ಉಂಡು ಬಿಸಾಡುವ ಎಲೆಯಲ್ಲ ಈ ಪರಿಸರ : ಸುಹಾಸ್ ಮರಿಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು :ಪರಿಸರ ಉಳಿದರೆ ಇಳೆಯಲ್ಲಿ ನಾವು ಇರುತ್ತೇವೆ. ಈ ಬಾನು, ಮಣ್ಣು, ನೀರು, ಗಾಳಿ. ಎಲ್ಲವೂ ಪರಿಸರದ ಬೇರೆ ಬೇರೆ ಘಟಕಗಳು.ಒಂದೊಂದು ಬಿಡಿಯಾದ ಅಂಶಗಳೆಂದು ಕಂಡರೂ ನಮ್ಮ ಉಳಿವಿಗೆ ಇವೆಲ್ಲವೂ ಅತ್ಯಂತ ಅಗತ್ಯ. ಪರಿಸರ ರಕ್ಷಣೆಯಲ್ಲಿ ಹಸಿರು ಕಾಡು ಅತ್ಯಂತ ಮಹತ್ವದ್ದು. ಶುದ್ಧ ಗಾಳಿ ಮತ್ತು ನೀರು ಸಿಗಬೇಕಾದರೆ, ಆಹಾರದ ಸರಪಳಿ ಇರಬೇಕಾದರೆ ಅರಣ್ಯಅವಶ್ಯ. ಹಾಗಾಗಿ ನಾವು ಎಲ್ಲರೂಗಿಡ ನೆಡಬೇಕು, ನೆಟ್ಟ ಗಿಡಗಳನ್ನು ಪೋಷಿಸಬೇಕು. ನಮ್ಮ ಸುತ್ತದಟ್ಟ ಹಸಿರು ಇರುವಂತೆ ಎಚ್ಚರಿಕೆ ವಹಿಸಬೇಕು ಎಂದು ಮರಿಕೆ ಸಾವಯವ ಮಳಿಗೆಯ ಮಾಲಿಕ ಮತ್ತುಪ್ರ ಗತಿಪರ ಕೃಷಿಕ ಸುಹಾಸ್‌ ಎಪಿಎಸ್, ಮರಿಕೆ ಹೇಳಿದರು. ಅವರು ಸಂತ ಫಿಲೋಮಿನಾ ಕಾಲೇಜಿನ ಇಕೋ ಕ್ಲಬ್ ಮತ್ತು ಯುತ್‌ರೆಡ್‌ಕ್ರಾಸ್ ಘಟಕಗಳು ಆಯೋಜಿಸಿದ ಪರಿಸರ ದಿನಾಚರಣೆಯಲ್ಲಿ ಪರಿಸರ ರಕ್ಷಣೆ ಕುರಿತು ವಿಶೇಷ ಉಪನ್ಯಾಸ ನೀಡುತ್ತಿದ್ದರು. ಭಾರತದಲ್ಲಿ ಮಣ್ಣಿಗೆ ತಾಯಿಯ ಗೌರವದ ಸ್ಥಾನವಿದೆ. ನಾವು ಬಾಳಿ ಮತ್ತೆ ಸೇರುವುದು ಈ ಮಣ್ಣಿಗೆ. ಇಂಥ ಮಣ್ಣಿನ ಸವಕಳಿ ತಡೆಯಲು ಕಾಡು ಅವಶ್ಯ. ಮರಗಳ ಬೇರು ಓಡುವ ನೀರನ್ನು ತಡೆ ಹಿಡಿದು ಇಂಗುವಂತೆ ಮಾಡುತ್ತವೆ. ಯಾವುದೇ ತ್ಯಾಜ್ಯವನ್ನು ಮಣ್ಣಿಗೆ, ಪರಿಸರಕ್ಕೆ ನಾವು ಸೇರಿಸಬಾರದು. ರಾಸಾಯನಿಕಗಳ ಬಳಕೆ ಎಷ್ಟು ಕಡಿಮೆ ಮಾಡಿದಷ್ಟೂ ಉತ್ತಮ. ಪರಿಸರ ಅನ್ನುವುದು ಉಂಡು ಬಿಸಾಡುವ ಎಲೆಯಲ್ಲ ಅನ್ನುವ ಎಚ್ಚರಿಕೆ ನಮಗೆ ಇರಬೇಕು ಎಂದು ಅವರು ಪರಿಸರ ಸಂರಕ್ಷಣೆಯ ಕುರಿತು ವಿವರಿಸಿದರು.

