ಚಿಕ್ಕಮುಡ್ನೂರು ದ.ಕ.ಜಿ.ಪಂ.ಹಿ.ಪ್ರಾ ಶಾಲಾ ಮಂತ್ರಿಮಂಡಲ ರಚನೆ

0

ಪುತ್ತೂರು: ಚಿಕ್ಕಮುಡ್ನೂರು ದ.ಕ.ಜಿ.ಪಂ.ಹಿ.ಪ್ರಾ ಶಾಲೆಯಲ್ಲಿ ಶಾಲಾ ಮಂತ್ರಿಮಂಡಲವನ್ನು ರಚನೆ ಮಾಡಲಾಯಿತು. ಶಾಲಾ ನಾಯಕಿಯಾಗಿ 7ನೇ ತರಗತಿಯ ಧನ್ಯಶ್ರೀ, ಉಪನಾಯಕನಾಗಿ ಲಿತೇಶ್‌ರವರನ್ನು ಆಯ್ಕೆ ಮಾಡಲಾಯಿತು. ಜಸ್ಮಿತಾ (6ನೇ) ಶಿಕ್ಷಣ ಮಂತ್ರಿ, ಶೋಭಿತ್ (7ನೇ) ಹಣಕಾಸು ಮಂತ್ರಿ, ಚಿತ್ರಾ (7 ನೇ) ಆರೋಗ್ಯ ಮಂತ್ರಿ, ಸಿಂಚನಾ (5ನೇ) ಆಹಾರ ಮಂತ್ರಿ, ದುರ್ಗಾಪ್ರಸಾದ್ (6ನೇ) ಕ್ರೀಡಾಮಂತ್ರಿ, ಸುಶ್ಮಿತಾ (6ನೇ) ರಕ್ಷಣಾಮಂತ್ರಿ, ಮನಿತಾ (7ನೇ) ನೀರಾವರಿ ಮಂತ್ರಿ, ಚೈತ್ರಾ (6ನೇ) ವಾರ್ತಾಮಂತ್ರಿ, ರಿತೀಕ್ಷಾ (7ನೇ) ಸ್ವಚ್ಛತಾ ಮಂತ್ರಿ, ಹರೀಕ್ಷಿತ್ (6ನೇ) ಕಾನೂನು ಮಂತ್ರಿ, ಪೂಜಾಶ್ರೀ (6ನೇ) ಗ್ರಂಥಾಲಯ ಮಂತ್ರಿ, ಆದಿತ್ಯ (7ನೇ) ತೋಟಗಾರಿಕೆ ಮಂತ್ರಿ, ಮೋಕ್ಷಿತಾ (7ನೇ) ವಿರೋಧ ಪಕ್ಷ ನಾಯಕಿ, ಶ್ರವಣ್ (6ನೇ) ಅಭಿವೃದ್ಧಿ ಮಂತ್ರಿಯಾಗಿ ಆಯ್ಕೆಯಾದರು. ಶಾಲಾ ಶಿಕ್ಷಕ ವೃಂದ ಉಪಸ್ಥಿತರಿದ್ದು ಸಹಕರಿಸಿದರು.

LEAVE A REPLY

Please enter your comment!
Please enter your name here