ಜೂ.13: ಇ-ಶ್ರಮ್, ಪಿ.ಎಂ.ಎಸ್.ವೈ.ಎಂ, ಪಿ.ಎಂ.ಎಫ್.ಬಿ.ವೈ, ಸಂರಕ್ಷಣೆ ಬೆಳೆ ವಿಮೆ ಯೋಜನೆಗಳ ಮಾಹಿತಿ,ನೋಂದಾವಣೆ ಶಿಬಿರ

0

ಪುತ್ತೂರು:ಕೇಂದ್ರ ಸರಕಾರದ ಇ-ಶ್ರಮ್ ಮತ್ತು ಪಿ.ಎಂಪಿಎಸ್.ವೈಎಂ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರನ್ನು ಇ-ಶ್ರಮ್ ನೋಂದಾವಣಿ ಮಾಡುವ ಮಾಹಿತಿ ಶಿಬಿರ ಹಾಗೂ ಉಚಿತ ನೋಂದಾವಣೆಯು ಜೂ.13ರಂದು ಬೆಳಿಗ್ಗೆ 11 ಗಂಟೆಗೆ ತಾಲೂಕು ಪಂಚಾಯತ್ ಸಭಾಂಣದಲ್ಲಿ ನಡೆಯಲಿದೆ.
ಕೇಂದ್ರ ಸರಕಾರದ ಪಿ.ಎಂಪಿಎಸ್.ವೈಎಂ ಯೋಜನೆಯಡಿ ಅಸಂಘಟಿತ ವಲಯದ ಕಾರ್ಮಿಕರನ್ನು ನೋಂದಾವಣಿ ಮಾಡಿಸಲು, ಗ್ರಾಮೀಣಾಭಿವೃದ್ಧಿ ಮಂತ್ರಾಲಯ, ಭಾರತ ಸರ್ಕಾರ ಇವರು 90 ದಿನಗಳAKAM ANTYODAYA CAMPAIG ನ್ನು ದೇಶದ 75 ಜಿಲ್ಲೆಗಳಲ್ಲಿ ನಡೆಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯು ಸದರಿ CAMPAIGNWಗೆ ಆಯ್ಕೆಯಾಗಿರುತ್ತದೆ. ಹಾಗೂ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು 17 ಯೋಜನೆಗಳನ್ನು ಸದರಿ CAMPAಗೆ ಆಯ್ಕೆ ಮಾಡಿರುತ್ತದೆ. ಅದರಲ್ಲಿ ಕಾರ್ಮಿಕ ಇಲಾಖೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯು ಒಂದಾಗಿರುತ್ತದೆ. ಈ ನೋಂದಾವಣಿ ಕಾರ್ಯಕ್ರಮವು ದ.ಕ ಜಿಲ್ಲೆಯಾದ್ಯಂತ ನಡೆಯಲಿದ್ದು ಕಾರ್ಮಿಕ ಇಲಾಖೆ ಮಂಗಳೂರು ದ.ಕ ಹಾಗೂ ಸಿ.ಎಸ್.ಸಿ. ಇ-ಗವರ್ನ್ಸ್ ಸರ್ವಿಸಸ್ ಇಂಡಿಯಾ ದ.ಕ. ಇದರ ಸಹಯೋಗದೊಂದಿಗೆ ನಡೆಯಲಿದೆ.

ಅಸಂಘಟಿತ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು, ವ್ಯಾಪಾರಿಗಳು, ಸ್ವಯಂ ಉದ್ಯೋಗಿಗಳು 18 ವರ್ಷದಿಂದ 40 ವರ್ಷದೊಳಗಿನ ಅಸಂಘಟಿತ ಕಾರ್ಮಿಕರು ಇದರ ಪ್ರಯೋಜನ ಪಡೆಯಬಹುದು. ಫಲಾನುಭವಿಗಳ ವಯಸ್ಸಿಗೆ ಅನುಗುಣವಾಗಿ ಮಾಸಿಕ ಕನಿಷ್ಠ 55 ರೂ. ನಿಂದ 200 ರೂ ವರೆಗೆ ಪಾವತಿ ಮಾಡಬೇಕಾಗುತ್ತದೆ. ಕೇಂದ್ರ ಸರಕಾರದ ವತಿಯಿಂದ ಅಷ್ಟೇ ಫಲಾನುಭವಿಗಳ ಜಮೆಯಾಗಲಿದೆ. ಈ ಕ್ರೋಢೀಕೃತ ಮೊತ್ತದ ಆಧಾರದಲ್ಲಿ ಫಲಾನುಭವಿಗಳಿಗೆ 60 ವರ್ಷ ಪೂರ್ಣಗೊಂಡ ನಂತರ ಯೋಜನೆಯ ಸೌಲಭ್ಯವನ್ನು ಅರ್ಹರಾಗಿದ್ದು, ನಂತರ ಮಾಸಿಕ ಕನಿಷ್ಠ 3000 ರೂಗಳ ಪಿಂಚಣಿ ಸೌಲಭ್ಯವನ್ನು ಪಡೆಯಬಹುದು.

ಈ ಯೋಜನೆಯ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಆಧಾರ್ ಕಾರ್ಡ್, ಫೊಟೋ, ಬ್ಯಾಂಕ್ ಪಾಸ್ಬುಕ್ ಹಾಗೂ ಮೊದಲ ತಿಂಗಳ ಕಂತು ಪಾವತಿಸಿ, ದಾಖಲೆಗಳೊಂದಿಗೆ ಸಮೀಪದ ಸಾಮಾನ್ಯ ಸೇವಾಕೇಂದ್ರಗಳಲ್ಲಿ ಪಿ.ಎಂ-ಎಸ್.ವೈ.ಎಂ ಯೋಜನೆಯಡಿ ನೋಂದಾವಣಿಯಾಗಿ ಕಾರ್ಡ್ ಪಡೆಯಬಹುದಾಗಿದೆ, ಅಲ್ಲದೇ ಇ- ಶ್ರಮ್ ಕಾರ್ಡ್, ಆಯುಷ್ಮಾನ್ ಆರೋಗ್ಯ ಕಾರ್ಡ್, ಕೃಷಿ ಮಾನ್ ಧಾನ್ ಪಿಂಚಣೆ ಯೋಜನೆ, ಫಸಲ್ ಬಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್-ಧನ್ ಯೋಜನೆಯನ್ನು ನೋಂದಾವಣಿ ಮಾಡಿಸಿಕೊಡಲಾಗುವುದು. ಮಾಹಿತಿ ತಂತ್ರಜ್ಞಾನ ಇಲಾಖೆ ಸಿ.ಎಸ್.ಸಿ. ಇ-ಗವರ್ನ್ಸ್ ಸರ್ವೀಸಸ್ ಇಂಡಿಯಾ ವತಿಯಿಂದ ಕೃಷಿ ಮತ್ತು ಕಾರ್ಮಿಕ ಇಲಾಖೆ ಹಾಗೂ ಎಸ್‌ಬಿಐ ಜನರಲ್ ಬ್ಯಾಂಕ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಯೋಜನೆಯ ಮಾಹಿತಿ ನೀಡಲಿದ್ದಾರೆ ಫಲಾನುಭವಿಗಳು, ಸಿಎಸ್‌ಸಿ, ವಿಎಲ್‌ಇಗಳು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಪ್ರಕಟನೆಯಲ್ಲಿ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು 9148899045, ಕಾರ್ಮಿಕ ಇಲಾಖೆ 0824-2433132, 0824-2435343, ಸುದ್ದಿ ಆನ್‌ಲೈನ್ ವಿಭಾಗ 9986416537 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here