- ಅಧ್ಯಕ್ಷ: ಹನೀಫ್ ದಾರಿಮಿ, ಪ್ರಧಾನ ಕಾರ್ಯದರ್ಶಿ: ಬಶೀರ್ ದಾರಿಮಿ, ಕೋಶಾಧಿಕಾರಿ: ಅಬ್ದುಲ್ರಝಾಕ್ ಹಾಜಿ, ಪರೀಕ್ಷಾ ಮಂಡಳಿ ಛೇರ್ಮೆನ್: ಇಸ್ಮಾಯಿಲ್ ಫೈಝಿ
ಪುತ್ತೂರು: ಪುತ್ತೂರು ರೇಂಜ್ಜಂಇಯ್ಯತುಲ್ ಮುಅಲ್ಲಿಮೀನ್ 2022-23ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು. ಕರೀಂದಾರಿಮಿ ಬೊಳ್ವಾರ್ ಸಭೆ ಉದ್ಘಾಟಿಸಿದರು.
ಪುತ್ತೂರು ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್ 2022-23 ನೇ ವಾರ್ಷಿಕ ಮಹಾಸಭೆ ಸಮಸ್ತ ವಿದ್ಯಾಭ್ಯಾಸ ಬೋರ್ಡ್ ತಪಾಸಣಾಧಿಕಾರಿ ಹಾಗೂ ಮುಫತ್ತಿಶರಾದ ಜೆ.ಪಿ.ಮುಹಮ್ಮದ್ ದಾರಿಮಿರವರ ಅಧ್ಯಕ್ಷತೆಯಲ್ಲಿ ಹಿದಾಯತುಲ್ ಇಸ್ಲಾಂ ಮದ್ರಸ ವಳತ್ತಡ್ಕದಲ್ಲಿ ನಡೆಯಿತು. ಅಧ್ಯಕ್ಷರಾಗಿ ಹನೀಫ್ ದಾರಿಮಿ ಪಡೀಲ್, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎಂ.ಎ.ಬಶೀರ್ ದಾರಿಮಿ ಸಾಲ್ಮರ, ಕೋಶಾಧಿಕಾರಿಯಾಗಿ ಎಲ್.ಟಿ. ಅಬ್ದುಲ್ರಝಾಕ್ ಹಾಜಿ, ಪರೀಕ್ಷಾ ಮಂಡಳಿ ಚೆಯರ್ ಮ್ಯಾನ್ ದಾವೂದ್ ಇಸ್ಮಾಯಿಲ್ ಫೈಝಿ ಬೀಟಿಗೆ, ಉಪಾಧ್ಯಕ್ಷರಾಗಿ ಮಜೀದ್ ದಾರಿಮಿ ಮಿತ್ತೂರು, ಜಲಾಲುದ್ದೀನ್ದಾರಿಮಿ ಪರ್ಲಡ್ಕ, ಜೊತೆ ಕಾರ್ಯದರ್ಶಿಗಳಾಗಿ ಎ.ಎಸ್.ಕೌಸರಿ ವಳತ್ತಡ್ಕ, ಶಾಫಿಲ್ ಮೌಲವಿ ಕಲ್ಲೇಗ, ರಿಲೀಫ್ ಫಂಡ್ ಛೇರ್ಮೆನ್ ಫಾರೂಕ್ ಸಹದಿ ಬಪ್ಪಳಿಗೆ, ಕನ್ವೀನರ್ ಹಮೀದ್ ಹನೀಫೀ ದರ್ಬೆ, ಜೊತೆ ಕಾರ್ಯದರ್ಶಿ ಎ.ಎಸ್.ಕೌಸರಿ ವಳತ್ತಡ್ಕ ವರದಿ ವಾಚಿಸಿದರು. ಮುದರ್ರಿಸ್ರಾದ ಶಾಹುಲ್ ಹಮೀದ್ ದಾರಿಮಿ ಕಾಸರಗೋಡ್ ದಿರಾಸತುಲ್ ಔಳಾಲ್ ಎಂಬ ವಿಷಯದಲ್ಲಿ ಮಾತನಾಡಿದರು.
ರೇಂಜ್ ಕಾರ್ಯದರ್ಶಿ ಹನೀಫ್ ದಾರಿಮಿ ಪಡೀಲ್ ಸ್ವಾಗತಿಸಿ ಪಿ.ಎಂ.ಎ ಬಶೀರ್ ದಾರಿಮಿ ಸಾಲ್ಮರ ವಂದಿಸಿದರು. ರೇಂಜ್ ಮ್ಯಾನೇಜ್ ಮೆಂಟ್ಅಧ್ಯಕ್ಷ ರಫೀಕ್ ಹಾಜಿ ಕೊಡಾಜೆ, ವಳತ್ತಡ್ಕ ಬದ್ರಿಯಾ ಜುಮಾ ಮಸೀದಿ ಗೌರವಾಧ್ಯಕ್ಷ ಸುಲೈಮಾನ್, ಬಳ್ಳೇರಿ ಅಧ್ಯಕ್ಷ ಅಹ್ಮದ್ ಹಾಜಿ, ಉಪಾಧ್ಯಕ್ಷ ಇಸ್ಮಾಯಿಲ್ಡೆಂಜಿಬಾಗಿಲು ಉಪಸ್ಥಿತರಿದ್ದರು.