ಉಪ್ಪಿನಂಗಡಿ: ಶ್ರೀ ಚಂದ್ರನಾಥ ಸ್ವಾಮಿ ಬಸದಿ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿ ಪಾರ್ಕ್ ಬಳಿ ಇರುವ ಕದಿಕ್ಕಾರ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಅಂಗವಾಗಿ ಶುಕ್ರವಾರದಂದು ಚಂದ್ರನಾಥ ಸ್ವಾಮಿಯ ಬಾಲಾಲಯ ಪ್ರತ್ರಿಷ್ಟೆ ಹಾಗೂ ನೂತನ ಬಸದಿಯ ಶಿಲಾನ್ಯಾಸ ಕಾರ್ಯಕ್ರಮವು ಜರಗಿತು.

ರಾ.ಹೆ 75 ರ ಚತುಷ್ಪಥ ಕಾಮಗಾರಿಯಿಂದಾಗಿ ಶತಮಾನಕ್ಕಿಂತಲೂ ಹಳೆಯದಾದ ಬಸದಿಯ ಸ್ಥಳಾಂತರ ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಬಸದಿಯಲ್ಲಿದ್ದ ಚಂದ್ರನಾಥ ಸ್ವಾಮಿಯ ಮೂರ್ತಿಗಳನ್ನು ಬಾಲಾಯಲಯದಲ್ಲಿ ಪ್ರತಿಷ್ಠೆ ಮಾಡಿ, ನೂತನವಾಗಿ ನಿರ್ಮಿಸಲುದ್ದೇಶಿಸಿರುವ ಬಸದಿಗೆ ಶಿಲಾನ್ಯಾಸವನ್ನೂ ಸಂತೋಷ್ ಇಂದ್ರರವರ ಮುಂದಾಳತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು. 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸದಿಯನ್ನು ಮುಂದಿನ ಎರಡು ವರ್ಷಗಳೊಳಗಾಗಿ ಪೂರ್ಣೈಸುವ ಬಗ್ಗೆ ಬಸದಿ ಭಕ್ತಾದಿಗಳು ಶಪಥವನ್ನು ಗೈದರು.

ಈ ಕಾರ್ಯಕ್ರಮದಲ್ಲಿ ಜೈನ ಸಮುದಾಯದ ಪ್ರಮುಖರಾದ ವಜ್ರ ಕುಮಾರ್ ಜೈನ್, ಧನ್ಯ ಕುಮಾರ್ ರೈ ಬಿಳಿಯೂರು, ಜೀವಂಧರ್ ಜೈನ್, ವಿ.ಕೆ. ಜೈನ್ ಪುತ್ತೂರು, ಡಾ. ಅಶೋಕ್ ಪಡಿವಾಳ್, ಪ್ರಶಾಂತ್ ಬಾರ್ಯ, ಸುಭಾಶ್ ಜೈನ್, ಏಕ ವಿದ್ಯಾಧರ , ನಿತೇಶ್ ಜೈನ್, ಜಿನಚಂದ್ರ, ಚಕ್ರವರ್ತಿ, ವಜ್ರಕುಮಾರ್ ಇಂದ್ರ, ಅಭಯ ಕುಮಾರ್ ಜೈನ್, ಮಹೇಂದ್ರ ವರ್ಮ, ವಾಸ್ತು ತಜ್ಞ ಸುದರ್ಶನ್ ಜೈನ್ ಮೂಡುಬಿದ್ರೆ, ಶ್ರೀಮತಿ ಅರುಣಾ ಧನ್ಯ ಕುಮಾರ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here