ಬೆಳೆ ವಿಮೆ ಸಾಫ್ಟ್‌ವೇರ್‌ನಲ್ಲಿ ಮಿಸ್‌ವ್ಯೂಚ್ ಸಮಸ್ಯೆ ಬಗೆಹರಿಸಿದ ಶಾಸಕರಿಗೆ ಬನ್ನೂರು ರೈತರ ಸೇ.ಸಂಘದಿಂದ ಅಭಿನಂದನೆ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದಲ್ಲಿ ಬೆಳೆ ವಿಮೆ ಎಂಟ್ರಿ ಮಾಡುವ ಸಂದರ್ಭದಲ್ಲಿ ಸಾಫ್ಟ್‌ವೇರ್‌ನಲ್ಲಿ ಮಿಸ್‌ಮ್ಯಾಚ್ ಆಗುತ್ತಿದ್ದುದರಿಂದ ರೈತರಿಗೆ ತೊಂದರೆಯಾಗಿತ್ತು. ಈ ಸಮಸ್ಯೆ ಬಗೆ ಹರಿಸುವಂತೆ ಸಂಘದ ವತಿಯಿಂದ ಶಾಸಕ ಸಂಜೀವ ಮಠಂದೂರು ಅವರಿಗೆ ಮನಿನವಿ ಸಲ್ಲಿಸಸಲಾಗಿತ್ತು. ಇದೀಗ ಸಮಸ್ಯೆ ಪರಿಹಾರವಾಗಿದ್ದು ಈ ಕುರಿತು ಸಂಘದಿಂದ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು.

ಬೆಳೆವಿಮೆ ಎಂಟ್ರಿ ಮಾಡುವ ಸಂದರ್ಭದಲ್ಲಿ ಸಾಫ್ಟ್‌ವೇರ್‌ನಲ್ಲಿ ಎಲ್ಲಾ ದಾಖಲೆಗಳ ನೋಂದಣಿ ಮಾಡಿ ಸೇವ್ ಮಾಡಿದಾಗ ಮೂರು ನಾಲ್ಕು ಸರ್ವೆ ನಂಬರ್ ಇದ್ದಾಗ ಒಂದು ಸರ್ವೆ ನಂಬರನ್ನು ಮಾತ್ರ ಸೆಲೆಕ್ಟ್ ಮಾಡಲು ಉಳಿದ ಸರ್ವೆನಂಬರ್ ಡಾಟಾ ಮಾಡಲು ಆಗುತ್ತಿರಲಿಲ್ಲ. ಅಲ್ಲದೆ ಆರ್‌ಟಿಸಿ ಮತ್ತು ಆಧಾರ್‌ನಲ್ಲಿ ಒಂದೇ ರೀತಿಯ ಹೆಸರು ಇಲ್ಲದಿದ್ದರೆ ಟ್ಯಾಲಿ ಬರುತ್ತಿರಲಲ್ಲ. ಇಂತಹ ಹಲವಾರು ಸಮಸ್ಯೆಗಳು ತಲೆದೋರಿ ರೈತರಿಗೆ ಸಮಸ್ಯೆಯಾಗುತ್ತಿದ್ದ ಕುರಿತು ಬನ್ನೂರು ರೈತರ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ನೇತೃತ್ವದಲ್ಲಿ ಆಡಳಿತ ಮಂಡಳಿಯ ನಿರ್ದೇಶಕರು ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ್ದು ಶಾಸಕರು ತಕ್ಷಣ ಸ್ಪಂದಿಸುವುದಾಗಿ ಭರವಸೆ ನೀಡಿದ್ದರು.

ಇದೀಗ ಸಾಫ್ಟ್‌ವೇರ್ ಸಮಸ್ಯೆ ಪರಿಹಾರವಾಗಿ ರೈತರಿಗೆ ಬೆಳೆವಿಮೆ ಎಂಟ್ರಿ ಮಾಡುವ ಸಂದರ್ಭದಲ್ಲಿ ತೊಂದರೆಯಾಗದ ರೀತಿಯಲ್ಲಿ ಸಮಸ್ಯೆ ಬಗೆಹರಿಸಿರುವುದಕ್ಕಾಗಿ ಶಾಸಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

ಬೆಳೆವಿಮೆಯ ಪ್ರಯೋಜನಕ್ಕೆ ಮನವಿ

ಬೆಳೆವಿಮೆಯ ಪ್ರಯೋಜನವನ್ನು ಎಲ್ಲಾ ರೈತರು ಪಡೆದುಕೊಳ್ಳುವಂತೆ ಪಂಜಿಗುಡ್ಡೆ ಈಶ್ವರ ಭಟ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here