ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿ ಸಂಘದ ನಾಯಕನಾಗಿ 10ನೇ ತರಗತಿಯ ಆಂಗ್ಲ ಮಾಧ್ಯಮದ ಸನ್ಮಿತ್ ರೈ, ಉಪನಾಯಕನಾಗಿ 10ನೇ ತರಗತಿಯ ಕನ್ನಡ ಮಾಧ್ಯಮದ ರಕ್ಷಿತ್ ಆರ್.ಕೆ, ಜತೆ ಕಾರ್ಯದರ್ಶಿಯಾಗಿ 9ನೇ ತರಗತಿಯ ಕನ್ನಡ ಮಾಧ್ಯಮದ ಪ್ರತೀಕ್ ಎ.ಆರ್, ಕ್ರೀಡಾ ಕಾರ್ಯದರ್ಶಿಯಾಗಿ 9ನೇ ಆಂಗ್ಲ ಮಾಧ್ಯಮದ ಜಿತೇಶ್ ಪಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನನ್ಮಯಿ ಎಂ. ಆಯ್ಕೆಯಾದರು.
ವಿರೋಧ ಪಕ್ಷದ ನಾಯಕರಾಗಿ 10ನೇ ಆಂಗ್ಮ ಮಾಧ್ಯಮದ ಅಜಯ್ ರೈ, ಮತ್ತು ಶ್ರಾವ್ಯ ಕೆ.ಎಚ್ ಆಯ್ಕೆಯಾದರು. ಉಳಿದಂತೆ 10ನೇ ತರಗತಿಯ ಆಂಗ್ಲ ಮಾಧ್ಯಮದ ಐಸಿತಾ ರೈ, 10ನೇ ತರಗತಿಯ ಆಂಗ್ಲ ಮಾಧ್ಯಮದ ಧನುಷ್ ಪ್ರಸಾದ್, ಶಿಸ್ತುಪಾಲನ ಮಂತ್ರಿಯಾಗಿ 10ನೇ ತರಗತಿಯ ಕನ್ನಡ ಮಾಧ್ಯಮದ ಜಗದೀಶ್ ಎನ್.ಕೆ, 9ನೇ ಆಂಗ್ಕ ಮಾಧ್ಯಮದ ನೇಹಾಶ್ರೀ, ಆಹಾರ ಸರಬರಾಜು ಮೇಲ್ವೀಚಾರಕರಾಗಿ 9ನೇ ಕನ್ನಡ ಮಾಧ್ಯಮದ ಆಯುಷತ್ ಶಿಫಾ, 9ನೇ ಕನ್ನಡ ಮಾಧ್ಯಮದ ರಕ್ಷಿತಾ, ಸ್ವಚ್ಛತಾ ಪಾಲನಾ ಮಂತ್ರಿಯಾಗಿ 9ನೇ ಆಂಗ್ಲ ಮಾಧ್ಯಮದ ಈಶಿತಾ ಕೆ, 9ನೇ ಆಂಗ್ಲ ಮಾಧ್ಯಮದ ರಿತೇಶ್ ಬಿ, ನೀರಾವರಿ ಮಂತ್ರಿಯಾಗಿ 9ನೇ ಆಂಗ್ಲ ಮಾಧ್ಯಮದ ಯಶಸ್ವಿ ಕೆ ಆಯ್ಕೆಯಾದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಜಗನ್ನಾಥ ರೈ ನುಳಿಯಾಲು, ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿಯವರು ವಿಜೇತರಿಗೆ ಶುಭಹಾರೈಸಿದರು. ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವವನ್ನು ತಿಳಿಸಿದರು. ಮುಖ್ಯಗುರು ಸರಸ್ವತಿ ಎಂ, ವಿದ್ಯಾರ್ಥಿಗಳಿಗೆ ತಮ್ಮ ಕರ್ತವ್ಯ ಪ್ರಜ್ಞೆಗಳನ್ನು ತಿಳಿಸಿದರು. ಶಿಕ್ಷಕಿ ಪುಷ್ಪಾ ಬಿ.ಜೆ, ಚುನಾವಣಾಧಿಕಾರಿಯಾಗಿ ಸಹಕರಿಸಿದರು. ಶಿಕ್ಷಕರಾದ ವಿನಯ ವಿ.ಶೆಟ್ಟಿ, ಅನಿತಾ ಜೆ ರೈ, ಹೇಮಾನಾಗೇಶ್ ರೈ, ರಂಗನಾಥ್, ಜಯಚಂದ್ರ, ವನಿತಾ, ಶರತ್ ಮರ್ಗಿಲಡ್ಕ ಉಪಸ್ಥಿತರಿದ್ದರು.
.