ಉಪ್ಪಿನಂಗಡಿ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣಕ್ಕೆ ಶಿಲಾನ್ಯಾಸ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್ ಬಳಿ ಇರುವ ಕದಿಕ್ಕಾರ್ ಚಂದ್ರನಾಥ ಸ್ವಾಮಿ ಬಸದಿಯ ಪುನರ್ ನಿರ್ಮಾಣದ ಅಂಗವಾಗಿ ಚಂದ್ರನಾಥ ಸ್ವಾಮಿಯ ಬಾಲಾಲಯ ಪ್ರತಿಷ್ಠೆ ಹಾಗೂ ನೂತನ ಬಸದಿಗೆ ಶಿಲಾನ್ಯಾಸ ಕಾರ್ಯಕ್ರಮ ಜೂ.10ರಂದು ಜರಗಿತು.


ಶತಮಾನಕ್ಕಿಂತಲೂ ಹಳೆಯದಾದ ಬಸದಿ ರಾಷ್ಟ್ರೀಯ ಹೆದ್ದಾರಿ 75ರ ಚತುಷ್ಪಪಥ ಕಾಮಗಾರಿಯಿಂದಾಗಿ ಸ್ಥಳಾಂತರ ಮಾಡುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಹಳೆಯ ಬಸದಿಯಲ್ಲಿದ್ದ ಚಂದ್ರನಾಥ ಸ್ವಾಮಿಯ ಮೂರ್ತಿಗಳನ್ನು ಬಾಲಾಯಲಯದಲ್ಲಿ ಪ್ರತಿಷ್ಠೆ ಮಾಡಿ, ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಬಸದಿಗೆ ಶಿಲಾನ್ಯಾಸವನ್ನು ಸಂತೋಷ್ ಇಂದ್ರ ಮುಂದಾಳತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನೆರವೇರಿಸಲಾಯಿತು. ೧.೨೫ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಬಸದಿಯನ್ನು ಮುಂದಿನ ಎರಡು ವರ್ಷದ ಒಳಗಾಗಿ ಪೂರ್ಣಗೊಳಿಸುವ ಬಗ್ಗೆ ಬಸದಿ ಭಕ್ತಾದಿಗಳು ಶಪಥವನ್ನು ಗೈದರು.

ಕಾರ್‍ಯಕ್ರಮದಲ್ಲಿ ವಜ್ರ ಕುಮಾರ್ ಜೈನ್, ಧನ್ಯ ಕುಮಾರ್ ರೈ ಬಿಳಿಯೂರು, ಜೀವಂಧರ್ ಜೈನ್, ವಿ.ಕೆ. ಜೈನ್ ಪುತ್ತೂರು, ಡಾ. ಅಶೋಕ್ ಪಡಿವಾಳ್, ಪ್ರಶಾಂತ್ ಬಾರ್ಯ, ಸುಭಾಶ್ ಜೈನ್, ವಿದ್ಯಾಧರ ಜೈನ್, ನಿತೇಶ್ ಜೈನ್, ಜಿನಚಂದ್ರ ಚಕ್ರವರ್ತಿ, ಅಭಯ ಕುಮಾರ್ ಜೈನ್, ಮಹೇಂದ್ರ ವರ್ಮಾ, ವಾಸ್ತುತಜ್ಞ ಸುದರ್ಶನ್ ಜೈನ್ ಮೂಡುಬಿದ್ರೆ, ಅರುಣಾ ಧನ್ಯ ಕುಮಾರ್ ಇದ್ದರು.

LEAVE A REPLY

Please enter your comment!
Please enter your name here