ ಸೀತರಾಮ ಶೆಟ್ಟಿ, ಸಹೋದರ ರೋಹಿತ್ ಬನ್ನೂರು, ಪಾಲುದಾರ ಗಿರಿಧರ ಹೆಗ್ಡೆ ಸಹೋದರ ತಾರನಾಥ ಹೆಗ್ಡೆ ಹಾಗೂ ಕುಟುಂಬಸ್ಥರು ಸಹಿತ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.
ಪಾಲುದಾರರಾದ ರೋಶನ್ ರೈ ಬನ್ನೂರು, ಗಿರಿಧರ್ ಹೆಗ್ಡೆ ಮತ್ತು ಸ್ವಸ್ತಿಕಾ ರೋಶನ್ ರೈ ಅಥಿತಿಗಳಿಗೆ ಹೂಗುಚ್ಛ, ಸ್ಮರಣಿಕೆ ನೀಡಿ ಗೌರವಿಸಿದರು. ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.