ಕೋಲ್ಪೆ ನಿವಾಸಿ ಮಾಂಕು ನಿಧನ

0

ನೆಲ್ಯಾಡಿ: ಕೊಣಾಲು ಗ್ರಾಮದ ಕೋಲ್ಪೆ ನಿವಾಸಿ, ಕೃಷಿಕ ಮಾಂಕು(73ವ.)ರವರು ಅಸೌಖ್ಯದಿಂದ ಜೂ.10ರಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿ ಚಿಕಿತ್ಸೆಯ ಬಳಿಕ ಚೇತರಿಸಿಕೊಂಡು ಮನೆಗೆ ಬಂದಿದ್ದರು. ಜೂ.10ರಂದು ಬೆಳಿಗ್ಗೆ ದಿಢೀರ್ ಅನಾರೋಗ್ಯಕ್ಕೆ ಒಳಗಾದ ಅವರನ್ನು ನೆಲ್ಯಾಡಿಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತಾದರೂ ಅಲ್ಲಿ ಅವರು ನಿಧನರಾದರೆಂದು ವರದಿಯಾಗಿದೆ. ಮಾಂಕುರವರು ಕೆಲ ವರ್ಷದ ಹಿಂದೆ ಕೋಲ್ಪೆಯಲ್ಲಿ ಸುದ್ದಿಬಿಡುಗಡೆ ಪತ್ರಿಕೆ ವಿತರಕರಾಗಿ ಕೆಲಸ ಮಾಡಿದ್ದರು. ಮೃತರು ಪತ್ನಿ ಪೂವಮ್ಮ, ಪುತ್ರರಾದ ವಸಂತ, ದಿನೇಶ ಹಾಗೂ ಪುತ್ರಿ ಸುಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here