ಪ್ರಧಾನಿ ನರೇಂದ್ರ ಮೋದಿ ಸರಕಾರ 8 ವರ್ಷ ಯಶಸ್ವಿ ಆಡಳಿತ ಪೂರೈಸಿದ ಹಿನ್ನೆಲೆ – ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ, ಒಬಿಸಿ, ಎಸ್ಸಿ ಮೋರ್ಚಾದಿಂದ ಸಾಧಕರಿಗೆ ಸನ್ಮಾನ 

0

ಬಿಜೆಪಿ ಪತ್ರಿಕಾ ಗೋಷ್ಠಿ

ಪುತ್ತೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ 8 ವರ್ಷ ಯಶಸ್ವಿ ಆಡಳಿತ ಪೂರೈಸಿದ ಸಂಭ್ರಮಾಚರಣೆಯಾಗಿ ಸೇವೆ, ಸುಶಾಸನ ಮತ್ತು ಬಡವರ ಕಲ್ಯಾಣ ಕಾರ್ಯಕ್ರಮದಡಿಯಲ್ಲಿ ಜೂ. 12ಕ್ಕೆ ಬೆಳಿಗ್ಗೆ ಬಿಜೆಪಿ ಯುವ ಮೋರ್ಚಾದಿಂದ ಪುತ್ತೂರಿನಿಂದ ಬಿಸಿರೋಡ್ ತನಕ ಬೈಕ್ ರ‍್ಯಾಲಿ, ಸನ್ಮಾನ, ಉಪ್ಪಿನಂಗಡಿಯಲ್ಲಿ ಹಿಂದುಳಿದ ವರ್ಗಗಳ ಮೋರ್ಚಾದಿಂದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಜೂ. 13ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಹಾಲ್   ನಲ್ಲಿ ಎಸ್ಸಿ ಮೋರ್ಚಾದಿಂದ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪುತ್ತೂರು ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅವರು ಹೇಳಿದ್ದಾರೆ.

ಪುತ್ತೂರು ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಜೂ.12ರಂದು ಬೆಳಿಗ್ಗೆ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದ ಬಳಿಯಿಂದ ಬೈಕ್ ರ‍್ಯಾಲಿ ಹೊರಡಲಿದೆ. ಶಾಸಕ ಸಂಜೀವ ಮಠಂದೂರು ರ‍್ಯಾಲಿಗೆ ಚಾಲನೆ ನೀಡಲಿದ್ದಾರೆ. ಜಿಲ್ಲೆಯಾದ್ಯಂತ ನಡೆಯುವ ಬೈಕ್ ರ‍್ಯಾಲಿಯು ಬಿ.ಸಿ.ರೋಡ್ ಸ್ಪರ್ಶ ಹಾಲ್‌ತನಕ ತೆರಳಿ ಅಲ್ಲಿ ನಡೆಯುವ ಸಮಾರಂಭದಲ್ಲಿ ಯುವ ಸಾಧಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಉಪ್ಪಿನಂಗಡಿಯಲ್ಲಿ ಒಬಿಸಿ ಮೋರ್ಚಾದ ಕಾರ್ಯಕ್ರಮ:

ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಬೆಳಿಗ್ಗೆ ಗಂಟೆ 10ಕ್ಕೆ ಉಪ್ಪಿನಂಡಿ ಸಿ.ಎ ಬ್ಯಾಂಕ್‌ನ ಸಂಗಮ ಸಭಾಂಗಣದಲ್ಲಿ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲದ ಸುಮಾರು 8ಕ್ಕೂ ಅಧಿಕ ಮಂದಿ ಸಾಧಕರನ್ನು ಗೌರವಿಸು ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಜೂ.13ಕ್ಕೆ ಎಸ್ಸಿ ಮೋರ್ಚಾದ ಕಾರ್ಯಕ್ರಮ:

