ಯುದ್ದ ವಿಮಾನಗಳ ವೈಮಾನಿಕ ಪ್ರದರ್ಶನ-ಡಿಆರ್‌ಡಿಒ ಎಡಿಇ ವಿಜ್ಞಾನಿ ದುರ್ಗಾಪ್ರಸಾದ್ ಮೇಂಡ ನಾಳೆ (ಜೂ.12) ಫ್ರಾನ್ಸ್ ಗೆ ಪ್ರಯಾಣ

0

ಪುತ್ತೂರು: ಭಾರತ ಸರಕಾರದ ರಕ್ಷಣಾ ಸಂಶೋಧನೆ ಹಾಗೂ ಅನುಸಂಧಾನ ಸಂಸ್ಥೆಯ ವೈಮಾನಿಕ ವಿಕಾಸ ಸಂಸ್ಥೆ (DRDO-ADE) ಯಲ್ಲಿ ವಿಜ್ಞಾನಿಯಾಗಿರುವ ದುರ್ಗಾಪ್ರಸಾದ್ ಮೇಂಡ ಇವರು ಫ್ರಾನ್ಸ್ ದೇಶದ ಪ್ಯಾರೀಸ್ ನಗರದಲ್ಲಿ ನಡೆಯಲಿರುವ ಯುದ್ದ ವಿಮಾನಗಳ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸಿ ಹೆಚ್ಚಿನ ಅಧ್ಯಯನಕ್ಕಾಗಿ ಜೂ. 12 ರಂದು ಪ್ಯಾರೀಸ್ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆ. 
1998 ರಲ್ಲಿ ಬೆಂಗಳೂರಿನಲ್ಲಿರುವ ಭಾರತ ಸರಕಾರದ ರಕ್ಷಣಾ ಸಂಶೋಧನೆ ಹಾಗೂ ಅನುಸಂಧಾನ ಸಂಸ್ಥೆಯ ವೈಮಾನಿಕ ವಿಕಾಸ ಸಂಸ್ಥೆಯಲ್ಲಿ ಸೇರ್ಪಡೆಗೊಂಡು ವಿಜ್ಞಾನಿಯಾಗಿ 24 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಇವರು ತನ್ನ ಸಂಸ್ಥೆಯಿಂದ ನಿಯೋಜನೆಗೊಂಡು ಫ್ರಾನ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪೊಳಲಿ‌ ಸಮೀಪದ ಪಾಕೊಟ್ಟು ದಾಮೋದರ ಮೇಂಡ ಮತ್ತು ಸಾವಿತ್ರಿ ಮೇಂಡ ದಂಪತಿ ಪುತ್ರ ಹಾಗೂ ಕಡಮಜಲು ಸುಭಾಸ್ ರೈ ಮತ್ತು ಪ್ರೀತಿ ಎಸ್. ರೈ ರವರ ಪುತ್ರಿ ವಿಂದ್ಯಾ ದುರ್ಗಾಪ್ರಸಾದ್ ರವರ ಪತಿಯಾಗಿರುವ ಇವರು ಪ್ರಸ್ತುತ ಬೆಂಗಳೂರು ವಾಸ್ತವ್ಯ ಹೊಂದಿದ್ದಾರೆ.

LEAVE A REPLY

Please enter your comment!
Please enter your name here