ಬೊಳುವಾರಿನಲ್ಲಿ ಬ್ಯಾಟರಿ ಚಾಲಿತ ರಿಕ್ಷಾ ಸೇರಿದಂತೆ ಎರಡು ಆಟೋ ರಿಕ್ಷಾಗಳ ನಡುವೆ ಡಿಕ್ಕಿ

0

ಪುತ್ತೂರು: ಬ್ಯಾಟರಿ ಚಾಲಿತ ಆಟೋ ರಿಕ್ಷಾ ಸೇರಿದಂತೆ ಎರಡು ಆಟೋ ರಿಕ್ಷಾಗಳ ನಡುವೆ ಡಿಕ್ಕಿ ಸಂಭವಿಸಿದ ಘಡನೆ ಜೂ.10 ರ ರಾತ್ರಿ ಬೊಳುವಾರಿನಲ್ಲಿ ನಡೆದಿದೆ. ಪುತ್ತೂರಿನಿಂದ ಪಡೀಲು ಕಡೆ ಹೋಗುತ್ತಿದ್ದ ಬ್ಯಾಟರಿ ಚಾಲಿತ ಆಟೋ ರಿಕ್ಷಾ ಮತ್ತು ನೆಹರುನಗರ ಕಡೆಯಿಂದ ಪುತ್ತೂರಿಗೆ ಬರುತ್ತಿದ್ದ ರಿಕ್ಷಾ ನಡುವೆ ಬೊಳುವಾರಿನಲ್ಲಿ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಆಟೋ ರಿಕ್ಷಾ ಪಲ್ಟಿಯಾಗಿದ್ದು. ಎರಡೂ ರಿಕ್ಷಾಗಳಿಗೂ ಹಾನಿಯಾಗಿದೆ. ಚಾಲಕರಿಬ್ಬರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here