ಪ್ರವಾದಿಯವರ ನಿಂದನೆ ಪ್ರಕರಣ: ಸಂಪ್ಯ ಜಮಾಅತರಿಂದ ಪ್ರತಿಭಟನೆ

0

  • ಪ್ರವಾದಿ ನಿಂದನೆಯನ್ನು ಸಹಿಸಲು ಸಾಧ್ಯವೇ ಇಲ್ಲ: ಹಮೀದ್ ದಾರಿಮಿ

 

ಪುತ್ತೂರು: ಕೆಲದಿನಗಳ ಹಿಂದೆ ಬಿಜೆಪಿ ರಾಷ್ಟ್ರೀಯ ವಕ್ತಾರರಾದ ನೂಪುರ್‌ಶರ್ಮ ಹಾಗ ನವೀನ್ ಜಿಂದಾಲ್ ರವರು ಮುಸ್ಲಿಮರ ಪರಮೋಚ್ಚ ನಾಯಕರಾದ ಪ್ರವಾದಿ ಮುಹಮ್ಮದ್ (ಸ ಅ) ರವರನ್ನು ಬಿಜೆಪಿ ವಕ್ತಾರರುಗಳಾದ ನೂಪುರ್‌ಶರ್ಮಾ ಹಾಗೂ ನವೀನ್ ಜಿಂದಾಲ್‌ರವರು ನಿಂದನೆ ಮಾಡಿದ್ದು ಇದರ ವಿರುದ್ದ ಸಂಪ್ಯ ಮುಹಿಯುದ್ದೀನ್ ಜುಮಾ ಮಸೀದಿ ವಠಾರದಲ್ಲಿ ಜೂ. 10ರಂದು ಜಮಾಅತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಜಮಾತಿನ ಖತೀಬರಾದ ಅಬ್ದುಲ್ ಹಮೀದ್ ದಾರಿಮಿ ಉಸ್ತಾದರು ಪ್ರವಾದಿ ನಿಂದನೆಯನ್ನು ಸಹಿಸಲು ಸಾಧ್ಯವಿಲ್ಲ. ದುರುದ್ದೇಶಪೂರ್ವಕವಾಗಿ ಪ್ರವಾದಿ ನಿಂದನೆಯನ್ನು ಮಾಡಿದ್ದಾರೆ. ನಿಂದನೆ ಮಾಡಿರುವ ಇಬ್ಬರು ಆರೋಪಿಗಳನ್ನು ದೇಶದಿಂದ ಗಡಿಪಾರು ಮಾಡಬೇಕು. ಭಾರತ ಜಾತ್ಯಾತೀ ದೇಶವಾಗಿದೆ. ಇಲ್ಲಿ ಪ್ರತೀಯೊಬ್ಬರಿಗೂ ಅವರವರ ಧರ್ಮಾನುಸಾರ ಬದುಕುವ ಹಕ್ಕನ್ನು ಸಂವಿಧಾನ ನೀಡಿದೆ. ದೇಶದಲ್ಲಿ ಗಲಭೆ ಹುಟ್ಟು ಹಾಕಲು ಧರ್ಮ ದಂಗಲ್ ಆರಂಭಿಸಿದ್ದಾರೆ, ಪ್ರವಾದಿಯವರನ್ನು ನಿಂದನೆ ಮಾಡುತ್ತಿದ್ದಾರೆ. ಇಸ್ಲಾಮ್ ಧರ್ಮದ ಸುಪ್ರಿಂ ನಾಯಕರಾಗಿರುವ ಪ್ರವಾದಿಯವರು ನಮ್ಮ ಆತ್ಮ ಇದ್ದಂತೆ ಅವರಿಗೆ ಎಳ್ಳಷ್ಟು ಅಪಚಾರ ಮಾಡಿದರೂ ನವು ಅದನ್ನು ಸಹಿಸಲಾರೆವು ಎಂದು ಹೇಳಿದರು. ಧರ್ಮದ ಆಧಾರದಲ್ಲಿ ದೇಶವನ್ನು ವಿಬಜನೆ ಮಾಡಲು ಹೊರಟಿರುವ ಕೋಮು ಶಕ್ತಿಗಳನ್ನು ಸದೆಬಡಿಯಬೇಕಿದೆ. ಭಾರತದಲ್ಲಿರುವ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂಬುದೇ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಜಮಾಅತ್ ಕಮೀಟಿ ಉಪಾಧ್ಯಕ್ಷರಾದ ಅಬೂಬಕ್ಕರ್ ಸಂಪ್ಯ, ಕಾರ್ಯದರ್ಶಿ ಇಸ್ಮಾಯಿಲ್ ಬೈಲಾಡಿ ಕೋಶಾಧಿಕಾರಿ ಇಬ್ರಾಹಿಂ ಹಾಜಿ ಇಡಬೆಟ್ಟು, ನಿಸಾರ್ ಸಂಪ್ಯ, ಬಶೀರ್ ವಾಗ್ಲೆ, ಹಬೀಬ್ ಸಂಪ್ಯ, ಮುಸ್ತಫಾ ಸಂಪ್ಯ ಸೇರಿದಂತೆ ಜಮಾತ್ ವ್ಯಾಪ್ತಿಗಳಪಡುವ ಎಲ್ಲಾ ಸಂಘಟನೆಗಳು ಪದಾಧಿಕಾರಿಗಳು, ಹಾಗೂ ಜಮಾಅತ್ ಕಮೀಟಿ ಎಲ್ಲಾ ಸದಸ್ಯರೂ ಮತ್ತು ಮೊಅಲ್ಲಾ ನಿವಾಸಿಗಳು ಭಾಗವಹಿಸಿದರು. ಭಿತ್ತಿ ಪತ್ರ ಹಿಡಿದು ಪ್ರವಾದಿ ನಿಂದಕರನ್ನು ಬಂಧಿಸಿ ಗಡಿಪಾರು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

LEAVE A REPLY

Please enter your comment!
Please enter your name here