 

ಮುಖ್ಯಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ಮತ್ತು ಇಂಗ್ಲೀಷ್‌ ಉಪನ್ಯಾಸಕರಾದ ವಂ|ಸ್ಟ್ಯಾನಿ ಪಿಂಟೋನಮ್ಮ ವರ್ತಮಾನಜೀವನ ವೇಗವಾಗಿ ಬದಲಾಗುತ್ತಿದೆ. ಆಧುನಿಕ ತಂತ್ರಜ್ಞಾನಗಳು ಬದುಕನ್ನು ಆವಾಹಿಸಿಕೊಳ್ಳುತ್ತಿವೆ. ದೊಡ್ಡ ದೊಡ್ಡ ಕಂಪೆನಿಗಳು ಕೈಗಾರಿಕೆಗಳ ವಿಸ್ತರಣೆ ಮಾಡುತ್ತಿವೆ. ಈ ಕಂಪೆನಿಗಳು ತಮ್ಮ ಆದಾಯದಲ್ಲಿ ಒಂದಷ್ಟು ಅಂಶವನ್ನು ಪರಿಸರ ರಕ್ಷಣೆಗೆ ಮೀಸಲಾಗಿಡಬೇಕು. ನಾವೆಲ್ಲರೂ ನಮ್ಮ ಪರಿಸರ ಕೊಳಚೆಯಿಂದ, ಪ್ಲಾಸ್ಟಿಕ್ ಕಸದಿಂದ ಮುಕ್ತವಾಗಲು ಶ್ರಮ ವಹಿಸಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ವಂ|ಎಂಟೋನಿ ಪ್ರಕಾಶ್ ಮೊಂತೆರೋ ಮಾತನಾಡುತ್ತ ನಾವೆಲ್ಲರೂ ಸ್ವಸ್ಥ ಮತ್ತು ಸ್ವಾಸ್ತ್ಯ ಸಮಾಜವನ್ನು ರೂಪಿಸುವ ಕುರಿತು ಚಿಂತನೆ ನಡೆಸುವ ಕಾಲವಿದು. ಭೂಮಿಯನ್ನು ತಾಯಿ ಅಂದರೆ ಸಾಲದು, ಈ ತಾಯಿಯ ಬಗೆಗೆ ನಮ್ಮಆದರ ನಮ್ಮ ನಡೆಯಲ್ಲಿ, ನುಡಿಯಲ್ಲಿ ಕಾಣಬೇಕು. ವರ್ಷದಲ್ಲಿ ಒಂದು ದಿನದ ಕಾರ್ಯಕ್ರಮಕ್ಕೆ ಪರಿಸರ ಕಾಳಜಿ ಸೀಮಿತವಾಗದೇ ಬದುಕಿನ ನಿತ್ಯದ ಭಾಗವಾಗಬೇಕು ಎಂದು ಹೇಳಿದರು.

ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಶ್ರೀಮತಿ ಶಶಿಪ್ರಭಾ ಸ್ವಾಗತಿಸಿದರು. ಕೃಪಾಲಿ ಮತ್ತು ಹಿತಶ್ರೀ ಪ್ರಾರ್ಥಿಸಿದರು. ಟ್ರಿಸಿಯಾ ಸೆಲಿಸ್ಟಾ ವಂದಿಸಿ, ಅಂಜುಮ್ ನಿಹಾಲಾ ನಿರ್ವಹಿಸಿದರು. ಉಪಪ್ರಾಂಶುಪಾಲ ಪ್ರೊ.ಉದಯ, ಡಾ|ಮಾಲಿನಿ, ಪ್ರೊ. ನಾಗರಾಜು ಉಪಸ್ಥಿತರಿದ್ದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಕಾಲೇಜು ಪರಿಸರದಲ್ಲಿ ಬೇರೆ ಬೇರೆ ಸಸಿಗಳನ್ನು ನೆಡುವಕಾರ್ಯಕ್ರಮಕೈಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.