ಬಿಜೆಪಿ ಎಸ್ಸಿ ಮೋರ್ಚಾದಿಂದ ಜೂ. 13ಕ್ಕೆ ಪುತ್ತೂರು ಟೌನ್ ಬ್ಯಾಂಕ್ ಹಾಲ್‌ ನಲ್ಲಿ  ಪರಿಶಿಷ್ಟ ಜಾತಿಯ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 110 ಮಂದಿಯನ್ನು ಗೌರವಿಸುವ ಕಾರ್ಯಕ್ರಮ ನಡೆಯಲಿದೆ. ಭೂತಾರಾಧನೆ, ನರ್ತನ ಸೇವೆ ಸೇರಿದಂತೆ ಹಲವು ಕ್ಷೇತ್ರಗಳನ್ನು ಗುರುತಿಸಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಪಿ.ಜಿ.ಜಗನ್ನಿವಾಸ ರಾವ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಶಾಂತಿವನ, ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಮಂಡಲದ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು, ಪ್ರಧಾನ ಕಾರ್ಯದರ್ಶಿ ರತನ್ ರೈ, ನಗರ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಶೆಣೈ, ಗ್ರಾಮಾಂತರ ಎಸ್ಸಿ ಮೋರ್ಚಾದ ಅಧ್ಯಕ್ಷ ಬಾಬು ಬಿ, , ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುನಿಲ್ ದಡ್ಡು, ಎಸ್ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ಬಿಜತ್ರೆ, ಪದಾಧಿಕಾರಿ ಭವಿತ್, ಕಿಟ್ಟ ಅಜಿಲ, ಲೋಹಿತ್ ಅಮ್ಚಿನಡ್ಕ, ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಮಾದ್ಯಮ ಪ್ರಮುಖ್ ರಾಜೇಶ್ ಬನ್ನೂರು ಉಪಸ್ಥಿತರಿದ್ದರು.

ಬಿ.ಸಿ ರೋಡ್‌ನಲ್ಲಿ ಪುತ್ತೂರಿನ ಸಾಧಕರಿಗೆ ಸನ್ಮಾನ:

ಯುವ ಮೋರ್ಚಾದ ಬೈಕ್ ರ‍್ಯಾಲಿ ಬಿ.ಸಿ ರೋಡ್‌ನಲ್ಲಿ ಸಮಾಪನಾ ಸಮಾರಂಭದ ವೇಳೆ ಜಿಲ್ಲೆಯಾದ್ಯಂತ ಯುವ ಸಾಧಕರನ್ನು ಗೌರವಿಸುವ ಕಾರ್ಯಕ್ರಮದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರ ಯುವ ಮೋರ್ಚಾದ ಎರಡು ಮಂಡಲಗಳಿಂದ ಗುರುತಿಸಿದ 10 ಮಂದಿ ಯುವ ಸಾಧಕರನ್ನು ಗೌರವಿಸಲಾಗುವುದು. ಜೇನು ಕೃಷಿಗೆ ಸಂಬಂಧಿಸಿ ಅನೂಫ್ ಎ.ಜಿ ಬೇರಿಕೆ, ಯುವ ಕೃಷಿಕ ಶಿಶಿರ್ ಪೆರ‍್ವೋಡಿ, ಸಿನಿಮಾ ಚಿತ್ರರಂಗದಲ್ಲಿನ ಕಾರ್ತಿಕ್ ರೈ ವಿಟ್ಲ, ರಕ್ತದಾನ ಸೇವಾ ಕಾರ್ಯ ನಿರ್ವಹಿಸುತ್ತಿರುವ ಅಶೋಕ್ ತ್ಯಾಗರಾಜನಗರ, ವಾಲಿಬಾಲ್ ಪಟು ದೀಕ್ಷಿತ್ ಎನ್ ಶೆಟ್ಟಿ, ಇಂಜಿನಿಯರಿಂಗ್ ವರ್ಕ್ಸ್ ಕ್ಷೇತ್ರಕ್ಕೆ ಸಂಬಂಧಿಸಿ ಹರೀಶ್ ಗಔಡ, ಯೋಗಕ್ಕೆ ಶ್ರವಣ್ ಕುಮಾರ್, ಹೈನುಗಾರಿಕೆಯಲ್ಲಿ ಸಂದೇಶ ಚಾಕೋಟೆ, ಅಂತರಾಷ್ಟ್ರೀಯ ಚೆಸ್ ಪಟು ಯಶಸ್ವಿ ಕೆದಿಲ , ಯಕ್ಷಗಾನ ಕಲಾ ಕ್ಷೇತ್ರದಲ್ಲಿನ ಪ್ರಖ್ಯಾತ್ ಶೆಟ್ಟಿ ಅಳಿಕೆ, ಯುವ ಉದ್ಯಮಿ ಸ್ವಸ್ತಿಕ್‌ಪದ್ಮ ಕೆದಿಲ ಅವರನ್ನು ಸನ್ಮಾನಿಸಲಾಗುವುದು ಎಂದು ಯುವ ಮೋರ್ಚಾ ಅಧ್ಯಕ್ಷ ನವೀನ್ ಪಡ್ನೂರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here