ಬಿಳಿನೆಲೆಯಲ್ಲಿ ಅರಣ್ಯ ಇಲಾಖೆ, ವಿವಿಧ ಸಂಸ್ಥೆಗಳ ಸಹಯೋಗದೊಂದಿಗೆ ಬಿತ್ತೋತ್ಸವ ಕಾರ್ಯಕ್ರಮ

0

ಕಡಬ: ಕರ್ನಾಟಕ ಅರಣ್ಯ ಇಲಾಖೆಯ ಮಂಗಳೂರು ವಿಭಾಗದ ಸುಬ್ರಹ್ಮಣ್ಯ ವಲಯದ ನೇತೃತ್ವದಲ್ಲಿ ಬಿಳಿನೆಲೆ ಗ್ರಾ.ಪಂ, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಬಿಳಿನೆಲೆ, ಸ.ಹಿ.ಪ್ರಾ. ಶಾಲೆ ಬಿಳಿನೆಲೆ, ಯುವಕ ಮಂಡಲ ಬಿಳಿನೆಲೆ ಹಾಗೂ ಇಕೋಕ್ಲಬ್ ಗೋಪಾಲಕೃಷ್ಣ ಪ್ರೌಢಶಾಲೆ ಬಿಳಿನೆಲೆ ಇವುಗಳ ಸಹಭಾಗಿತ್ವದಲ್ಲಿ ಬಿಳಿನೆಲೆಯಲ್ಲಿ ಸಸಿಗಳನ್ನು ನೆಡುವ ಹಾಗೂ ಬೀಜ ಬಿತ್ತುವ ಕಾರ್ಯಕ್ರಮ ನಡೆಯಿತು.

 


ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಮಾತನಾಡಿ ನಮಗೆ ಬದುಕಲು ಇರುವುದೊಂದೇ ಭೂಮಿ, ಈ ಭೂಮಿಯ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಸಸಿಗಳನ್ನು ನೆಟ್ಟು ಅದನ್ನು ಬೆಳೆಸಿ ಪೋಷಿಸಿದರೆ ಮಾನವನ ಜೀವನಕ್ಕೆ ಬೇಕಾದ ಆಮ್ಲಜನಕ ಮಾತ್ರವಲ್ಲ ಎಲ್ಲಾ ಪ್ರಾಣಿ ಪಕ್ಷಿಗಳಿಗೂ ಕೂಡ ಬೇಕಾಗುವ ಹಣ್ಣು-ಹಂಪಲುಗಳು, ಆಶ್ರಯ ಸಿಗುತ್ತದೆ. ಕಾಡನ್ನು ಉಳಿಸಿ, ಬೆಳೆಸುವುದರ ಮುಖಾಂತರ ಪ್ರಕೃತಿಯ ಸಮತೋಲನವನ್ನು ಕೂಡ ಕಾಪಾಡಬಹುದು. ಕಾಡಿನ ಸಂರಕ್ಷಣೆಯನ್ನು ನಾವು ಮಾಡದಿದ್ದರೆ ಮುಂದೊಂದು ದಿನ ನಾವೆಲ್ಲರೂ ಸಂಕಷ್ಟ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು ಎಂದು ಅವರು ಹೇಳಿದರು.

ಸಿ.ಟಿ.ಡಿ ನೆಟ್ಟಣ ಇದರ ವಲಯ ಅರಣ್ಯಾಧಿಕಾರಿ ಮಹೇಶ್, ಉಪವಲಯ ಅರಣ್ಯಾಧಿಕಾರಿಗಳಾದ ಅಪೂರ್ವ ಅಚ್ರಪ್ಪಾಡಿ, ಯೋಗೀಶ್, ಪ್ರಕಾಶ್, ಶಿವಾನಂದ, ಅರಣ್ಯ ರಕ್ಷಕ ಪ್ರಕಾಶ್, ಸುಬ್ರಹ್ಮಣ್ಯ ಮಠ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಶ್ರೀಕೃಷ್ಣ ಶರ್ಮ, ಬಿಳಿನೆಲೆ ಗ್ರಾ.ಪಂ ಅಧ್ಯಕ್ಷ ಶಿವಶಂಕರ್ , ಉಪಾಧ್ಯಕ್ಷೆ ಶಾರದಾ ಪಿ, ಸದಸ್ಯ ಸುಧೀರ್ ಶೆಟ್ಟಿ, ಗ್ರಾ.ಪಂ ಪಿಡಿಓ ಶೀನ, ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಸತೀಶ್ ಎರ್ಕ, ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ಮುಖ್ಯಗುರು ಗಣಪತಿ ಭಟ್, ಬೈಲು ಬಿಳಿನೆಲೆ ಸ.ಹಿ.ಪ್ರಾ.ಶಾಲೆಯ ಮುಖ್ಯಗುರು ಸುಮತಿ, ಗೌರವ ವನ್ಯಜೀವಿ ಪಾಲಕರಾದ ಭುವನೇಶ್ ಕೈಕಂಬ, ಬಿಳಿನೆಲೆ ಗೋಪಾಲಕೃಷ್ಣ ಪ್ರೌಢಶಾಲೆಯ ಪ್ರಾಕ್ತನ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಚಂದ್ರಶೇಖರ್ ಅಮೈ, ಬಿಳಿನೆಲೆ ಯುವಕ ಮಂಡಲದ ಅಧ್ಯಕ್ಷ ಹರೀಶ್ ಬೈಲು ಹಾಗೂ ಶಿಕ್ಷಕ ವೃಂದದವರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಸಂಗ್ರಹಿಸಿದ ವಿವಿಧ ಹಣ್ಣುಗಳ ಬೀಜಗಳನ್ನು ಈ ಸಂದರ್ಭದಲ್ಲಿ ಕಾಡಿನಲ್ಲಿ ಬಿತ್ತಲಾಯಿತು.

LEAVE A REPLY

Please enter your comment!
Please enter your name here